ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದ್ದ ಅಕ್ಕಿ ಪ್ರಮಾಣವನ್ನು ಈಗಾಗಲೇ ಕಡಿತಗೊಳಿಸಿದ್ದು, ಏ.1ರಿಂದ 5 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್​ಗೆ 2 ಕೆ.ಜಿ. ಗೋಧಿ ನೀಡಲಾಗು ತ್ತದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ.
ಆರ್ಥಿಕ ಹೊರ ಹಿನ್ನೆಲೆ ಕಾರ್ಡ್​ದಾರರಿಗೆ ನೀಡಲಾಗುತ್ತಿದ್ದ 7 ಕೆ.ಜಿ. ಅಕ್ಕಿಯನ್ನು 5ಕ್ಕೆ ಇಳಿಸುವ ಬದಲು ದಕ್ಷಿಣ ಕರ್ನಾಟಕ ಭಾಗದ ಫಲಾನುಭವಿಗಳಿಗೆ 2 ಕೆ.ಜಿ. ರಾಗಿ ಮತ್ತು ಉತ್ತರ ಕರ್ನಾಟಕದ ಫಲಾನುಭವಿಗಳಿಗೆ 2 ಕೆ.ಜಿ. ಜೋಳ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಆದರೆ, ಗೋದಾಮಿನಲ್ಲಿ ಸಂಗ್ರಹಿಸಿರುವ ರಾಗಿ ಮತ್ತು ಜೋಳ 5-6 ತಿಂಗಳಿಗಷ್ಟೇ ಆಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2017ರ ಜೂನ್ ಅಥವಾ ಜುಲೈನಲ್ಲಿ ಅಕ್ಕಿ ಪ್ರಮಾಣವನ್ನು 7 ಕೆ.ಜಿ.ಗೆ ಏರಿಸಿ 2 ಕೆ.ಜಿ. ನೀಡುತ್ತಿದ್ದ ಗೋಧಿಯನ್ನು ಅಂದಿನ ಸರ್ಕಾರ ಸ್ಥಗಿತಗೊಳಿಸಿತ್ತು. ಅಲ್ಲಿಂದ ಈಗಿನವೆರೆಗೆ ಪ್ರತಿ ತಿಂಗಳು ಕಾರ್ಡ್​ದಾರರಿಗೆ 7 ಕೆ.ಜಿ. ಅಕ್ಕಿ ಮಾತ್ರವೇ ನೀಡಲಾಗುತ್ತಿತ್ತು. ಸಾಲಮನ್ನಾಕ್ಕಾಗಿ ಹಣ ಹೊಂದಿಸುವ ಸಲುವಾಗಿ ಅಕ್ಕಿ ಪ್ರಮಾಣವನ್ನು ಕಡಿತ ಮಾಡಲು ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂದಾದರೂ, ವಿವಿಧ ಕಾರಣಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಕೇಂದ್ರದ ಹೆಸರಿನಲ್ಲಿ ಈ ಯೋಜನೆಯನ್ನು ನೀಡಬೇಕೆಂಬ ಹಿನ್ನೆಲೆಯಲ್ಲಿ ಸಾಕಷ್ಟು ವಿರೋಧ ನಡುವೆಯೇ ಮಾ.5ರಂದು ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತಗೊಳಿಸುವ ಮಾಹಿತಿ ಹೊರಬಿತ್ತು. 2020-21ರ ಬಜೆಟ್​ನಲ್ಲಿ ಈ ಬಗ್ಗೆ ಪ್ರಸ್ತಾಪವಾಗದಿದ್ದರೂ ಇಲಾಖೆ ಅಧಿಕಾರಿಗಳು ಅಕ್ಕಿ ಕಡಿತ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದ್ದರು. ಅದರಂತೆ, ಇಲಾಖೆಗೆ ನೀಡಲಾಗುತ್ತಿದ್ದ ಅನುದಾನವನ್ನು ಈ ಬಾರಿ ಕಡಿತಗೊಳಿಸಲಾಯಿತು.
