ಬೆಂಗಳೂರು:ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರ ಸಾರ್ವತ್ರಿಕ ವರ್ಗಾವರ್ಗಿ ಅವಧಿ ಮುಗಿದಿದ್ದರೂ ಶಿಫಾರಸು, ಬೇಡಿಕೆಗಳ ಮನವಿ, ಕೋರಿಕೆಗಳ ಪತ್ರದ ಸರದಿ ನಿಂತಿಲ್ಲ. ವರ್ಗಾವಣೆ ಪ್ರಸ್ತಾವನೆಗಳನ್ನು ಕಳುಹಿಸಕೂಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಬಂಧ ವಿಧಿಸಿದ್ದು, ಮೌಖಿಕ ಸೂಚನೆ ಸಾಲದು ಎಂಬಂತೆ ಆಯಾ ಇಲಾಖೆಗಳಿಗೆ ಅಧಿಕೃತ ಟಿಪ್ಪಣಿ ರವಾನಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಗೆ ಇಂತಹದೊಂದು ಟಿಪ್ಪಣೆ ಕಳುಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳಿಗೆ ಟಿಪ್ಪಣಿ ರವಾನಿಸಿರುವುದು ಬೆಳಕಿಗೆ ಬಂದಿದೆ. ಇಲಾಖೆಗೆ ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿ ಸಚಿವಾಲಯಕ್ಕೆ ಮಂಡಿಸದಂತೆ ಸೂಚನೆ ನೀಡಿರುವುದು ಈ ಟಿಪ್ಪಣಿಯ ಒಕ್ಕಣೆ.
ಒತ್ತಡ ತಂತ್ರ:ವೈಯಕ್ತಿಕ, ಕೌಟುಂಬಿಕ, ಆರೋಗ್ಯ ಇನ್ನಿತರ ಸಮಸ್ಯೆ ಮುಂದಿಟ್ಟುಕೊಂಡು ಅನುಕೂಲಕರ ಸ್ಥಳ ಬಯಸಿದವರು ಶಾಸಕರ ಬೆಂಬತ್ತಿದರೆ, ಕ್ಷೇತ್ರದವರಿಗೆ ಇಲ್ಲವೆಂದೂ ಹೇಳಲಾಗದ ಶಾಸಕರ ಮತ್ತು ಪ್ರಭಾವಿಗಳು ಸಚಿವರತ್ತ ದೌಡಾಯಿಸುತ್ತಿದ್ದಾರೆ. ಬಹುತೇಕ ಸಚಿವರು ಇಂತಹ ಪತ್ರಗಳನ್ನು ಕಂಡಕೂಡಲೇ ಸಾಧ್ಯವಿಲ್ಲ ಎಂದು ನಿಷ್ಠೂರವಾಗಿ ಹೇಳಿ ಸಾಗ ಹಾಕಿದ್ದರೂ ಮತ್ತೊಂದು ಬಾಗಿಲಿನಿಂದ ಈ ಕೋರಿಕೆಗಳು ಪ್ರವೇಶ ಪಡೆದಿರುತ್ತವೆ. ಕೆಲವು ನೈಜ, ಪ್ರಾಮಾಣಿಕ ಕಾರಣಗಳು, ಮಾನವೀಯತೆ ದೃಷ್ಟಿಯಿಂದ ಪರಿಗಣಿಸಬೇಕಾದ ಕೋರಿಕೆಗಳನ್ನು ಬದಿಗಿಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ವರ್ಗಾವಣೆ ಕೋರಿಕೆ ಸರದಿ ನಿಲ್ಲದಿರುವುದಕ್ಕೆ ಸಮೀಪದಲ್ಲಿರುವ ಚುನಾವಣೆಯೂ ಕಾರಣ ಎಂದು ಮೂಲಗಳು ಹೇಳಿವೆ.
ಸಿಬ್ಬಂದಿ ಸುಸ್ತು:ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಸಚಿವರ ಕಚೇರಿ ಕೊಠಡಿಗಳ ಬಾಗಿಲಿಗೆ ‘ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿದೆ. ಇಂತಹ ಯಾವುದೇ ಅರ್ಜಿ ಸ್ವೀಕರಿಸುವುದಿಲ್ಲ’ ಎಂಬ ಸೂಚನಾ ಪತ್ರ ರಾರಾಜಿಸುತ್ತಿವೆ. ಆದರೆ ಸಂಬಂಧಿಸಿದ ಸಚಿವರ, ಇಲಾಖೆಗಳಿಗೆ ಅರ್ಜಿ, ಶಿಫಾರಸುಗಳನ್ನು ಹಿಡಿದುಕೊಂಡು ಬರುವವರ ಸಂಖ್ಯೆ ಮಾತ್ರ ತಗ್ಗಿಲ್ಲ. ಇಲಾಖೆಗಳು ಸಲ್ಲಿಸುವ ಕಡತಗಳಲ್ಲಿ ಹೆಚ್ಚಿನ ಪಾಲು ವರ್ಗಾವಣೆ ಸಂಬಂಧಿತ ಪ್ರಸ್ತಾವನೆಗಳಿರಲಿದ್ದು, ಇವುಗಳನ್ನು ನಿರ್ವಹಿಸುವಲ್ಲಿ ಕಚೇರಿ ಸಿಬ್ಬಂದಿ ಸುಸ್ತು ಹೊಡೆದಿದ್ದಾರೆ. ಶಾಸಕರು ಅಥವಾ ಪ್ರಭಾವಿ ಮುಖಂಡರ ಜತೆಗೆ ಬಂದವರಿಗೆ ನೇರವಾಗಿ ಏನನ್ನೂ ಹೇಳಲಾಗದ ಸಚಿವರು ತಮ್ಮ ಮೇಲಿನ ಒತ್ತಡವನ್ನು ಸಿಎಂ ಕಚೇರಿ ಸಚಿವಾಲಯದ ಹೊತ್ತು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
