ಹುಬ್ಬಳ್ಳಿ:ಪ್ರಧಾನಿ ಮೋದಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಕೊಟ್ಟ ವಿವಾದಾತ್ಮಕ ಹೇಳಿಕೆಗೆ ಇದೀಗ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಇನ್ನು ಸ್ವಲ್ಪ ದಿನ ಕಾದು ನೋಡಿ, ಮತಗಳ ಮೂಲಕ ಜನರೇ ಅವರ ಕಪಾಳಕ್ಕೆ ಹೊಡೀತಾರೆ ಎಂದಿದ್ದಾರೆ.
ಇದನ್ನೂ ಓದಿ:ರತಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ, ಹಲಗಿ ಹೊಡೆದು ಸಂಭ್ರಮಿಸಿದ ಮಕ್ಕಳು
“ಮೋದಿ..ಮೋದಿ ಅನ್ನೋ ಯುವಕರಿಗೆ ಕಪಾಳಕ್ಕೆ ಹೊಡಿರಿ ಅನ್ನೋ ತಂಗಡಗಿ ಹೇಳಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಮತಗಳ ಮುಖಾಂತರ ಜನರೇ ಇವರ ಕಪಾಳಕ್ಕೆ ಹೊಡೀತಾರೆ. ರಾಜ್ಯದಲ್ಲಿ ವಾತಾವರಣ ಉತ್ತಮವಾಗಿದೆ. ಎಲ್ಲೆಡೆ ಮೋದಿ ಪರ ಅಲೆ ಇದೆ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನವಾಗಿದೆ. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಪ್ರಚಾರಕ್ಕೆ ಬರ್ತಾರೆ. ರಾಷ್ಟ್ರೀಯ ನಾಯಕರು ಸಹ ಪ್ರಚಾರಕ್ಕೆ ಬರ್ತಾರೆ” ಎಂದರು.
“ರಾಷ್ಟ್ರೀಯ ನಾಯಕರ ಜತೆ ಸೆಲೆಬ್ರಿಟಿಗಳು ಕೂಡಾ ಪ್ರಚಾರಕ್ಕೆ ಸಾಥ್ ನೀಡುತ್ತಾರೆ. ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಟೂರ್ ಫಿಕ್ಸ್ ಆಗತ್ತದೆ. ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ. ಧಾರವಾಡ ಹಾಗೂ ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರಲಿದ್ದಾರೆ. ಪಕ್ಷಕ್ಕೆ ಜನಾರ್ದನ ರೆಡ್ಡಿ ಬಂದಿರೋದು ಮತ್ತಷ್ಟು ಬಲ ಬಂದಂತಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ” ಎಂದು ಹೇಳಿದರು.
ಇದನ್ನೂ ಓದಿ:ದಯವಿಟ್ಟು ಇದನ್ನೆಲ್ಲಾ ತರಬೇಡಿ! ಇದರ ಬದಲಿಗೆ… ಕಳಕಳಿ ಮನವಿ ಮಾಡಿಕೊಂಡ ಅನು ಅಕ್ಕ
“ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. .ಸುಪ್ರೀಂಗೆ ಹೋಗಿರೋದು ರಾಜಕೀಯ ತಂತ್ರಗಾರಿಕೆ ಅಷ್ಟೇ. ಯುಪಿಎ ಕಾಲದಲ್ಲಿ ಎಷ್ಟು ಹಣ ಬಂದಿದೆ ಎನ್​ಡಿಎ ಕಾಲದಲ್ಲಿ ಎಷ್ಟು ಎನ್​ಡಿಆರ್​ಎಫ್​ ಹಣ ಬಂದಿದೆ ಅನ್ನೋದು ಬಹಿರಂಗ ಪಡಿಸಲಿ” ಎಂದು ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ನೇರ ಸವಾಲು ಎಸಗಿದ್ದಾರೆ.
ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
