ಆನೇಕಲ್:ಅಪಾರ್ಟ್‌ಮೆಂಟ್​ವೊಂದರ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಬನ್ನೇರುಘಟ್ಟ ಸಮೀಪದ ಕಾಳೇನ ಅಗ್ರಹಾರದ ಎಂಎಲ್ಎ ಲೇಔಟ್ ಸಿವಿಕೆ ಮೀನಾಕ್ಷಿ ಎಲಿಗೆನ್ಸ್ ಅಪಾರ್ಟ್‌ಮೆಂಟ್ ನಿವಾಸಿ ಅದೀತ್ (12) ಸಾವಿಗೀಡಾದ ಬಾಲಕ.
ಕಳೆದ 2 ತಿಂಗಳ ಹಿಂದೆ ಅಪಾರ್ಟ್‌ಮೆಂಟ್‌ಗೆ ಬಾಡಿಗೆಗೆ ಅದೀತ್ ಪಾಲಕರು ಬಂದಿದ್ದರು. ತಾಯಿ ಮಗ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ ನೆಲೆಸಿದ್ದರು. ತಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು.
ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಅದೀತ್, ಶನಿವಾರ ಶಾಲೆಗೆ ಹೋಗಿ ಮಧ್ಯಾಹ್ನ ಮನೆಗೆ ವಾಪಸ್ ಬಂದಿದ್ದಾನೆ. ಫ್ಲ್ಯಾಟ್​ನ ಹಾಲ್​ನಲ್ಲಿ ತಾಯಿ ಕುಳಿತಿದ್ದರು. ಊಟ ಮಾಡಿ ಆಟವಾಡುತ್ತ ಅದೀತ್, ಬಾಲ್ಕನಿಗೆ ಬಂದು ಕಿಟಕಿಯಲ್ಲಿ ಕೆಳಗೆ ಇಣುಕಿ ನೋಡಿದ್ದಾನೆ. ಕಾಲು ಜಾರಿ ಕೆಳಗೆ ಬಿದ್ದಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ.
ತಕ್ಷಣ ಬಾಲಕನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಬಾಲಕ ಅಸುನೀಗಿದ್ದಾನೆ. ಮಗನ ಸಾವಿನ ವಿಷಯ ಕೇಳುತ್ತಿದ್ದಂತೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ಹುಳಿಮಾವು ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2 ಬೈಕ್​​​ಗಳ ಮಧ್ಯೆ ಭೀಕರ ಅಪಘಾತ; ಎರಡೂ ಬೈಕ್​ ಸವಾರರ ತಲೆಗೆ ಪೆಟ್ಟು, ಒಂದೇ ಹೆಸರಿನ ಇಬ್ಬರೂ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
