ಹುಬ್ಬಳ್ಳಿ: ಪಾಕಿಸ್ತಾನ ಪರ ಘೊಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿ- ಧಾರವಾಡ ಕಮಿಷ ನರೇಟ್ ಪೊಲೀಸರು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೇ ಬಿಡುಗಡೆ ಮಾಡಲು ಬಾಂಡ್ ಕೊಟ್ಟವರು ಯಾರು ಎಂಬ ಪ್ರಶ್ನೆ ಚಿದಂಬರ ರಹಸ್ಯವಾಗಿ ಉಳಿದಿದೆ.
ದೇಶದ್ರೋಹದಂಥ ಗಂಭೀರ ಪ್ರಕರಣದಲ್ಲಿ ಬಂಧಿತರನ್ನು 24 ಗಂಟೆಯೊಳಗೆ ನ್ಯಾಯಾಧೀಶರೆದುರು ಹಾಜರುಪಡಿಸಬೇಕಿತ್ತು. ಅದನ್ನು ಬಿಟ್ಟು ಪೊಲೀಸ್ ಆಯುಕ್ತರು ಸಿಆರ್​ಪಿಸಿ 169 ಅನ್ವಯ ಬಾಂಡ್ ಮೇಲೆ ಭಾನುವಾರ ಬಿಡುಗಡೆಗೊಳಿಸಿದ್ದರು. ಸಂಜೆ ಹಿಂದುಪರ ಸಂಘಟನೆಗಳ ತೀವ್ರ ಪ್ರತಿಭಟನೆ ಬಳಿಕ ಮತ್ತೆ ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ‘ಕಾಲೇಜು ಆಡಳಿತ ಮಂಡಳಿ ಯವರೇ ಬಾಂಡ್ ಕೊಟ್ಟಿದ್ದರು’ ಎಂದು ಹೇಳಿಕೆ ನೀಡಿದ್ದರು. ‘ದೇಶದ್ರೋಹಿಗಳ ವಿರುದ್ಧ ನಾವು ಬಾಂಡ್ ಕೊಟ್ಟಿಲ್ಲ. ಅವರನ್ನು ಅಮಾನತು ಮಾಡಿದ್ದೇವೆ’ ಎಂದು ಕಾಲೇಜು ಪ್ರಾಂಶುಪಾಲ ಬಸವರಾಜ ಅನಮಿ ಲಿಖಿತ ಹೇಳಿಕೆ ನೀಡಿದ್ದರು. ಹೀಗಾಗಿ ಪೊಲೀಸ್ ಆಯುಕ್ತರ ಹೇಳಿಕೆ ಗೊಂದಲ ಸೃಷ್ಟಿಸಿತ್ತು. ಆಯುಕ್ತರು ಈವರೆಗೆ ಆ ರಹಸ್ಯ ಬಯಲು ಮಾಡಿಲ್ಲ.
ಹಿಂಡಲಗಾ ಜೈಲಿಗೆ ಆರೋಪಿಗಳು: ಬಂಧನಕ್ಕೀಡಾ ಗಿರುವ ವಿದ್ಯಾರ್ಥಿಗಳನ್ನು ಭದ್ರತೆ ದೃಷ್ಟಿಯಿಂದ ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದಿಂದ ಮಂಗಳವಾರ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸು ವಂತೆ ನ್ಯಾಯಾಲಯ ಸೋಮವಾರ ಆದೇಶಿಸಿತ್ತು. ಉಪ ಕಾರಾಗೃಹದಲ್ಲಿ ವಿಶೇಷ ಕೊಠಡಿ, ವಿಶೇಷ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಬಾಸಿತ್ ಸೋಫಿ, ತಾಲೀಬ ಮಜೀದ್ ಹಾಗೂ ಅಮೀರ್ ಮೊಯಿನುದ್ದೀನ್ ವಾನಿ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಸುರಕ್ಷತೆ ಇರುವ ಪ್ರತ್ಯೇಕ ಸೆಲ್​ನಲ್ಲಿ ಮೂವರನ್ನು ಇಡಲಾಗಿದೆ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಕೃಷ್ಣಕುಮಾರ್ ತಿಳಿಸಿದ್ದಾರೆ.
ರಾತ್ರಿ ಭಯದಲ್ಲೇ ಕಾಲ ಕಳೆದರು: ದೇಶದ್ರೋಹ ಘೊಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಸೋಮವಾರ ಕೋರ್ಟ್ ಆವರಣದಲ್ಲೇ ಕೆಲ ಸಂಘಟನೆಯ ಸದಸ್ಯರು ಹಲ್ಲೆಗೆ ಯತ್ನಿಸಿದ್ದರು. ಆರೋಪಿಗಳಿದ್ದ ವಾಹನದ ಮೇಲೆ ಚಪ್ಪಲಿ, ಬೂಟು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಭಯ ಕಾಡುತ್ತಿತ್ತು. ಸಹ ಕೈದಿಗಳು ಹಲ್ಲೆ ಮಾಡಬಹುದೆಂಬ ಆತಂಕದಿಂದ ರಾತ್ರಿ ನಿದ್ರೆ ಮಾಡದೇ ಕುಳಿತಿದ್ದರು ಎಂದು ತಿಳಿದು ಬಂದಿದೆ.
