ಬಾಲಿವುಡ್​ನ ಟಾಪ್​ ಐದು ಸೂಪರ್​ಸ್ಟಾರ್​ಗಳಲ್ಲಿ ಆಮಿರ್​ ಖಾನ್​, ಅಕ್ಷಯ್​ ಕುಮಾರ್​ ಕೂಡ ಇದ್ದಾರೆ. ಆದರೆ ಇಂತಹ ದೊಡ್ಡ ಸ್ಟಾರ್​ಗಳಿಗೂ ಪ್ರೇಕ್ಷಕರು ಬಾಯ್ಕಾಟ್​ ಬಿಸಿ ಮುಟ್ಟಿಸಿದ್ದಾರೆ. ಹೌದು, ಆಮಿರ್​ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ರ ಹಿಂದು ವಿರೋಧಿ ಹೇಳಿಕೆಗಳು “ಲಾಲ್​ ಸಿಂಗ್​ ಛಡ್ಡಾ’ ಚಿತ್ರಕ್ಕೆ ಮಾರಕವಾಗಿವೆ. ಮತ್ತೊಂದೆಡೆ ಅಕ್ಷಯ್​ ಕುಮಾರ್​ ಮತ್ತು “ರಕ್ಷಾಬಂಧನ್ ‘ ಕಥೆಗಾರ್ತಿ ಕನ್ನಿಕಾ ಧಿಲ್ಲೋನ್​ರ ಈ ಹಿಂದಿನ ಹೇಳಿಕೆಗಳೂ ಅವರ ಚಿತ್ರಕ್ಕೆ ಮೈನಸ್​ ಆಗಿವೆ. ಇದೇ ಆಗಸ್ಟ್​ 11ರಂದು ಎರಡೂ ಚಿತ್ರಗಳು ತೆರೆಗೆ ಬಂದಿದ್ದು, ಅತ್ತ ಆಮಿರ್​, ಇತ್ತ ಅಕ್ಷಯ್​ ಇಬ್ಬರಿಗೂ ಬಾಯ್ಕಾಟ್​ ಬಿಸಿ ಮುಟ್ಟಿದೆ.
“ಲಾಲ್​..’ ಚಿತ್ರದ ಮೊದಲ ದಿನ ಚಿತ್ರದ ಕಲೆಕ್ಷನ್​ ಕೇವಲ 12 ಕೋಟಿ ರೂ. ಎನ್ನಲಾಗಿದೆ. ಕಳೆದ 13 ವರ್ಷಗಳಲ್ಲಿ ಆಮಿರ್​ ಚಿತ್ರಕ್ಕೆ ಸಿಕ್ಕ ಅತಿ ಕಡಿಮೆ ಸ್ಟ್​ ಡೇ ಗಳಿಕೆ. ಮೊದಲ ದಿನ ನೂರಾರು ಥಿಯೇಟರ್​ಗಳಲ್ಲಿ ಎರಡಂಕಿಯೂ ಪ್ರೇಕ್ಷಕರು ಬಂದಿಲ್ಲ. ಹೀಗಾಗಿ ಥಿಯೇಟರ್​ ಮಾಲೀಕರು 10 ಸಾವಿರ ಶೋಗಳಲ್ಲಿ ಬರೋಬ್ಬರಿ 1300 ಶೋಗಳನ್ನು ಎರಡನೇ ದಿನವೇ ಕ್ಯಾನ್ಸಲ್​ ಮಾಡಿದ್ದಾರೆ. ಹಾಗೆಯೇ ಅಕ್ಷಯ್​ ಕುಮಾರ್​ರ “ರಕ್ಷಾಬಂಧನ್ ಸಹ ಮೊದಲ ದಿನ ಕೇವಲ 8.50 ಕೋಟಿ ರೂ. ಗಳಿಸಿದ್ದು, “ಸಾಮ್ರಾಟ್​ ಪೃಥ್ವಿರಾಜ್​’ ನಂತರ ಮತ್ತೊಂದು ಫ್ಲಾಪ್​ನತ್ತ ಅವರು ಮುಖ ಮಾಡಿದ್ದಾರೆ ಎನ್ನಲಾಗಿದೆ.
