ಬೆಳಗಾವಿ:ಜಿಲ್ಲೆಯ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ ಎಂದು ದುಷ್ಕರ್ಮಿಗಳು ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ  ಬೆದರಿಕೆ ಪತ್ರ ಬರೆದಿದ್ದಾರೆ.
101 ವರ್ಷ ಹಳೆಯ,  ಕಾರಣಿಕ ಕ್ಷೇತ್ರ ಇದಾಗಿದ್ದು, ಇದನ್ನು ಸ್ಫೋಟ ನಡೆಸುವುದಾಗಿ ಹಿಂದಿಯಲ್ಲಿ ಬರೆದಿರುವ ಪತ್ರ ಬಂದಿದೆ. ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಹಿಂದಿ ಭಾಷೆಯಲ್ಲಿ ಎರಡು ಪತ್ರಗಳು ಬಂದಿದ್ದು, ಮುಂದಿನ 20, 21 ತಾರೀಖಿನ ಒಳಗಡೆ ರಾಮ‌ ಮಂದಿರವನ್ನ ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ.
ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆಯಾಗಿದೆ. ಎರಡೆನೇ ಪತ್ರ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆಯಾಗಿವೆ.  ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಓಲ್ಡ್ ಪಿಬಿ ರಸ್ತೆಯಲ್ಲಿರುವ ಶ್ರೀ ರಾಮಮಂದಿರ ಇದಾಗಿದ್ದು, ಪತ್ರವನ್ನು ಗಮನಿಸಿದ ದೇವಸ್ಥಾನದ ಅರ್ಚಕರು ನಿಪ್ಪಾಣಿ ನಗರ ಪೊಲೀಸರಿಗೆ ದೂರು  ನೀಡಿದ್ದಾರೆ.
ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹೈ ಅಲರ್ಟ್ ಆಗಿದ್ದು, ಮಂದಿರದ ಆವರಣದಲ್ಲಿ 14 ಸಿಸಿಟಿವಿಗಳನ್ನು ಅಳವಡಿಸಿಲಾಗಿದೆ. ಒಂದು ಡಿಆರ್ ಪೋಲಿಸ್ ತುಕಡಿಯನ್ನು ಬಂದೋಬಸ್ತ್​​ಗೆ ನಿಯೋಜಿಸಲಾಗಿದೆ.
ಬಿಲ್​​ ಗೇಟ್ಸ್ ಒಂದೆ​ ಒಂದೇ ಭೇಟಿಗೆ 5 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿದ ಚಾಯ್​ವಾಲಾ!

ಶೌಚಾಲಯದಲ್ಲಿ ಮದುವೆಯಾದ ಜೋಡಿ; ಈ ಸ್ಥಳವನ್ನು ಆಯ್ಕೆ ಮಾಡಲು ಕಾರಣ ವಿಶೇಷ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × four =
Remember me
