ಬೆಂಗಳೂರು:ಜೋಳಿಗೆಯಲ್ಲಿ ಕುಳಿತು ಆನ್​ಲೈನ್​ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಪಾಲಿಗೆ ಅದೇ ಜೋಳಿಗೆ ಮೃತ್ಯುವಾಗಿ ಪರಿಣಮಿಸಿದೆ.
ನಗರ ಹೊರವಲಯದ ದರ್ಗಾಜೋಗಹಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್​, ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ. ಮನೆಯಲ್ಲಿದ್ದ ಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಕೋಣೆಯಲ್ಲಿ ಜೋಳಿಗೆ ಕಟ್ಟಲಾಗಿತ್ತು. ನಿನ್ನೆ ಆನ್​ಲೈನ್​ ತರಗತಿಗೆ ಹಾಜರಾದ ಬಾಲಕ, ಕೋಣೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಸಂಜೆಯಾದರೂ ಆತ ಕೋಣೆಯಿಂದ ಹೊರ ಬಾರಲಿಲ್ಲ. ಅನುಮಾನಗೊಂಡು ಪಾಲಕರು ನೋಡಿದಾಗ ಆಘಾತ ಕಾದಿತ್ತು.
ಇದನ್ನೂ ಓದಿರಿಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ
ಆನ್​ಲೈನ್​ ಪಾಠ ಕೇಳಲೆಂದು ಕೋಣೆಗೆ ಹೋದ ಬಾಲಕ ಮಗುವಿಗೆ ಕಟ್ಟಿದ್ದ ಜೋಕಾಲಿ ಮೇಲೆ ಕುಳಿತು ಮೈಮರೆತ್ತಿದ್ದಾನೆ. ಈ ವೇಳೆ ಜೋಕಾಲಿಯ ಉರುಳಿಗೆ ಬಾಲಕನ ಕತ್ತು ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾನೆ.
ಆನ್​ಲೈನ್​ ತರಗತಿಯ ಸಮಯ ಮುಗಿದರೂ ಮಗು ಹೊರಬಾರದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ನಾಲ್ವರಲ್ಲಿ ಇಬ್ಬರು ದಾರಿಯಲ್ಲೇ ಹೆಣವಾದರು!

ಕನ್ನಡ ಕಿರುತೆರೆ ನಟಿಗೆ ವರದಕ್ಷಿಣೆ ಕಿರುಕುಳ, ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