ಈ ಎರಡೂ ಚಿತ್ರಗಳು ಬಾಯ್ಕಾಟ್​ ಆಗಲು ಕಾರಣ“ಲಾಲ್​ ಸಿಂಗ್​ ಛಡ್ಡಾ’ ಚಿತ್ರ ಬಾಯ್ಕಾಟ್​ ಆಗುವುದಕ್ಕೆ ಪ್ರಮುಖ ಕಾರಣ ಆಮಿರ್​ ಅವರ ಈ ಹಿಂದಿನ ಹಿಂದೂ ವಿರೋಧಿ ಹೇಳಿಕೆಗಳು ಎಂದು ಹೇಳಲಾಗುತ್ತಿದೆ. ಈ ಹಿಂದೆ ಆಮಿರ್​, ಭಾರತದಲ್ಲಿ ಅಸುರಕ್ಷತೆ ಕಾಡುತ್ತಿದ್ದು, ವಿದೇಶಕ್ಕೆ ಹೋಗುವ ಕುರಿತಾಗಿ ಹೇಳಿಕೆ ನೀಡಿದ್ದರು. ಹಾಗೆಯೇ, “ಪಿಕೆ’ ಚಿತ್ರದಲ್ಲಿ ಹಿಂದು ಧರ್ಮ, ದೇವರ ಅವಹೇಳನ ಮಾಡಿದ್ದ ಅವರು ಬೇರೆ ಧರ್ಮಗಳ ಬಗ್ಗೆ ಮೃದುಧೋರಣೆ ವಹಿಸಿದ್ದರು. ಅಷ್ಟೇ ಅಲ್ಲದೇ “ಲಾಲ್​ ಸಿಂಗ್​’ ಚಿತ್ರದಲ್ಲೂ “ದೇವರ ಪೂಜೆ, ಪಾಠ ಮಾಡೋದರಿಂದ ಮಲೇರಿಯಾ ಬರುತ್ತೆ ಅಂತ ಅಮ್ಮ ಹೇಳಿದ್ದಾರೆ’ ಎಂಬ ಡೈಲಾಗ್​ ಕೂಡ ಇದೆ. ಇನ್ನು ನಾಯಕಿ ಕರೀನಾ ಕಪೂರ್​ ಖಾನ್​ ಮತ್ತು ಚಿತ್ರಕ್ಕೆ ಕಥೆ ಬರೆದಿರುವ ಅತುಲ್​ ಕುಲಕರ್ಣಿ ಅವರು ನೀಡಿದ್ದ ಹೇಳಿಕೆಗಳು ಸಹ ಚಿತ್ರದ ಮೇಲೆ ಪರಿಣಾಮ ಬೀರಿದೆ.
“ರಕ್ಷಾಬಂಧನ್ ‘ ಟಾರ್ಗೆಟ್​ ಆಗಲು ಕಾರಣಇನ್ನು ನಟ ಅಕ್ಷಯ್​ ಕುಮಾರ್​ ಅವರು ಸಹ ಸಿನಿಮಾ ಪ್ರಚಾರದ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರೂ, ಕೆಲವು ಸಂದರ್ಶನದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಹಾಗೇ “ರಕ್ಷಾಬಂಧನ್ ‘ ಚಿತ್ರದ ಕಥೆಗಾರ್ತಿ ಕನ್ನಿಕಾ ಧಿಲ್ಲೋನ್​ ಸಹ ಹಲವು ಬಾರಿ ಹಿಂದುವಿರೋಧಿ ಟ್ವೀಟ್​ಗಳನ್ನು ಮಾಡಿದ್ದು, ಅವೆಲ್ಲವೂ ಈಗ ಮತ್ತೆ ವೈರಲ್​ ಆಗಿವೆ. ಹೀಗಾಗಿ ಆ ಚಿತ್ರವನ್ನೂ ಹಲವೆಡೆ ಬಾಯ್ಕಾಟ್​ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + five =
Remember me
