ಬೆಂಗಳೂರುಮನುಷ್ಯನ ಜೀವನದಲ್ಲಿ ಪುಸ್ತಕಗಳು ಸ್ಫೂರ್ತಿ, ಆತ್ಮವಿಶ್ವಾಸವನ್ನು ಹೆಚ್ಚಿಸುವ ಜತೆಗೆ ಅತ್ಯುತ್ತಮ ಸಹಚರರಾಗಿ, ಮಾರ್ಗದರ್ಶಿಯಾಗಿ ಹಾಗೂ ಜೀವನದ ಸ್ನೇಹಿತನಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.
ಎನ್.ಆರ್. ಕಾಲೋನಿಯಲ್ಲಿರುವ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ವೀರಲೋಕ ಪ್ರಕಾಶನ ಪ್ರಕಟಿಸಿರುವ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡಕ್ಕೆ ಅನುವಾದಿಸಿರುವ, ತಮ್ಮ ತತ್ತ ವರಾತಿರಿಕ್ಕಿಲ್ಲ ಕಥಾಸಂಕಲನದ ಅನುವಾದಿತ ಕೃತಿ ‘ಗಿಳಿಯು ಬಾರದೇ ಇರದು’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೆಲವು ಪುಸ್ತಕಗಳು ಜನರ ಜೀವನದಲ್ಲಿ ಹೊಸ ತಿರುವು ತರುತ್ತವೆ. ಹಾಗಾಗಿ, ಪ್ರತಿಯೊಬ್ಬರು ಜೀವನದಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದ ನಿಜವಾದ ಸ್ನೇಹಿತನನ್ನು ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಗೋವಾ ರಾಜ್ಯಪಾಲರ ಪುಸ್ತಕ ಕನ್ನಡಕ್ಕೆ ಅನುವಾದವಾಗಿ ಬಿಡುಗಡೆಯಾಗಿರುವುದು ಸಂತಸ ತಂದಿದೆ. ಈ ಪುಸ್ತಕವನ್ನು ಮಲಯಾಳಂ ನಲ್ಲಿ ಬರೆಯಲಾಗಿದ್ದು, ಈ ಪುಸ್ತಕದ ಅಗಾಧ ಯಶಸ್ಸಿನಿಂದಾಗಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವುದು ಸಂತೋಷದ ವಿಚಾರ. ಈ ಪುಸ್ತಕದಲ್ಲಿ ಗ್ರಾಮೀಣ ಜೀವನ, ಜೀವನ ಮೌಲ್ಯಗಳು, ಮಾನವೀಯ ದೃಷ್ಟಿಕೋನವನ್ನು ಸಣ್ಣ ಕಥೆಗಳ ಮೂಲಕ ಅತ್ಯಂತ ಸರಳವಾಗಿ ಪ್ರಸ್ತುತಪಡಿಸಲಾಗಿದೆ. ಈ ಪುಸ್ತಕವು ಕನ್ನಡ ಭಾಷೆಯಲ್ಲೂ ಜನಪ್ರಿಯವಾಗಲಿದೆ ಎಂಬ ನಂಬಿಕೆ ಇದೆ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಶ್ರೀಧರನ್ ಅವರ ಆ ಪ್ರದೇಶದ ಕಥೆಗಳು ಆಸಕ್ತಿ ಕೆರಳಿಸುತ್ತವೆ. ಅವರ ಕಥೆಗಳಲ್ಲಿ ಮಹಾಕಾವ್ಯದ ಅಂಶಗಳನ್ನು ಸಿಂಪಡಿಸಿದ ಹಾಗೆ ಇರುತ್ತದೆ. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇವು ಬಿಟ್ಟು ಹೋಗುವ ಕಥೆಗಳಲ್ಲ . ಒಂದು ಭಾಷೆಯಲ್ಲಿದ್ದ ಕಥೆಗಳು, ಬೇರೆ ಬೇರೆ ಭಾಷೆಗಳಿಗೆ ಹೋಗಿ ಕಥನದ ಶಕ್ತಿ, ಜಾದೂಗಾರಿಕೆ, ಆಳ-ಅಗಲ ಇದೆಲ್ಲ ಬಹಳ ಸುಂದರವಾಗುತ್ತವೆ. ಇಂತಹ ಒಂದು ಕಥಾ ಸಂಕಲನವನ್ನು ಕನ್ನಡಕ್ಕೆ ಬಂದಿದ್ದು, ಸಂತೋಷವಾಗಿದೆ. ಇದಕ್ಕಾಗಿ ನಾನು ಶ್ರೀಧರನ್ ಅವರಿಗೆ ಮತ್ತು ಅನುವಾದಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚೆನ್ನಂಗಿಹಳ್ಳಿ, ಸಾಹಿತಿ ಶೋಭಾ ರಾವ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಸೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಭಾಷಾಂತರ ಒಂದು ಕಲೆ. ಒಂದು ಕಥೆಯನ್ನು ಅನುವಾದ ಮಾಡುವವರಿಗೆ ಕಲಾತ್ಮಕ ಸಾಮರ್ಥ್ಯವೂ ಇರಬೇಕು. ಆಗ ಅನುವಾದ ಯಶಸ್ವಿಯಾಗುತ್ತದೆ. ದೀರ್ಘ ಇತಿಹಾಸ ಮತ್ತು ಘನತೆಯನ್ನು ಹೊಂದಿರುವ ಕನ್ನಡ ಭಾಷೆಗೆ ನನ್ನ ಕೃತಿ ಅನುವಾದವಾಗಿದೆ. ಈ ಮೂಲಕ ನಾನು ಕೂಡ ಕನ್ನಡ ಸಾಹಿತ್ಯದ ಭಾಗವಾಗಿದ್ದೇನೆ– ಪಿ.ಎನ್. ಶ್ರೀಧರನ್ ಪಿಳ್ಳೈ, ಗೋವಾ ರಾಜ್ಯಪಾಲ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
