ವಿಲಾಸ ಮೇಲಗಿರಿ ಬೆಂಗಳೂರು
ಕರೊನಾ ಭೀತಿ ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳನ್ನು ಉಲ್ಬಣಗೊಳಿಸಿದ್ದು, ಶೇ.50 ರೋಗಿಗಳಲ್ಲಿ ಮಧುಮೇಹ-ರಕ್ತದೊತ್ತಡ ನಿಯಂತ್ರಣ ಸವಾಲಾಗಿದೆ.
ಕರೊನಾ ಕಾಟದಲ್ಲಿ ಓಡಾಟ, ವ್ಯಾಯಾಮ ಮಾಡದಿರುವುದು, ದೈಹಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿರುವುದು ಒಂದೆಡೆಯಾದರೆ ರೋಗಿಗಳಲ್ಲಿ ಬದುಕಿನ ಬವಣೆ, ಭವಿಷ್ಯದ ಚಿಂತೆ ಕೂಡ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಗೆ ಮತ್ತು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ರಕ್ತದಲ್ಲಿನ ಮೂರು ತಿಂಗಳ ಸರಾಸರಿ ಸಕ್ಕರೆ ಅಂಶ ದಾಖಲೆ (ಎಚ್​ಬಿಎ1ಸಿ) ಶೇ.7 ಇದ್ದದ್ದು, ಬಹುತೇಕ ರೋಗಿಗಳಲ್ಲಿ ಈಗ ಅದರ ಪ್ರಮಾಣ 8-9 ಮತ್ತೆ ಕೆಲವರಲ್ಲಿ ಶೇ.10ರ ವರೆಗೆ ಏರಿದೆ ಎನ್ನುತ್ತಾರೆ ಮಧುಮೇಹ ತಜ್ಞರು. ಲಾಕ್​ಡೌನ್ ಅವಧಿಯಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ರಕ್ತದಲ್ಲಿನ ಗ್ಲುಕೋಸ್ ತೀವ್ರ ಏರುಪೇರಾಗಿರುವುದು ಕಂಡು ಬಂದಿದೆ. ಈ ಪೈಕಿ ಶೇ.52 ಪುರುಷರು, ಶೇ.48 ಮಹಿಳೆಯರು. ಲಾಕ್​ಡೌನ್​ಗೆ ಮುಂಚೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿತ್ತು. ಆದರೆ, ಈಗ ಅಸಮತೋಲನಗೊಂಡಿದೆ ಎಂದು ರೋಗಿಯೊಬ್ಬರು ಪ್ರತಿಕ್ರಿಯಿಸುತ್ತಾರೆ.
ರೋಗ ನಿರೋಧಕ ಶಕ್ತಿ ದುರ್ಬಲ ಗೊಳ್ಳುವ ಕಾರಣ ಮಧುಮೇಹಿಗಳು ಕರೊನಾದಂಥ ಸಾಂಕ್ರಾಮಿಕ ರೋಗಗಳಿಗೆ ಬಹುಬೇಗ ಗುರಿಯಾಗುತ್ತಾರೆ ಮತ್ತು ಸಹಜ ಸ್ಥಿತಿಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮಧುಮೇಹಿಗಳು ಕಾಲೋಚಿತ ಕೆಮ್ಮು-ಶೀತ ಹೊಂದಿದ್ದರೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಅತಿಯಾದ ಒತ್ತಡ ಉಂಟಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯಕ್ಕಿಂತ ಕಡಿಮೆ (ಹೈಪೋಗ್ಲಿಸಿಮಿಯಾ) ಸ್ಥಿತಿಗೆ ತಲುಪುವ ಸಾಧ್ಯತೆಗಳೂ ಇವೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟ ನಿರ್ವಹಣೆ ಸರಿಯಾಗಿರದಿದ್ದರೆ ಅಪಾಯ ಖಚಿತ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಲ್ಲದಿದ್ದರೆ ಹೃದ್ರೋಗ, ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು, ಕಣ್ಣಿನ ಸಮಸ್ಯೆ ಮತ್ತಿತರ ಗಂಭೀರ ರೋಗಗಳಿಗೆ ಸಿಲುಕಬೇಕಾಗುತ್ತದೆ.