ರಾಜ್ಯದಲ್ಲಿ 7,62,628 ಅಂತ್ಯೋದಯ, 20,07,601 ಎಪಿಎಲ್ ಹಾಗೂ 1,18,87,236 ಬಿಪಿಎಲ್ ಕಾರ್ಡ್ ಗಳಿವೆ. ಈ ಎಲ್ಲ ಕಾರ್ಡ್​ಗಳು ಸೇರಿ 4,98,09,351 ಕುಟುಂಬದ ಸದಸ್ಯರಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರೂ.ನಂತೆ ಖರೀದಿಸಿ, ರಾಜ್ಯಕ್ಕೆ 3 ರೂ.ನಂತೆ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡುತ್ತಿದೆ.
408 ಕೋಟಿ ರೂ. ಉಳಿತಾಯ
ಕೇಂದ್ರದ ಸಹಕಾರದೊಂದಿಗೆ 5 ಕೆ.ಜಿ. ಅಕ್ಕಿ ಜತೆಗೆ ಸರ್ಕಾರ ಹೆಚ್ಚುವರಿಯಾಗಿ 2 ಕೆ.ಜಿ. ಸೇರಿಸಿ ಒಟ್ಟು 7 ಕೆ.ಜಿ. ಅಕ್ಕಿ ನೀಡುತ್ತಿತ್ತು. ಹೆಚ್ಚುವರಿಯಾಗಿ 2 ಕೆ.ಜಿ. ನೀಡಲು ತಿಂಗಳಿಗೆ ಪ್ರತಿ ಕೆ.ಜಿ.ಗೆ 29 ರೂ.ನಂತೆ 214 ಕೋಟಿ ರೂ. ವ್ಯಯಿಸಿ 74 ಸಾವಿರ ಮೆಟ್ರಿಕ್ ಟನ್ ಅಕ್ಕಿ ಖರೀದಿಸಬೇಕಿತ್ತು. 2 ಕೆ.ಜಿ. ಅಕ್ಕಿ ಬದಲು ಗೋಧಿ ವಿತರಿಸಿದರೆ, ತಿಂಗಳಿಗೆ 34 ಕೋಟಿ ರೂ.ನಂತೆ ವರ್ಷಕ್ಕೆ 408 ಕೋಟಿ ರೂ. ಉಳಿತಾಯವಾಗಲಿದೆ ಎಂಬುದು ಇಲಾಖೆ ಅಧಿಕಾರಿಗಳ ಲೆಕ್ಕಚಾರ.
ಬೆಲೆ ಏರಿಕೆ, ದಾಸ್ತಾನು ಕೊರತೆ ಹಾಗೂ ಅನುದಾನದ ಹೊರೆ ಹಿನ್ನೆಲೆಯಲ್ಲಿ ಕಾರ್ಡ್​ದಾರರಿಗೆ ನೀಡಲಾಗುತ್ತಿದ್ದ ತೊಗರಿ ಬೇಳೆಯನ್ನು 2018ರ ನಂವೆಂಬರ್​ನಲ್ಲಿ ಸ್ಥಗಿತಗೊಳಿಸಲಾಯಿತು. ಮತ್ತೆ ಬೇಳೆ ವಿತರಣೆ ಬಗ್ಗೆ ಈ ವರ್ಷದ ಬಜೆಟ್​ನಲ್ಲಿ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ, ಬೇಳೆ ವಿತರಣೆ ಸ್ಥಗಿತಗೊಳಿಸಿದರೆ ಸರ್ಕಾರಕ್ಕೆ ವರ್ಷಕ್ಕೆ 720 ಕೋಟಿ ರೂ. ಉಳಿತಾಯವಾಗಲಿದೆ.
ಫಲಾನುಭವಿಗಳಿಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡ್​ಗೆ 2 ಕೆಜಿ ಗೋಧಿ ನೀಡಲಾಗುತ್ತದೆ. ಕೇಂದ್ರದಿಂದ ಅನುಮತಿ ಸಿಕ್ಕ ನಂತರ ರಾಗಿ, ಜೋಳ ವಿತರಿಸಲಾವುದು.
| ಶಾಮ್ಲಾ ಇಕ್ಬಾಲ್ಆಯುಕ್ತರು ಆಹಾರ ಇಲಾಖೆ
ಅಕ್ಕಿ ಕಡಿತ ಮಾಡಬಾರದು. ತೊಗರಿ ಬೇಳೆ, ರಾಗಿ, ಜೋಳ, ಎಣ್ಣೆ, ಸಕ್ಕರೆ ಕೊಟ್ಟರೆ ಆ ಪದಾರ್ಥ ಮಾರಾಟ ಮಾಡಿ ಸರ್ಕಾರಕ್ಕೆ ಆದಾಯ ತಂದುಕೊಡುತ್ತೇವೆ.
| ಟಿ.ಕೃಷ್ಣಪ್ಪಅಧ್ಯಕ್ಷ ರಾಜ್ಯ ಪಡಿತರ ವಿತರಕ ಸಂಘ

| ಹರೀಶ ಬೇಲೂರು ಬೆಂಗಳೂರು

VIDEO: ‘ಕರೊನಾ ಭಜನೆ’ ನೀವು ಕೇಳಿದ್ದೀರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಅದ್ಭುತ ಮ್ಯೂಸಿಕ್​ನೊಂದಿಗಿನ ಈ ಹಾಡು ಕಾಮಿಡಿನಾ? ನಾನ್​ಸೆನ್ಸಾ?

ಅವಕಾಶದ ನಿರೀಕ್ಷಣೆ, ಶಿವಕುಮಾರ್ ಸುತ್ತ ಪ್ರದಕ್ಷಿಣೆ: ನೂತನ ಅಧ್ಯಕ್ಷರ ತಂಡ ಸೇರಲು ಅತ್ಯುತ್ಸಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
