ಗದಗ:ನಗರದ ಕೆ.ಸಿ. ರಾಣಿ ರಸ್ತೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ.11 ರಂದು 65 ವರ್ಷದ ಪುಷ್ಪಾ ಹೆಬಸೂರ ಎಂಬ ಮಹಿಳೆಯ ಹತ್ಯೆಯಾಗಿತ್ತು.
ಏನಾದರೂ ಕೆಲಸ ಮಾಡು ಎಂದು ತಮ್ಮ ತಂಗಿಯ ಮಗನಿಗೆ ಹೇಳಿದ್ದೇ ಪುಷ್ಪಾ ಜೀವಕ್ಕೆ ಮುಳುವಾಯಿತು. ಅವರ ಸಹೋದರಿಯ ಪುತ್ರ ಶಿವಮೊಗ್ಗ ಮೂಲದ ಧನುಷ್ ತನ್ನ ಸ್ನೇಹಿತ ವಿನಯನೊಂದಿಗೆ ಸೇರಿ ದೊಡ್ಡಮ್ಮ ಪುಷ್ಪಾ ಅವರನ್ನು ಕಲ್ಲಿನಿಂದ ಜಜ್ಜಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾಡಿ ಕೊಲೆಗೈದಿದ್ದರು ಎಂದು ಎಸ್ಪಿ ಯತೀಶ ತಿಳಿಸಿದ್ದಾರೆ.
ಪುಷ್ಪಾ ಅವರ ಸಹೋದರಿ ಶಿವಮೊಗ್ಗದಲ್ಲಿ ವಾಸವಾಗಿದ್ದು, ಅವರ ಪುತ್ರನಾದ ಧನುಷ್ ಕೆಲಸ ಮಾಡದೆ ತಿರುಗಾಡುತ್ತಿದ್ದ. ಈ ಕುರಿತು ಪುಷ್ಪಾ ಅವರು ತಮ್ಮ ಸಹೋದರಿಗೆ ಕರೆ ಮಾಡಿ ಮಗನಿಗೆ ಬುದ್ಧಿವಾದ ಹೇಳಿಸಿದ್ದರು. ಇದರಿಂದ ಕೋಪಗೊಂಡಿದ್ದ ಧನುಷ್ ತನ್ನ ಸ್ನೇಹಿತ ವಿನಯ ಜತೆಗೆ ಗದಗ ನಗರಕ್ಕೆ ಆಗಮಿಸಿ ಪುಷ್ಪಾ ಅವರ ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ತನಿಖೆ ನಡೆಸಿದ ಬಡಾವಣೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಯತೀಶ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
