ಚಿಕ್ಕಮಗಳೂರು:ಕೆಎಸ್​ಆರ್​ಟಿಸಿ ಬಸ್ಸಿನ ಗಾಜಿನ ಮೇಲೆ ಖಾಲಿ ಗಾಜಿನ ಬಾಟೆಲ್​ ಎಸೆದು ಯುವಕರು ಪುಂಡಾಟ ಮೆರೆದಿರುವ ಘಟನೆ ಕಡೂರು ತಾಲೂಕಿನ ಬೀರೂರು ಸಮೀಪದ ‌ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಿನ್ನೆ (ಜು.07) ನಡೆದಿದೆ.
ಬಸ್ಸಿನ ಮುಂಭಾಗದ ಗಾಜಿಗೆ ಬಾಟಲಿ ಎಸೆದಿದ್ದರಿಂದ ಗಾಜು ಪುಡಿ ಪುಡಿಯಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಲಕನ ಮೇಲೆಯೇ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಬಾಟಲಿ ಎಸೆದವರು ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದರು. ಕಾರಿನಿಂದಲೇ ಬಾಟಲಿ ಎಸೆದಿದ್ದಾರೆ.
ಇದನ್ನೂ ಓದಿ:ಸೈಕಲ್‌ನಲ್ಲಿ ಏಡ್ಸ್ ಕುರಿತು ವಿಶ್ವದೆಲ್ಲೆಡೆ ಜಾಗೃತಿ: ಜೀವನಕ್ಕಾಗಿ ದೇವರ ಆಭರಣ ಕದ್ದು ಜೈಲು ಸೇರಿದ
ನಾಲ್ವರ ವಿರುದ್ಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕಿರಣ್, ಸತೀಶ್, ಸಚಿನ್ ಮತ್ತು ಸುಪ್ರೀತ್ ಎಂದು ಗುರುತಿಸಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಕಡೂರು ವಿಭಾಗದ ಚಾಲಕ ಸತೀಶ್, ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಎಸ್​ಆರ್​ಟಿಸಿ ಬಸ್​, ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಸಿಕ್ತು ಗುಡ್​ ನ್ಯೂಸ್​!

ಸೈಕಲ್‌ನಲ್ಲಿ ಏಡ್ಸ್ ಕುರಿತು ವಿಶ್ವದೆಲ್ಲೆಡೆ ಜಾಗೃತಿ: ಜೀವನಕ್ಕಾಗಿ ದೇವರ ಆಭರಣ ಕದ್ದು ಜೈಲು ಸೇರಿದ

ಬಾಲಕಿಯ ಹಾಡನ್ನು ವೈರಲ್​ ಮಾಡೋದಾಗಿ ನಂಬಿಸಿದ ಯೂಟ್ಯೂಬರ್​: ಲಾಡ್ಜ್​ನಲ್ಲಿ ನಡೆಯಿತು ಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