ಜಾಮೀನು ಅರ್ಜಿ ಸಲ್ಲಿಸಿಲ್ಲ: ಆರೋಪಿಗಳು ಈವರೆಗೆ ಜಾಮೀನು ಕೋರಿ ಯಾವುದೇ ಅರ್ಜಿ ಸಲ್ಲಿಸಿಲ್ಲ. ಆರೋಪಿಗಳ ಪರ ಯಾವ ವಕೀಲರೂ ವಕಾಲತ್ತು ವಹಿಸಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ತಲುಪಿದ ಪಾಲಕರು: ದೇಶದ್ರೋಹಿ ಘೊಷಣೆ ಕೂಗಿದ ವಿದ್ಯಾರ್ಥಿಗಳ ಪಾಲಕರು ಹಾಗೂ ಸ್ನೇಹಿತರು ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿ ಹು-ಧಾ ಪೊಲೀಸ್ ಆಯುಕ್ತರನ್ನು ನವನಗರದ ಕಚೇರಿಯಲ್ಲಿ ಭೇಟಿ ಮಾಡಿ ರ್ಚಚಿಸಿದರು. ಮಾಧ್ಯಮಗಳ ಜತೆ ಮಾತನಾಡಲು ಅವರಿಗೆ ಅವಕಾಶ ನೀಡದ ಪೊಲೀಸರು, ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.
ಚಟುವಟಿಕೆ ಚುರುಕು
ದೇಶದ್ರೋಹದಡಿ ಬಂಧಿಸಲ್ಪಟ್ಟಿರುವ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣವನ್ನು ಗೋಕುಲ ರೋಡ್ ಪೊಲೀಸ್ ಠಾಣೆಯಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆರೋಪಿಗಳು ಗ್ರಾಮೀಣ ಠಾಣೆ ವ್ಯಾಪ್ತಿಯ ಕೊಟಗೊಂಡಹುಣಸಿ ಗ್ರಾಮ ವ್ಯಾಪ್ತಿಯ ಹಾಸ್ಟೆಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ. ಹಾಗಾಗಿ, ಈ ಪ್ರಕರಣವನ್ನು ವರ್ಗಾಯಿಸಲಾಗಿದೆ. ಮಂಗಳವಾರ ಅಧಿಕೃತ ಆದೇಶದ ಪ್ರತಿ ದೊರೆತಿದ್ದು, ಚಟುವಟಿಕೆಗಳು ಚುರುಕುಗೊಂಡಿವೆ.
ಕೇಂದ್ರದ ಸೂಚನೆ ಇತ್ತೆ?
ದೇಶಾದ್ಯಂತ ಕಾಶ್ಮೀರಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೇಶದ್ರೋಹಿ ಘೊಷಣೆ ಕೂಗಿರುವ ಪ್ರಕರಣದಲ್ಲಿ ಒಮ್ಮೆಲೇ ಕಠಿಣ ಕ್ರಮ ಕೈಗೊಂಡಲ್ಲಿ, ದೇಶದ ಇತರ ಕಡೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎಂದು ಭಾವಿಸಿದ್ದ ಕೇಂದ್ರ ಗೃಹ ಇಲಾಖೆ ಈ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸುವಂತೆ ಆಂತರಿಕ ಸೂಚನೆ ನೀಡಿತ್ತು ಎನ್ನಲಾಗಿದೆ. ಹಾಗಾಗಿ, ಪೊಲೀಸ್ ಆಯುಕ್ತರು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಈ ರೀತಿ ನಡೆದು ಕೊಂಡಿದ್ದಾರೆ ಎಂಬುದು ಬಲ್ಲ ಮೂಲಗಳ ಮಾಹಿತಿ.
ನ್ಯಾಯಾಧೀಶರ ಅನುಮತಿ ಪಡೆದು ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ತನಿಖೆ ಹಂತದಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ. ಬಾಂಡ್ ಕುರಿತು ನೋ ಕಾಮೆಂಟ್ಸ್. ಕಾನೂನು ರೀತಿಯಲ್ಲಿ ತನಿಖೆ ಮುಂದುವರಿದಿದೆ.
| ಆರ್. ದಿಲೀಪ ಪೊಲೀಸ್ ಆಯುಕ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
