ಹಾವೇರಿ:ಬಾಲಕನೊಬ್ಬ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಆರು ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ. ಹನ್ನೆರಡು ವರ್ಷದ ಈ ಹುಡುಗನ ನಾಪತ್ತೆ ಪ್ರಕರಣ ಇದೀಗ ಕುತೂಹಲ ಕೆರಳಿಸಿದ್ದು, ಒಂದಷ್ಟು ಅನುಮಾನಗಳನ್ನೂ ಹುಟ್ಟುಹಾಕಿದೆ. ಹಾವೇರಿ ಜಿಲ್ಲೆಯ ಅಶ್ವಿನ್ ನಗರ ಒಂದನೇ ಅಡ್ಡರಸ್ತೆಯಲ್ಲಿನ ನಿವಾಸಿ, ವಕೀಲರಾಗಿರುವ ಜಗದೀಶ ಗೌಡ ಮಲ್ಲಿಕೇರ ಎಂಬುವವರ ಪುತ್ರ ತೇಜಸ್ ಗೌಡ ಮಲ್ಲಿಕೇರಿ ನಾಪತ್ತೆಯಾಗಿರುವ ಹುಡುಗ. ಈತ ಜಗದೀಶ ಅವರ ಏಕೈಕ ಪುತ್ರನಾಗಿದ್ದು, ಆರು ದಿನಗಳಿಂದ ಹುಡುಕಾಟ ನಡೆದಿದ್ದರೂ ಬಾಲಕನ ಕುರಿತ ಸುಳಿವು ಸಿಕ್ಕಿಲ್ಲ.
ಸಿಸಿಟಿವಿ ಕ್ಲಿಪ್ಪಿಂಗ್ ಗಮನಿಸಿದರೆ ಅದರಲ್ಲಿನ ದೃಶ್ಯ ಬಾಲಕನ ನಾಪತ್ತೆ ಕುರಿತು ಅನುಮಾನ ಮೂಡಿಸುವಂತಿದೆ. ದ್ವೇಷ ಅಥವಾ ಸೇಡು ತೀರಿಸಿಕೊಳ್ಳಲು ಯಾರಾದರೂ ಈ ಹುಡುಗನನ್ನು ಅಪಹರಿಸಿರಬಹುದಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಇದ್ದ ಒಬ್ಬನೇ ಮಗ ಕಣ್ಣಿಗೆ ಕಾಣಿಸದಂತಾಗಿರುವುದರಿಂದ ತೀವ್ರ ದುಃಖಕ್ಕೆ ಒಳಗಾಗಿರುವ ಜಗದೀಶ ಗೌಡ, ಮನೆಯಲ್ಲಿ ಪುತ್ರನ ಫೋಟೋ ಹಿಡಿದುಕೊಂಡು, ‘ಮಗನೇ ಬಾರೋ.. ನೀನಿಲ್ದೆ ನಾವಿಲ್ವೋ..’ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮತ್ತೊಂದೆಡೆ ಮಗನ ನಾಪತ್ತೆಯಿಂದ ಆಘಾತಕ್ಕೆ ಒಳಗಾಗಿರುವ ತಾಯಿ ಅನಾರೋಗ್ಯಗೊಂಡಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಮಾನಸಿಕ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ನಾಪತ್ತೆ ಸಂಬಂಧ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ಪತ್ತೆಗಾಗಿ ಪೊಲೀಸರು ಕಾರ್ಯನಿರತರಾಗಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
1ರಿಂದ 5ನೇ ತರಗತಿ ಶಾಲೆ ಆರಂಭ: ನಿಯಮ ಉಲ್ಲಂಘಿಸಿದ ಸ್ಕೂಲ್​ಗಳ ಪರವಾನಗಿ ರದ್ದು!


ಪ್ರೇಯಸಿಯನ್ನು ಖುಷಿಪಡಿಸಲು ಪತ್ನಿಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಹರಿಬಿಟ್ಟ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
