ಉಡುಪಿ:ಸಾಕುನಾಯಿಗಾಗಿ ಹುಡುಗ-ಹುಡುಗಿ ಮಧ್ಯೆ ರಸ್ತೆಬದಿಯಲ್ಲೇ ಜಗಳವಾಗಿದ್ದು, ಕೊನೆಗೆ ಇಬ್ಬರ ನಡುವಿನ ವಾಗ್ವಾದ ತಪ್ಪಿಸಲು ಪೊಲೀಸರು ಕೂಡ ಮಧ್ಯಪ್ರವೇಶಿಸಬೇಕಾಯಿತು.
ಉಡುಪಿಯ ಅಜ್ಜರಕಾಡಿನಲ್ಲಿರುವ ಪೆಟ್​ ಚಾಯ್ಸ್​ ಮಳಿಗೆ ಮುಂದೆಯೇ ಈ ಜಗಳ ನಡೆದಿದೆ. ಯುವಕನೊಬ್ಬ ಸಾಕುನಾಯಿಯೊಂದಿಗೆ ಪೆಟ್​ ಚಾಯ್ಸ್​ ಮಳಿಗೆಗೆ ಬಂದಿದ್ದ. ನಾಯಿಗೆ ಬೇಕಾದ ಆಹಾರ ಖರೀದಿಗಾಗಿ ಈತ ಬಂದಿದ್ದ ವೇಳೆ ನಾಯಿಯನ್ನು ಕಂಡ ಯುವತಿಯೊಬ್ಬಳು ಅದು ನನ್ನ ನಾಯಿ, ನಾನು ಸಾಕಿದ್ದ ನಾಯಿ ಎಂದು ಜಗಳ ತೆಗೆದಿದ್ದಾಳೆ.
ಆದರೆ ಇದಕ್ಕೊಪ್ಪದ ಯುವಕ ಇದು ನಾನು ಖರೀದಿಸಿದ್ದ ನಾಯಿ, ಇದು ನನ್ನ ನಾಯಿ ಎಂದು ಪ್ರತಿವಾದ ಮಾಡಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಬಗೆಹರಿಸಲು ಮುಂದಾದರು.
ಇದನ್ನೂ ಓದಿ:ಹೆಂಡತಿಯೊಂದಿಗೆ ಜಗಳ, ಇಬ್ಬರು ಗಂಡಂದಿರ ಸಾವು!
ತಕ್ಷಣಕ್ಕೆ ನಾಯಿಯ ನಿಜವಾದ ಮಾಲೀಕರು ಯಾರು ಎಂಬುದನ್ನು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ತನಿಖೆಗೆ ಮುಂದಾಗಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಯಾರೋ ನಾಯಿಯನ್ನು ಕದ್ದಿದ್ದು, ಅದನ್ನು ಈ ಯುವಕನಿಗೆ ಮಾರಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಇವರಿಬ್ಬರ ನಡುವಿನ ಜಗಳದಿಂದ ನಾಯಿ ಗೊಂದಲಕ್ಕೆ ಒಳಗಾದರೂ ಕೊನೆಗೆ ಚಿಕ್ಕಂದಿನಿಂದ ಸಾಕಿದ್ದಳೆನ್ನಲಾದ ಯುವತಿಯೊಂದಿಗೇ ನಾಯಿ ತೆರಳಿದೆ.
ಅಂಗಡಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ; ಬಾಲಕಿ ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಸಾವು!

ಭೀಕರ ಅಪಘಾತ: ತಂದೆ-ಮಗಳು ಸ್ಥಳದಲ್ಲೇ ಸಾವು, ತಾಯಿಯ ಸ್ಥಿತಿ ಗಂಭೀರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:14 + one =
Remember me
