ಬೆಂಗಳೂರು:ಇದು ನರಹಂತಕನ ಕ್ರೂರತೆಗೆ ನಲುಗಿದ ತಾಯಿ-ಮಗುವಿವನ ಕರುಣಾಜನಕ ಕಥೆ. ಸಾವು ಬದುಕಿನ ನಡುವೆ ಹೋರಾಡುತ್ತ ಅರೆಜೀವದಲ್ಲಿ ತಾಯಿ ಬಿದ್ದಿದ್ದಾಳೆ, ಅಯ್ಯೋ ಅಮ್ಮ… ಎನ್ನುತ್ತಾ ಓಡಿಬಂದ ಮಗುವನ್ನೂ ಕೊಂದು ಶವ ಬಿಟ್ಟು ಅಲ್ಲಿಂದ ದುಷ್ಕರ್ಮಿ ಎಸ್ಕೇಪ್​ ಆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಂತಹ ಮನಕಲಕುವ ಘಟನೆ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯ ಜ್ಞಾನಗಂಗಾನಗರದಲ್ಲಿ ನಡೆದಿದೆ. ಆರೋಪಿ ಗಾದಿಲಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಗಂಡ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಪತ್ನಿ ಮತ್ತು ಪುಟ್ಟ ಮಗು ಇಬ್ಬರೇ ಇದ್ದರು. ಆ ಮನೆಗೆ ಎಂಟ್ರಿ ಕೊಟ್ಟ ಗಾದಿಲಿಂಗಪ್ಪಗೆ ಮಹಿಳೆ ಮೈಮೇಲಿನ ಚಿನ್ನದ ಮೇಲೆ ಕಣ್ಣುಬಿದ್ದಿದೆ. ಚಿನ್ನ ನೋಡಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲು ಯತ್ನಿಸುವಾಗ ‘ಅಮ್ಮ… ಎಂದು ಅಳುತ್ತಾ ಓಡಿಬಂದ ಪುಟ್ಟ ಕಂದನನ್ನೂ ಕೊಂದು ಹಾಕಿದ್ದಾನೆ.
ತಾಯಿ ಅರೆಜೀವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮಗು ಆಕೆಯ ಪಕ್ಕದಲ್ಲೇ ಶವವಾಗಿ ಬಿದ್ದಿತ್ತು. ಈ ದೃಶ್ಯಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಸ್ಥಳಕ್ಕೆ ಬಂದ ಜ್ಞಾನಭಾರತಿ ಠಾಣೆ ಪೊಲೀಸರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಮಗು ಕೊಂದು-ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆರೋಪಿ ಎಸ್ಕೇಪ್​ ಆಗುತ್ತಿರುವ ದೃಶ್ಯ ಮನೆ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯ ಚಿಕಿತ್ಸೆಗೆ ಇನ್​ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ತಂಡ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮರೆದಿದೆ. ಚಿಕಿತ್ಸೆಗಾಗಿ ಈ ತಂಡ ಒಂದು ಲಕ್ಷ ರೂ. ಖರ್ಚು ಮಾಡಿದೆ.
ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
