ಬೆಂಗಳೂರು:ಸ್ನೇಹಿತನೊಂದಿಗೆ ಪಬ್ ​ಜಿ ಆಟವಾಡಲು ಯಲಹಂಕ ರೈಲ್ವೇ ನಿಲ್ದಾಣದ ಕಂಟ್ರೋಲ್ ರೂಮ್​ಗೆ ಹುಸಿ ಬಾಂಬ್ ಕರೆ ಮಾಡಿದ 12 ವರ್ಷದ ಬಾಲಕ ಫಜೀತಿಗೆ ಸಿಲುಕಿದ್ದಾನೆ.
ಬಾಗಲೂರು ವಿನಾಯಕನಗರದ ನಿವಾಸಿ 12 ವರ್ಷದ ಬಾಲಕ ಪಬ್ ​​ಜಿ ಆಟದ ಹುಚ್ಚು ಬೆಳೆಸಿಕೊಂಡಿದ್ದ. ಸದಾ ಪಾಲಕರ ಮೊಬೈಲ್​​ಫೋನ್​ನಲ್ಲಿ ಪಬ್ ​ಜಿ ಆಟವಾಡುತ್ತಿದ್ದ. ಪಾಲಕರು ಇತ್ತೀಚೆಗೆ ಫೋನ್ ಕೊಡದಿದ್ದರೂ, ಅವರ ಕಣ್ತಪ್ಪಿಸಿ ಸ್ನೇಹಿತನೊಂದಿಗೆ ಆಗಾಗ ಪಬ್ ​ಜಿ ಆಟವಾಡುತ್ತಿದ್ದ. ಬಾಲಕನ ಸ್ನೇಹಿತ ಮಾ.30ರಂದು 2 ಗಂಟೆಗೆ ಯಲಹಂಕ ರೈಲ್ವೆ ನಿಲ್ದಾಣದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಬ್​ ಜಿ ಆಡಲು ಯಾರೂ ಇರುವುದಿಲ್ಲ ಎಂದು ಬೇಸರಗೊಂಡಿದ್ದ. ಹೇಗಾದರೂ ಮಾಡಿ ಸ್ನೇಹಿತ ರೈಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು ಎಂದುಕೊಂಡು ಚಿಂತಿಸುತ್ತಿದ್ದಾಗ ಬಾಲಕನ ತಲೆಗೆ ಹೊಳೆದಿದ್ದು ಹುಸಿಬಾಂಬ್ ಕರೆ.
ಅದರಂತೆ ಮಾ.30ರಂದು ಮಧ್ಯಾಹ್ನ 11.30ರಲ್ಲಿ ತಾಯಿಯ ಕೀ ಪ್ಯಾಡ್ ಮೊಬೈಲ್​ಫೋನ್​ನಿಂದ ಯಲಹಂಕ ರೈಲ್ವೇ ಕಂಟ್ರೋಲ್ ರೂಮ್​ಗೆ ಕರೆ ಮಾಡಿ, ‘ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದ.
ಬಾಂಬ್‌ಸ್ಕ್ವಾಡ್‌ನಿಂದ ಪರಿಶೀಲನೆ:ಕೂಡಲೇ ಎಚ್ಚೆತ್ತುಕೊಂಡ ರೈಲ್ವೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ, ಬಾಂಬ್‌ಸ್ಕ್ವಾಡ್, ಶಾನದಳದೊಂದೊಗೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಹೆಚ್ಚೂಕಡಿಮೆ ಒಂದೂವರೆ ಗಂಟೆ ನಿಲ್ದಾಣದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಎಲ್ಲೂ ಬಾಂಬ್ ಇರುವುದು ಪತ್ತೆಯಾಗಿರಲಿಲ್ಲ. ನಂತರ ಕಂಟ್ರೋಲ್ ರೂಮ್​ಗೆ ಕರೆ ಬಂದ ಮೊಬೈಲ್​ಫೋನ್​ ನಂಬರ್‌ನ್ನು ಪರಿಶೀಲಿಸಿದಾಗ ಬಾಲಕನ ಪಾಲಕರ ಸುಳಿವು ಸಿಕ್ಕಿತ್ತು. ಕೂಡಲೇ ಅವರ ಮನೆಗೆ ತೆರಳಿ ವಿಚಾರಿಸಿದಾಗ ಬಾಲಕ ಕೃತ್ಯ ಎಸಗಿರುವುದು ದೃಢಪಟ್ಟಿತ್ತು.
ಸ್ನೇಹಿತನಿಗೆಂದು ಕರೆ ಮಾಡಿದ್ದೆ:‘ನನ್ನ ಸ್ನೇಹಿತನಿಗೆ ಕರೆ ಮಾಡಿ ಬಾಂಬ್ ಇದೆ ಎಂದು ಹೆದರಿಸಲು ಮುಂದಾಗಿದ್ದೆ. ಅದು ತಪ್ಪಿ ರೈಲ್ವೇ ಕಂಟ್ರೋಲ್ ರೂಮ್​ಗೆ ಕರೆ ಹೋಗಿದೆ ಎಂದು ವಿಚಾರಣೆ ವೇಳೆ ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಕರೆ ಮಾಡಿರುವುದು ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಪೊಲೀಸರು, ಪ್ರಕರಣ ದಾಖಲಿಸದೇ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಬಾಲಕನ ಪಾಲಕರು ಅಂಗಡಿ ಇಟ್ಟುಕೊಂಡಿದ್ದು, ಪೊಲೀಸರು ಮನೆಗೆ ಬಂದಾಗಲೇ ಪುತ್ರನ ಕೃತ್ಯ ಗಮನಕ್ಕೆ ಬಂದಿದೆ.
ಒಂದೊಪ್ಪತ್ತಲ್ಲೇ ಭಾರಿ ವಿರೋಧಕ್ಕೆ ಮಣಿದ ಶ್ರೀಲಂಕಾ ಸರ್ಕಾರ; ಆಗಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
