ಹುಬ್ಬಳ್ಳಿ:ಈಜಲು ತೆರಳಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನಡೆದಿದೆ. ಇಂದಿರಾ ನಗರದ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕ.
ಬಾಲಕ ಕೆರೆಯಲ್ಲಿ ಮುಳುಗಿ ಮೂರು ದಿನಗಳು ಕಳೆದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿದ್ಯಾನಗರ ಠಾಣೆ ಪೊಲೀಸರಿಂದ ಕೆರೆಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಮಂಡ್ಯ:ಜಾಯಿಂಟ್ ವ್ಹೀಲ್​ನಲ್ಲಿ ಕೂದಲು ಸಿಲುಕಿ, ಬಾಲಕಿಯ ತಲೆಯ ಚರ್ಮವೇ ಕಿತ್ತು ಬಂದ ಪ್ರಕರಣ ಸಂಬಂಧಿಸಿದಂತೆ ಇದೀಗ ಜಾಯಿಂಟ್ ವ್ಹೀಲ್​ನ ಮಾಲೀಕ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಇದೀಗ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.ಸಂತ್ರಸ್ತ ಬಾಲಕಿ ಶ್ರೀವಿದ್ಯಾಳ ಸಂಬಂಧಿ ಪೂಜಾ ಎಂಬುವವರು ಕೊಟ್ಟ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜಾಯಿಂಟ್ ವ್ಹೀಲ್ ಆಟಿಕೆಯ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಮುಖ್ಯ ಕಾರ್ಯ ನಿರ್ವಾಹಕ ತಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ ಸಂದೀಪ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮುಂಜಾಗ್ರತ ಕ್ರಮ ಕೈಗೊಂಡು ಅನುಮತಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 337ರ ಅಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:ತಾನು ಮ್ಯಾನೆಜರ್​ ಆಗಿ ಕೆಲಸ ಮಾಡುತ್ತಿದ್ದ ಬ್ಯಾಂಕ್​ನಿಂದಲೇ ಕೋಟಿ ಕೋಟಿ ಹಣ ದರೋಡೆ ಮಾಡಿರುವ ಸಜಿಲಾ ಗುರುಮೂರ್ತಿ ಎಂಬಾಕೆಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್​ನ ಮ್ಯಾನೇಜರ್ ಆಗಿದ್ದ ಸಜಿಲಾ ಗುರುಮೂರ್ತಿ, ತನ್ನ ಹುದ್ದೆಯ ಲಾಭವನ್ನು ಬಳಸಿಕೊಂಡು ಗ್ರಾಹಕರ ಅನುಮತಿ ಇಲ್ಲದೆ 4.92 ಕೋಟಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾಳೆ.
ಬೆಂಗಳೂರು:ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ ಖತರ್ನಾಕ್​ ವಂಚಕನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಲೋಕೇರ್ಶ ಬಂಧಿತ ಆರೋಪಿ. ಖಾಲಿ ನಿವೇಶನಗಳಿಗೆ ಸೇಲ್ ಅಗ್ರಿಮೆಂಟ್ ಹಾಕಿಸಿಕೊಂಡು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ವಂಚಿಸುತ್ತಿದ್ದ. ಈತನ ಕೃತ್ಯ ಗೊತ್ತಾಗಿ ಬಂಧಿಸಲು ಹೋದರೆ ಜನಪ್ರತಿನಿಧಿಗಳ ಕೈಯಲ್ಲಿ ಪೋನ್ ಕಾಲ್ ಮಾಡಿಸುತ್ತಿದ್ದ. ಬೆಂಗಳೂರಿನಲ್ಲಿ ಈವರೆಗೆ ಆರೋಪಿ ಲೋಕೇಶ್ ಮೇಲೆ 7 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