ಮನೆಯಿಂದಲೇ ಕೆಲಸ:ಸಾಫ್ಟ್​ವೇರ್ ಮತ್ತಿತರ ಉದ್ಯೋಗಿ ಗಳಿಗೆ ಮಧುಮೇಹ ಹತೋಟಿಗೆ ತರುವಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಸಹಕಾರಿಯಾಗಿದೆ. ಇವರು ಟ್ರಾಫಿಕ್ ಸಮಸ್ಯೆ ಇಲ್ಲದೆ ಮನೆಯಿಂದಲೇ ಕೆಲಸ ಮಾಡುವುದು ಒತ್ತಡ ತಗ್ಗಿಸಿದೆ. ಹೆಚ್ಚು ಕಾಲ ವ್ಯಾಯಾಮ ಮಾಡಲೂ ಅನುಕೂಲ ವಾಗಿದೆ. ಹೋಟೆಲ್ ಬದಲಿಗೆ ಮನೆಯಲ್ಲೇ ಊಟ- ತಿಂಡಿ ಸೇವನೆ, ವೀಕೆಂಡ್ ಇಲ್ಲದೆ ಹೆಂಡತಿ-ಮಕ್ಕಳ ಜತೆ ಆರಾಮವಾಗಿ ಕಾಲ ಕಳೆದಿದ್ದಾರೆ. ಹೀಗೆ ಬದಲಾದ ಜೀವನಶೈಲಿ ಯಿಂದ ರಕ್ತದಲ್ಲಿನ ಗ್ಲುಕೋಸ್ ಅಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ ಎಂದು ಬಸವೇಶ್ವರನಗರದ ಅರವಿಂದ ಡಯಾಬಿಟಿಸ್ ಸೆಂಟರ್​ನ ಡಾ. ಜೆ.ಅರವಿಂದ ಹೇಳುತ್ತಾರೆ.
ಹೆಚ್ಚು ಬಾಧಿತರು:ಆಟೋ ಚಾಲಕರು, ಕಾಲ್ ಸೆಂಟರ್ ಉದ್ಯೋಗಿಗಳು, ಎಲೆಕ್ಟಿ್ಟ್ರಯನ್ಸ್, ಪ್ಲಂಬರ್.. ಸೇರಿ ಅಂದೇ ದುಡಿದು ಅಂದೇ ತಿನ್ನುವ ಕಾರ್ವಿುಕರಲ್ಲಿ ಆತಂಕ, ಉದ್ವೇಗ, ಒತ್ತಡ ಹೆಚ್ಚಿ ಮಧುಮೇಹ-ರಕ್ತದೊತ್ತಡ ಹತೋಟಿ ಯಲ್ಲಿ ಇಲ್ಲದಿರುವುದು ಕಂಡುಬಂದಿದೆ ಎನ್ನುತ್ತಾರೆ ತಜ್ಞರು.
ಮುಂಜಾಗ್ರತೆ:ರೋಗನಿರೋಧಕ ಶಕ್ತಿ ಹೆಚ್ಚಿಸುವ ತಾಜಾ ಹಣ್ಣು-ತರಕಾರಿ ಸೇವಿಸಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಿ ಚಟುವಟಿಕೆಯಿಂದ ಇರಬೇಕು. ಯೋಗ-ಪ್ರಾಣಾಯಾಮ, ಆಳವಾದ ಉಸಿರಾಟದ ವ್ಯಾಯಾಮ ರೂಢಿಸಿಕೊಳ್ಳಬೇಕು.
ನಿಷ್ಕ್ರಿಯತೆ, ಮಾನಸಿಕ ಒತ್ತಡ, ಕರೊನಾ ಭೀತಿ, ಸದಾ ಆತಂಕ, ನಿಯಮಿತವಾಗಿ ಔಷಧ ಸೇವಿಸದೇ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರು ಸಾಮಾನ್ಯ. ವ್ಯಾಯಾಮ, ಸಕಾಲಿಕ ಔಷಧ ಸೇವನೆ, ಕ್ರಿಯಾಶೀಲತೆಯಿಂದ ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
| ಡಾ.ಶ್ರೀಹರಿ ಕುಲಕರ್ಣಿಮೆಡ್​ರೆೋನ್, ಮಹಾಲಕ್ಷ್ಮೀಪುರ
https://www.vijayavani.net/covid-19-not-the-worlds-last-pandemic-offers-a-chance-to-be-ready-for-next-one-who-chief-scientist-soumya-swaminathan/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 3 =
Remember me
