ಬೆಂಗಳೂರು:ಈ ಕಾಲೇಜಿನಲ್ಲಿ ಯುವತಿಯೊಬ್ಬಳಿಗೆ ಹಾಡಹಗಲೇ ಯುವಕನೊಬ್ಬ ಚಾಕುವಿನಿಂದ ಇರಿದಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ತಕ್ಷಣ ಯುವತಿಯ ಪರಿಸ್ಥಿತಿ‌ ಗಂಭೀರವಾಗಿದ್ದು ರಾಜಾನುಕುಂಟೆ ಆಸ್ವತ್ರೆಗೆ ಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಯುವತಿ ಮೃತಳಾಗಿದ್ದಾಳೆ.
ಈ ಭೀಕರ ಘಟನೆ ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ. ಚಾಕು‌ ಇರಿತಕ್ಕೆ ಪ್ರೀತಿ ಕಾರಣ ಎಂದು ತಿಳಿದು ಬಂದಿದೆ.
ಈ ಯುವಕ ಯುವತಿಗೆ ಚಾಕು ಇರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಚಾಕು ಇರಿತಕ್ಕೆ ಬಲಿಯಾದ ವಿದ್ಯಾರ್ಥಿನಿ ಲಯಸ್ಮಿತಾ (19) ಮೊದಲನೇ ವರ್ಷ ಬಿ.ಎಸ್.ಸಿ ಓದುತ್ತಿದ್ದಳು. ಈಕೆ ಕೋಲಾರ ಮೂಲದವಳು. ಈ ವಿದ್ಯಾರ್ಥಿನಿಗೆ ಇರಿದ ಪವನ್ ಕಲ್ಯಾಣ್ (19) ಪರ್ಸ್ಟ್ ಇಯರ್ ಬಿಸಿಎ ವಿದ್ಯಾರ್ಥಿ. ಈತ ಬೇರೆ ಕಾಲೇಜಿನಲ್ಲಿ ಓದುತಿದ್ದ. ಒಟ್ಟಿನಲ್ಲಿ ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ.
ಪ್ರೆಸಿಡೆನ್ಸಿ ಕಾಲೇಜು ಕಳೆದ ಕೆಲವು ದಿನಗಳಿಂದ ಹಲವು ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. 8 ದಿನದ ಹಿಂದೆ ಬ್ಯಾಟು ಹಿಡಿದು ಓಡಾಡಿಕೊಂಡು ಕಾಲೇಜಿನಲ್ಲಿ ಅಟ್ಟಹಾಸ ವಿದ್ಯಾರ್ಥಿಗಳು ಮೆರೆದಿದ್ದರು. ಇದೀಗ ಅದೇ ಕಾಲೇಜಿನಲ್ಲಿ ಯುವತಿ ಮೇಲೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಹಲವು ಅಪರಾಧಗಳು ಆಗುತ್ತಿದ್ದರೂ ರಾಜನುಕುಂಟೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಮೃತ ಲಯಾಸ್ಮೀತಾ (19) ಕೋಲಾರ ಮುಳುಬಾಗಿಲು ಕಾಚಿಪುರ ಗ್ರಾಮದವರು ಮತ್ತು ಪಾಗಲ್ ಪ್ರೆಮಿ ಪವನ್ ಕಲ್ಯಾಣ್ (19) ನೃಪತುಂಗ ಯುನಿವರ್ಸಿಟಿ ವ್ಯಾಸಂಗ ಮಾಡ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
