ಧಾರವಾಡ:ಇಂದು ವಿಶ್ವದೆಲ್ಲೆಡೆ ಅಮ್ಮಂದಿರ ದಿನ. ಆದರೆ ಎರಡು ದಿನಗಳ ಹಿಂದೆಯಷ್ಟೇ ಕರೊನಾದಿಂದಾಗಿ ತಾಯಿಯನ್ನು ಕಳೆದುಕೊಂಡಿದ್ದ ಈ ಸಹೋದರರು ಅಮ್ಮಂದಿರ ದಿನವಾದ ಇಂದು ಏಕಕಾಲಕ್ಕೆ ನಿಧನರಾದರು. ಹೀಗಾಗಿ ಮೂರೇ ದಿನಗಳಲ್ಲಿ ಈ ಕುಟುಂಬದಲ್ಲಿ ಮೂವರು ಕೋವಿಡ್​-19 ಸೋಂಕಿಗೆ ಬಲಿಯಾದಂತಾಗಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಕುಟುಂಬವೊಂದು ಇಂಥದ್ದೊಂದು ದುರಂತವನ್ನು ಕಂಡಿದೆ. ಹಾರೋಬೆಳವಡಿಯ ಕಡ್ಲಿ ಕುಟುಂಬದ ತಾಯಿಯೊಬ್ಬರ ಜತೆಗೆ ಇಬ್ಬರು ಮಕ್ಕಳನ್ನೂ ಕರೊನಾ ಬಲಿ ಪಡೆದಿದೆ. ಸಹೋದರರಿಬ್ಬರೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ:ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…
ಶಾಂತಮ್ಮ ಕಡ್ಲಿ (75) ಅವರು ಎರಡು ದಿನಗಳ ಹಿಂದೆ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದರು. ಶಾಂತಮ್ಮ ಅವರ ಪುತ್ರರಾದ ಕಲ್ಲಪ್ಪ‌ ಕಡ್ಲಿ (49), ನಾಗನಗೌಡ ಕಡ್ಲಿ (42) ಅವರು ಇಂದು ಬೆಳಗ್ಗೆ ಒಂದೇ ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ. ಶಾಂತಮ್ಮ ಅವರು ನಿಧನರಾದ ಬಳಿಕ ಮಕ್ಕಳಿಬ್ಬರಲ್ಲಿ ಕೋವಿಡ್​-19 ಸೋಂಕು ಇರುವ ಕುರಿತು ವರದಿ ಬಂದಿತ್ತು.
‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ

ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + ten =
Remember me
