ಬೆಂಗಳೂರು:ವಾರದಿಂದೀಚೆಗೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವವರಿಂದ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದೊಳಗೆ ಬರಲು ಅಪೇಕ್ಷಿಸಿ ಅರ್ಜಿ ಸಲ್ಲಿಸಿರುವವರ ಪೈಕಿ ಎಲ್ಲರಿಗೂ ಏಕಾಏಕಿ ಅವಕಾಶ ಕೊಡದೆ ಆದ್ಯತೆ ಮೇಲೆ ಅನುಮತಿ ನೀಡಲು ನಿರ್ಧರಿಸಿದೆ. ಜತೆಗೆ ಮಹಾರಾಷ್ಟ್ರ, ಕೇರಳ, ಗುಜರಾತ್ ಹಾಗೂ ತಮಿಳುನಾಡಿನಿಂದ ಬರುವವರಿಗೆ ತಡೆ ಹಾಕಲು ಮುಂದಾಗಿದೆ.
ಸೋಮವಾರ ನಡೆದ ಅಧಿಕಾರಿಗಳು, ಸಚಿವರ ಸಭೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ವಿಷಯದಲ್ಲಿ ತಮ್ಮ ನಿರ್ಧಾರ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಒಂದಷ್ಟು ಚರ್ಚೆಯೂ ನಡೆಸಲಾಯಿತು ಎಂದು ಮೂಲ ಗಳು ತಿಳಿಸಿವೆ.ಹೊರ ರಾಜ್ಯದಿಂದ ಬರುವವರಿಗೆ ಅವಕಾಶ ನೀಡದೇ ಇದ್ದರೆ ಟೀಕೆಗಳು ಬರುತ್ತವೆ, ಒಂದು ವೇಳೆ ಅವಕಾಶ ನೀಡಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿ ಅಪಾಯ ಎದುರಾಗಬಹುದು ಮತ್ತು ನಮ್ಮ ಆರೋಗ್ಯ ಕಾರ್ಯ ಕರ್ತರು ಹೆಚ್ಚು ಅಪಾಯಕ್ಕೆ ಸಿಲುಕಬಹುದು. ಹೀಗಾಗಿ ಹೆಚ್ಚು ಸೋಂಕಿತರಿರುವ ನಾಲ್ಕು ರಾಜ್ಯಗಳಿಂದ ಬರುವವರನ್ನು ಕೆಲ ವಾರಗಳ ಮಟ್ಟಿಗೆ ನಿರ್ಬಂಧಿಸುವುದೇ ಒಳಿತೆಂಬ ತೀರ್ಮಾನಕ್ಕೆ ಬರಲಾಯಿತೆಂದು ತಿಳಿದುಬಂದಿದೆ.
ಇದನ್ನೂ ಓದಿ:ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದ ಚೀನಾ ಮತ್ತು ಡಬ್ಲ್ಯುಎಚ್​ಒ
ಗಂಭೀರ ಕಾಯಿಲೆಗೆ ಚಿಕಿತ್ಸೆ, ಕೆಲಸ ಕಳೆದುಕೊಂಡು ಅತಂತ್ರರಾದವರು, ಹಾಸ್ಟೆಲ್ ಇಲ್ಲದೆ ಸಮಸ್ಯೆ ಎದುರಿಸಿರುವ ವಿದ್ಯಾರ್ಥಿಗಳು, ಗರ್ಭಿಣಿಯರಿಗೆ ಆದ್ಯತೆ ಮೇಲೆ ರಾಜ್ಯದೊಳಗೆ ಕರೆಸಿಕೊಳ್ಳುವ, ಉಳಿದವರಿಗೆ ನಂತರ ಅವಕಾಶ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇಷ್ಟರ ನಡುವೆ ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯದವರ ಆಗಮನದಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್​ಗೊಳಪಡಿಸಿದರೂ ಜಿಲ್ಲಾಡಳಿತಗಳು ಸಾಕಷ್ಟು ಶ್ರಮ ಹಾಕಬೇಕಾಗಿದೆ. ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿ ಕಣ್ಗಾವಲು ಇಡಬೇಕಾಗಿದೆ. ಸೋಂಕು ಇಲ್ಲದ ಹಸಿರು ವಲಯದಲ್ಲೂ ಸೋಂಕು ಕಾಣಿಸಿದೆ. ಸಹಜವಾಗಿ ಜನರು ಭಯಭೀತರಾಗುತ್ತಾರೆ ಮತ್ತು ಜಿಲ್ಲಾಡಳಿತ ಪೂರ್ಣ ಪ್ರಮಾಣದಲ್ಲಿ ಸೋಂಕಿತರ ನಿರ್ವಹಣೆ ಬಗ್ಗೆ ಕೆಲಸ ಮಾಡ ಬೇಕಾಗುತ್ತದೆ. ಈ ಕಾರಣಕ್ಕೆ ಕೆಲ ದಿನಗಳ ಕಾಲ ಹೊರ ರಾಜ್ಯದವರನ್ನು ನಿಯಂತ್ರಿಸುವುದೇ ಒಳಿತು ಎಂದು ಜಿಲ್ಲಾಡಳಿತಗಳು ಅಭಿಪ್ರಾಯಪಟ್ಟಿದ್ದವು.
