ಬೆಂಗಳೂರು:ಕರ್ನಾಟಕದ ರಾಜಭವನಕ್ಕೆ ಬಾಂಬ್ ಬೆದರಿಕೆ ಕುರಿತು ಅಪರಿಚಿತ ಕರೆಯೊಂದು ಬಂದಿದ್ದು, ಬೆಂಗಳೂರು ಪೊಲೀಸರು ಹೈ ಅಲರ್ಟ್​ ಆಗಿದ್ದಾರೆ. ಹುಸಿ ಕರೆ ಬಂದ ಬೆನ್ನಲ್ಲೇ ತಕ್ಷಣ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಕಳುಹಿಸಿ, ಆವರಣದಲ್ಲಿ ಹುಡುಕಿದ ಪೊಲೀಸರಿಗೆ ಏನೂ ಪತ್ತೆಯಾಗಿಲ್ಲ ಎಂದು ಸದ್ಯದ ವರದಿ ತಿಳಿಸಿದೆ.
ಇದನ್ನೂ ಓದಿ:ಹವಾಮಾನ ವರದಿ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿ ಎಷ್ಟು ಚಳಿಯಿದೆ?
ಪ್ರಕರಣ ದಾಖಲಿಸಿಕೊಂಡು ಮತ್ತೆ ಶೋಧ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, “ಇದು ಹುಸಿ ಕರೆ. ನಾವು ಎಫ್‌ಐಆರ್ ದಾಖಲಿಸುತ್ತೇವೆ. ನಿನ್ನೆ ಮಧ್ಯರಾತ್ರಿ ಅಪರಿಚಿತ ಸಂಖ್ಯೆಯಿಂದ ನಮ್ಮ ಕಂಟ್ರೋಲ್ ರೂಂಗೆ ರಾಜಭವನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಬಂದಿದೆ. ನಾವು ಇಂದು ಮತ್ತೊಂದು ಬಾರಿ ಶೋಧ ನಡೆಸುತ್ತೇವೆ” ಎಂದು ಹೇಳಿದರು.
ಇತ್ತೀಚೆಗಷ್ಟೇ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬೆಂಗಳೂರಿನಾದ್ಯಂತ ಸುಮಾರು 44 ಶಾಲೆಗಳಿಗೆ ಅನಾಮಧೇಯ ಇಮೇಲ್‌ಗಳ ಮೂಲಕ ಬಂದಿತ್ತು. ಈ ಘಟನೆ ನಡೆದು 10 ದಿನಗಳು ಕೂಡ ಕಳೆದಿಲ್ಲ, ಅಷ್ಟರೊಳಗೆ ಇದೇ ರೀತಿಯ ಮತ್ತೊಂದು ಬೆದರಿಕೆ ಕರೆ ಮುನ್ನೆಲೆಗೆ ಬಂದಿದೆ.
BBKS10: ಶಾಲೆಗೆ ಚಕ್ಕರ್​ ಹಾಕುವಂತಿಲ್ಲ! ಶಿಕ್ಷಕಿ ತನಿಷಾ ಮಾತು ಕೇಳದ ವರ್ತೂರು ಮಾಡಿದ್ದು ಕಿತಾಪತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − five =
Remember me
