ಧಾರವಾಡ:ಸಾವು ಎನ್ನುವುದನ್ನು ಇನ್ನೂ ಮನುಷ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ಪ್ರಕೃತಿಯ ವಿಸ್ಮಯವೇ ಸರಿ. ಜೀವ ಗಟ್ಟಿಯಾಗಿದ್ದರೆ ಯಾರೂ ಎಂತಹ ಪರಿಸ್ಥಿತಿಯಿಂದ ಬೇಕಾದರೂ ಪಾರಾಗಿ ಬರಬಹುದು ಎನ್ನುವ ಮಾತಿದೆ. ಆದರೆ ಜೀವ ಗಟ್ಟಿ ಇರುವುದು ಎಂದರೆ ಏನು? ಎಲ್ಲವೂ ನಿಗೂಢ… ಅಂತಹದ್ದೇ ನಿಗೂಢವೂ ಆಶ್ಚರ್ಯಕರವೂ ಆಗಿರುವ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. ಇನ್ನೇನು ಅಂತ್ಯಸಂಸ್ಕಾರದ ಕಾರ್ಯಗಳನ್ನು ಶುರು ಮಾಡಬೇಕು ಎನ್ನುವಷ್ಟರಲ್ಲಿ ಬಾಲಕ ಬದುಕಿ ಬಂದಿರುವ ಘಟನೆ ಇದು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸವರಾಜ್ ಎಂಬ ಒಂದೂವರೆ ವರ್ಷದ ಬಾಲಕ ಮೃತ ಪಟ್ಟಿದ್ದಾನೆ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ಹೇಳಿದ್ದರು. ಈ ಬಾಲಕನನ್ನು ಆಗಸ್ಟ್ 13ರಂದು ಕಿಮ್ಸ್ ಆಸ್ಪತ್ರೆಗೆ ಅನಾರೋಗ್ಯದ‌ ಕಾರಣ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮಗು ಆಕ್ಸಿಜನ್ ಸಪೋರ್ಟ್ ಮೇಲಿತ್ತು. ವೈದ್ಯರು ಆಕ್ಸಿಜನ್ ತೆಗೆದರೆ‌ ಮಗು ಸಾವನ್ನಪ್ಪಬಹುದು ಎಂದು ಹೇಳಿದ್ದರು. ಆದರೆ ದುರದೃಷ್ಟವಶಾತ್‍ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿದ್ದಾನೆಂದು ನಂಬಿ ಆತನ ಶರೀರವನ್ನು ಕುಟುಂಬಸ್ಥರು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಅಂತ್ಯಕ್ರಿಯೆ ಕಾರ್ಯ ಶುರು ಮಾಡಿದ್ದು ಈ ವೇಳೆ ಬಾಯಿಗೆ ನೀರು ಹಾಕಿದಾಗ ಬಾಲಕ ಉಸಿರಾಡುತ್ತಿದ್ದಾನೆ ಎಂಬುವುದು ತಿಳಿದು ಬಂದಿದೆ. ಈ ಸಂದರ್ಭ ಬಾಲಕ ಕೈ ಕಾಲು ಅಲುಗಾಡಿಸಿದ್ದಾನೆ. ಹೀಗಾಗಿ ಮತ್ತೇ ಆಸ್ಪತ್ರೆಗೆ ಬಾಲಕನನ್ನು ಪೋಷಕರು ತಂದಿದ್ದಾರೆ. ಅಂತೂ ಬಾಲಕ ಬದುಕಿ ಬಂದಿದ್ದು ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
