ಬೆಂಗಳೂರು(ಬೊಮ್ಮನಹಳ್ಳಿ):ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ವ್ಯವಸ್ಥೆಯನ್ನೊಳಗೊಂಡ ‘ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣ’ ನಿರ್ಮಾಣಕ್ಕೆ ಎಚ್.ಎಸ್.ಆರ್. ಬಡಾವಣೆಯಲ್ಲಿ ಚಾಲನೆ ಸಿಕ್ಕಿದೆ.
ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಹಯೋಗದಲ್ಲಿ ಬರೋಬ್ಬರಿ 4.25 ಕೋಟಿ ರೂಪಾಯಿ ವೆಚ್ಚದಲ್ಲಿ 7.24 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲ್ಲಿದ್ದು, ಈ ಕಾಮಗಾರಿಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಶನಿವಾರ ಚಾಲನೆ ನೀಡಿದರು.
ತೇಜಸ್ವಿ ಸೂರ್ಯ ಮಾತನಾಡಿ, ಬೊಮ್ಮನಹಳ್ಳಿ ಶಾಸಕರ ಕಾಳಜಿಯಿಂದ ಬಹಳ ದೊಡ್ಡ ಯೋಜನೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಾಣ ಆಗುತ್ತಿದೆ. ಶಾಸಕರು ತನ್ನ ಹುಟ್ಟುಹಬ್ಬದ ಅಂಗವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಡವರಿಗೆ ಹಲವು ಯೋಜನೆಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ, ಇಂತಹ ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಬೇಕಾಗಿದ್ದು, ಈ ಕ್ಷೇತ್ರದ ಜನತೆ ಭಾಗ್ಯವಂತರು ಎಂದು ಶ್ಲಾಘಿಸಿದರು.
ಬೊಮ್ಮನಹಳ್ಳಿ ಭಾಗದ ಜನರಿಗೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇತ್ತು. ಶೀಘ್ರವೇ ಅಂತಹ ಕ್ರೀಡಾಂಗಣ ಲೋಕಾರ್ಪಣೆ ಆಗಲಿದ್ದು, ಬಡವರು, ಸರ್ಕಾರಿ ಶಾಲೆ ಮಕ್ಕಳು ಈ ಕ್ರೀಡಾಂಗಣದ ಮೂಲಕ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಹುಟ್ಟುಹಬ್ಬ ಎನ್ನುವ ಹೆಸರಿನಲ್ಲಿ ಪ್ರತಿವರ್ಷ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ನಾನಾ ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದಾರೆ. ಈ ಬಾರಿ ಬಡಮಕ್ಕಳ ಆನ್​ಲೈನ್​ ಕ್ಲಾಸ್​ಗೆ ಅನುಕೂಲವಾಗಲೆಂದು ಉಚಿತವಾಗಿ ಟ್ಯಾಬ್​ಗಳನ್ನು ನೀಡಲಾಗಿದೆ. ಇಲ್ಲಿನ ಜನತೆ ನನ್ನನ್ನು ನಂಬಿ ಗೆಲ್ಲಿಸಿದ್ದಾರೆ. ಸಾಕಷ್ಟು ಅಡೆತಡೆ ಎದುರಾದರೂ ಅದೆಲ್ಲವನ್ನೂ ನಿಭಾಯಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಜ್ಜಾಗಿದ್ದೇವೆ. ಅಟಲ್ ಬಿಹಾರಿ ವಾಜಪೇಯಿ ಅವರು ಅಭಿವೃದ್ಧಿ ಹರಿಕಾರ. ಅವರ ಹೆಸರಿನಲ್ಲಿ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂದರೆ ಅದು ಬಿಜೆಪಿಯ ಭದ್ರಕೋಟೆ, ನಗರ ಪಾಲಿಕೆಯ 9 ಸದಸ್ಯರ ಪೈಕಿ 8 ಮಂದಿ ಬಿಜೆಪಿಯವರು. ಎಲ್ಲ ಸದಸ್ಯರೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬೊಮ್ಮನಹಳ್ಳಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ, ಮಾಜಿ ಉಪ ಮಹಾಪೌರ ರಾಮ್ ಮೋಹನ್ ರಾಜ್, ಪಾಲಿಕೆ ಮಾಜಿ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಜಲ್ಲಿ ರಮೇಶ್, ಶ್ರೀನಿವಾಸ್ ರೆಡ್ಡಿ, ರಾಜ್ಯ ಬಿಜೆಪಿ ಸ್ಲಮ್ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಆನಂದ್ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಮತ್ತಿತರರು ಇದ್ದರು.
ಇದೇ ವೇಳೆ ಬಡವರಿಗೆ ಬಿಬಿಎಂಪಿ ವತಿಯಿಂದ ಒಂಟಿಮನೆ ಹಕ್ಕುಪತ್ರ, ಉಚಿತ ಆರೋಗ್ಯ ಕಾರ್ಡ್, ಅಂಧಮಕ್ಕಳಿಗೆ ಕಂಬಳಿ, ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಆರೋಗ್ಯ ತಪಾಸಣಾ ಶಿಬಿರ, ಹೊಂಗಸಂದ್ರದಲ್ಲಿ ಕೊಳವೆಬಾವಿ ಉದ್ಘಾಟನೆ, ಶೌಚಗೃಹ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ನೀಲನಕ್ಷೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ಎಂ.ಶಾಸಕ ಸತೀಶ್ ರೆಡ್ಡಿ ವೀಕ್ಷಣೆ ಮಾಡಿದರು.
ಸ್ಕೆಚ್​ ಹಾಕಿ ಕುಮಾರಸ್ವಾಮಿ ಸರ್ಕಾರವನ್ನ ಕೆಡವಿದ್ದು ನಾನೇ… ಎಂದ ಯೋಗೇಶ್ವರ್​ ಆಡಿಯೋ ವೈರಲ್​

ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!

ಜೈಲಿಂದ ಹೊರ ಬಂದ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
