ಪುತ್ತೂರು:ಹೊಟ್ಟೆ ನೋವೆಂದು ಚಿಕಿತ್ಸೆಗೆ ಬಂದ ಹುಡುಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಸೃಜಿತ್(17) ಮೃತ ಹುಡುಗ. ಸುಳ್ಯದ ಪೈಚಾರ್ ಶಾಂತಿನಗರ ನಿವಾಸಿಯಾಗಿದ್ದಾನೆ. ಈತ ಹೊಟ್ಟೆ ನೋವೆಂದು ಚಿಕಿತ್ಸೆಗೆ ಬಂದು ಸಾವುನ್ನಪ್ಪಿದ್ದಾನೆ.
ಸೃಜಿತ್​ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಶನಿವಾರದಂದು ಪುತ್ತೂರಿನ ಚೇತನಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದನು. ಯುವಕನ ಶಸ್ತ್ರಚಿಕಿತ್ಸೆ ಮಾಡಿದ ಪುತ್ತೂರಿನ ಖ್ಯಾತ ವೈದ್ಯ, ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಂತರ ರಾತ್ರಿ ವೇಳೆ ಯುವಕನ ಸ್ಥಿತಿ ಗಂಭೀರವಾಗಿದೆ ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಹುಡುಗ ಮೃತ ಪಟ್ಟಿದ್ದಾನೆ.
ವೆಂಟಿಲೇಟರ್​ನ ವ್ಯವಸ್ಥೆ ಇಲ್ಲದೆ ಚೇತನಾ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯಿಂದ ಯುವಕ ಸಾವನ್ನಪ್ಪಿದ್ದಾನೆಂಬ ಆರೋಪ ಕೇಳಿ ಬಂದಿದೆ. ಮೃತ ಯುವಕನ ಶವವನ್ನ ಆಸ್ಪತ್ರೆ ಮುಂದಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ವೈದ್ಯಾಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಪ್ರತಿಭಟಿಸಿದ ನಾಗರಿಕರು, ಶಸ್ತ್ರಚಿಕಿತ್ಸೆ ಮಾಡಿ ಲೋಪವೆಸಗಿದ ಖ್ಯಾತ ವೈದ್ಯರನ್ನ ಬಂಧಿಸಲು ಪಟ್ಟು ಹಿಡಿದಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ನೀವು ಎಣ್ಣೆ ತ್ವಚೆಯಿಂದ ಕಷ್ಟಪಡುತ್ತಿದ್ದೀರಾ?..ಈ ಟಿಪ್ಸ್​ಗಳಿಂದ ಪರಿಹಾರ ಕಂಡುಕೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eleven =
Remember me