ರಾಜ್ಯದಲ್ಲಿ ಕರೊನಾ ನಿಯಂತ್ರಿಸಬೇಕಾದ್ದರಿಂದ ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಮೇ 31ರವರೆಗೆ ಅವಕಾಶ ಇರುವುದಿಲ್ಲ.
| ಬಿ.ಎಸ್. ಯಡಿಯೂರಪ್ಪಸಿಎಂ
ಬೆಂಗಳೂರು:ಷರತ್ತು ಸಹಿತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರ ಕೆಲವು ನಿಯಮ ಪಾಲನೆ ಕಡ್ಡಾಯಗೊಳಿಸಿದೆ. ಪ್ರಮುಖವಾಗಿ ಕಂಟೇನ್ಮೆಂಟ್ ಝೋನ್​ಗಳಲ್ಲಿ ಮತ್ತು ಕರ್ಫ್ಯೂ ವೇಳೆ ನಿಯಮ ಪಾಲಿಸದವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ತೀರ್ವನಿಸಿದೆ. ಸೋಮವಾರ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ರಿಯಾಯಿತಿ-ವಿನಾಯಿತಿಗಳನ್ನು ಸ್ಪಷ್ಟಪಡಿಸಲಾಗಿದೆ. ಹಾಗೇ ವಿವಿಧ ವಿಚಾರಗಳಲ್ಲಿ ಸಾಮಾನ್ಯ ನಿರ್ವಹಣಾ ವಿಧಾನ ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದ್ದಾರೆ. ಪ್ರತಿ ದಿನ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಮತ್ತು ಭಾನುವಾರಗಳಲ್ಲಿ ದಿನವಿಡೀ ಕರ್ಫ್ಯೂ ಇರಲಿದೆ. ಈ ವೇಳೆ ಅಲೆದಾಡುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. ಒಂದು ವೇಳೆ ಸಿಕ್ಕಿಬಿದ್ದರೆ ಅವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸುವ ಅವಕಾಶವಿದೆ ಎಂದಿದ್ದಾರೆ. ಮೇ 19ರಿಂದ ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಸ್ವಾಯತ್ತ ಸಂಸ್ಥೆ, ನಿಗಮ ಮಂಡಳಿ ಕಚೇರಿಗಳಲ್ಲಿ ಶೇ.100 ಅಧಿಕಾರಿ-ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿನ ಪ್ರಮುಖಾಂಶ
ಸಭೆಯಲ್ಲಿ ಸಂಬಂಧಿತ ಸಚಿವರು- ಅಧಿಕಾರಿಗಳು ಸಮಸ್ಯೆ ಮತ್ತು ಪರಿಹಾರೋಪಾಯಗಳ ಬಗ್ಗೆ ವಿವರಣೆ ನೀಡಿದರು. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಕರ ಸಂಖ್ಯೆಗೆ ಮಿತಿ ಹಾಕಿದ್ದರಿಂದ ಸಾರಿಗೆ ಸಂಸ್ಥೆಗೆ ಆಗುವ ನಷ್ಟ ಸರ್ಕಾರದಿಂದಲೇ ಭರ್ತಿ ಮಾಡಿಕೊಡಲು ಸಿಎಂ ತೀರ್ಮಾನಿಸಿದರು. ಹೀಗಾಗಿ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ, ಪ್ರಯಾಣಿಕರಿಗೆ ಹೊರೆ ಆಗುವುದಿಲ್ಲ. ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಸಲಹೆಗಳು ಬಂದವು. ಹಾಗೆಯೇ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಲಾಕ್​ಡೌನ್ ಸಡಿಲಿಕೆ ಅನಿವಾರ್ಯವಾದರೂ, ಸಡಿಲಿಕೆ ಮಾಡಿದರೆ ಮತ್ತಷ್ಟು ಸಮಸ್ಯೆಗಳ ಸೃಷ್ಟಿಗೆ ಅವಕಾಶ ನೀಡಿದಂತಾಗಲಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ.
ಕೇಂದ್ರದ ಮಾರ್ಗಸೂಚಿ ಪ್ರಕಾರ ಹೋಟೆಲ್, ಜಿಮ್ ಮಾಲ್, ಆರಂಭಕ್ಕೆ ಅವಕಾಶ ನೀಡುವುದು ಬೇಡ ಎಂಬ ತೀರ್ವನಕ್ಕೂ ಇದೇ ವೇಳೆ ಬರಲಾಯಿತು. ಹೊರ ರಾಜ್ಯ-ದೇಶಗಳಿಂದ ರಾಜ್ಯಕ್ಕೆ ಹಿಂದಿರುಗುವ ಜನರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವ ಬಗ್ಗೆ, ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.
ಚಾಲಕ-ನಿರ್ವಾಹಕರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ: ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರು-ನಿರ್ವಾಹಕರು ಕರ್ತವ್ಯ ನಿರ್ವಹಣೆ ವೇಳೆ ಕರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟರೆ ಅವರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ಕರೊನಾ ಭೀತಿ ನಡುವೆ ಮಂಗಳವಾರದಿಂದ ಬಸ್ ಸಂಚಾರ ಆರಂಭಿಸಲಾಗುತ್ತಿದ್ದು, ರಸ್ತೆ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕರೊನಾ ಬಗ್ಗೆ ಸಿಬ್ಬಂದಿ ಮತ್ತು ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಪ್ರಾಯೋಗಿಕ ಮೌಲ್ಯಮಾಪನ ಪ್ರಕ್ರಿಯೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
