ಬೆಂಗಳೂರು:ಬೆಂಗಳೂರಿನ ಕೇಂದ್ರಿಯವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿದೆ. ಈ ಮೇಲ್ ಮಾಡಿರುವ ದುಷ್ಕರ್ಮಿಗಳು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
[email protected]ಎಂಬ ಇ-ಮೇಲ್ ಮೂಲಕ ಕೇಂದ್ರೀಯ ವಿದ್ಯಾಲಯ ಭಾರತೀಯ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿದೆ. ಸದ್ಯ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಕೂಲ್ ಒಳಗೆ ಬಾಂಬ್ ಇಟ್ಟಿದ್ದೀವಿ. ಬೆಳಗ್ಗೆ 10:20ಕ್ಕೆ ಬ್ಲಾಸ್ಟ್ ಆಗುತ್ತೆ ಎಂದು ಆಗಂತಕರು ಮೇಲ್ ಮಾಡಿ ಬೆದರಿಸಿದ್ದಾರೆ. ಮೇಲ್ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿ ಅಲರ್ಟ್ ಆಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಗೆ ಬಂದ ಪೊಲೀಸ್ ಹಾಗು ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ. ಸದ್ಯ ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರು ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2023ರ ಡಿಸೆಂಬರ್​ ತಿಂಗಳಲ್ಲೂ ಇದೇ ರೀತಿ ಕೆಲ ಕಿಡಿಗೇಡಿಗಳು ಬೆಂಗಳೂರಿನ 60 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರು.
ಬೈಕ್ ಚಕ್ರಕ್ಕೆ ಸಿಲುಕಿದ ಮಹಿಳೆಯ ಸೀರೆಯ ಸೆರಗು; ಆಮೇಲೆ ಏನಾಯ್ತು ನೋಡಿ

ಬ್ರೇಕ್ ಅಂತ ಎಕ್ಸಿಲೇಟ‌ರ್ ತುಳಿದ ಸೋನು ಗೌಡ; ಕಾರು ನುಜ್ಜುಗುಜ್ಜು, ಸೋನು ಆಸ್ಪತ್ರೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
