ಕೃಷಿಕರು, ಕಾರ್ವಿುಕರಿಗೆ ಹೆಗಲು, ದೇಗುಲಗಳಿಗೆ ಸ್ವಾಯತ್ತತೆಯ ನೆರಳು, ಅನ್ನದಾತರ ಆರೋಗ್ಯ ಸೇವೆಗಾಗಿ ಯಶಸ್ವಿನಿ ಮರು ಜಾರಿ, ಕಟ್ಟಡ ಕಾರ್ವಿುಕರಿಗೆ ಹೈಟೆಕ್ ಸಂಚಾರಿ ಕ್ಲಿನಿಕ್ ಜತೆಗೆ ರಿಯಾಯಿತಿ ಬಸ್ ಸವಾರಿ. ನೀರಾವರಿ ಯೋಜನೆಗಳಿಗೆ ಅನುದಾನ ಭರ್ಜರಿ. ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ, ಹಳ್ಳಿ ರಸ್ತೆ, ಕೆರೆ ಅಭಿವೃದ್ಧಿಗೆ ಕೋಟಿ ಕೋಟಿ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಆನ್​ಲೈನ್ ಕೋಚಿಂಗ್, ಧಾರ್ವಿುಕ ಯಾತ್ರೆ ಕೈಗೊಳ್ಳುವವರಿಗೆ ಸಹಾಯಧನ. ಪಡಿತರ ಇನ್ನಷ್ಟು ಉದಾರ. ಸಾಮಾನ್ಯರಿಗಿಲ್ಲ ತೆರಿಗೆ ಬರೆ, ಎಲ್ಲದಕ್ಕೂ ಸಾಲವೇ ಹೊರೆ, ಅಂಗೈನಲ್ಲೇ ಅರಮನೆ ತೋರಿಸದೆ, ಇರುವ ಸಂಪನ್ಮೂಲದಲ್ಲೇ ಸರ್ವರಿಗೂ ಸಮಪಾಲು ನೀಡುವ ದೂರದೃಷ್ಟಿ.. ಹಿತದೃಷ್ಟಿ..
ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್​ನ ಮುಖ್ಯಾಂಶ. ಈ ಆಯವ್ಯಯ 2023ರ ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದ ಮಾತ್ರಕ್ಕೆ ಜನರ ಮುಂದೆ ಭರವಸೆಗಳ ಗೋಪುರವನ್ನೇನು ಅವರು ಕಟ್ಟಿಲ್ಲ. 72 ಸಾವಿರ ಕೋಟಿ ರೂ.ಸಾಲ ಈ ಬಜೆಟ್​ನ ಬಂಡವಾಳ. ರಾಜ್ಯದ ಆರ್ಥಿಕ ಸ್ಥಿತಿಗತಿಯ ನೈಜ ಚಿತ್ರಣವನ್ನು ಅರಿತೇ ಬೊಮ್ಮಾಯಿ ರಕ್ಷಣಾತ್ಮಕ ಆಟ ಆಡಿರುವುದು ವಿಶೇಷ.
ಆನ್​ಲೈನ್ ಕೋಚಿಂಗ್:ಕೆಪಿಎಸ್ಸಿ, ಯುಪಿಎಸ್ಸಿ, ಎಸ್​ಎಸ್​ಸಿ, ಬ್ಯಾಂಕಿಂಗ್, ರೈಲ್ವೆ, ಸಿಡಿಎಸ್, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್​ಲೈನ್ ಕೋಚಿಂಗ್
ಪುಣ್ಯಕೋಟಿ:ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ ಯೋಜನೆ
ಪಡಿತರ ಉದಾರ:ಪಡಿತರದಲ್ಲಿ 5 ಕೆಜಿ ಅಕ್ಕಿ ಜತೆ 1 ಕೆಜಿ ರಾಗಿ ಅಥವಾ ಜೋಳ ವಿತರಣೆ, 4.34 ಕೋಟಿ ಫಲಾನುಭವಿಗಳಿಗೆ ಅನುಕೂಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eighteen =
Remember me
