| ಶ್ರೀಕಾಂತ್ ಶೇಷಾದ್ರಿ ಬೆಂಗಳೂರುಕರೊನಾ ಕರಿಛಾಯೆಯಿಂದ ಈಗಷ್ಟೇ ಹೊರಬರು ತ್ತಿರುವ ರಾಜ್ಯದ ಜನರಿಗೆ ಹೊಸ ವರ್ಷದ ಉಡುಗೊರೆಯಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕೊಡುಗೆಗಳನ್ನು ನೀಡಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಆಯುಷ್ಮಾನ್ ಭಾರತ್ ಕರ್ನಾಟಕ’ ಯೋಜನೆ ಬಳಕೆ ಮತ್ತು ಅವಲಂಬನೆ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಬಿಪಿಎಲ್ ಕಾರ್ಡ್​ಗಳಿಗೇ ಆಯುಷ್ಮಾನ್ ಮಾನ್ಯತೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಜ.1ರಂದು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಇದರೊಟ್ಟಿಗೆ ಆಯುಷ್ಮಾನ್ ಕಾರ್ಡ್ ಇಲ್ಲದೆ ಪಡಿತರ ಚೀಟಿಯಲ್ಲಿ ಹೆಸರಿರುವರೆಲ್ಲ ಆರೋಗ್ಯ ಯೋಜನೆಯ ಲಾಭ ಪಡೆದುಕೊಳ್ಳುವ ತೀರ್ಮಾನವೂ ಪ್ರಕಟವಾಗಲಿದೆ.
ಈ ಯೋಜನೆ ಪ್ರಕಾರ ಬಿಪಿಎಲ್ ಕಾರ್ಡ್​ದಾರರು ವರ್ಷಕ್ಕೆ ಐದು ಲಕ್ಷ ರೂ. ಹಾಗೂ ಎಪಿಎಲ್ ಕಾರ್ಡ್​ದಾರರು 1.5 ಲಕ್ಷ ರೂ.ವರೆಗಿನ ಚಿಕಿತ್ಸೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಈವರೆಗೆ ರಾಜ್ಯದಲ್ಲಿ 2.43 ಕೋಟಿ ಮಂದಿ ಶುಲ್ಕ ನೀಡಿ ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿದ್ದಾರೆ. ಗ್ರಾಮೀಣ ಜನರಿಗೆ ಅನುಕೂಲವಾಗಬೇಕೆಂದು ಗ್ರಾಮೀಣಾಭಿವೃದ್ಧಿ ಇಲಾಖೆ ಬಾಪೂಜಿ ಕೇಂದ್ರದಲ್ಲಿ ಕಾರ್ಡ್ ವಿತರಿಸಲು ಕ್ರಮಕೈಗೊಂಡಿತ್ತು.
ರಾಜ್ಯದಲ್ಲಿನ 1.32 ಕೋಟಿ ಕುಟುಂಬಗಳಲ್ಲಿನ 4.50 ಕೋಟಿ ಮಂದಿ ಯೋಜನಾ ವ್ಯಾಪ್ತಿಗೆ ಬರಲು ಅರ್ಹರು. ಒಟ್ಟು 1.15 ಕೋಟಿ ಬಿಪಿಎಲ್ ಹಾಗೂ 10.90 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರೂ ಜನವರಿ ಬಳಿಕ ಆಯುಷ್ಮಾನ್ ಕಾರ್ಡ್ ಇಲ್ಲದೆಯೇ ಯೋಜನೆಗೆ ನೋಂದಣಿಯಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಜಾರಿಗೆ ಬರುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.
ಯೋಜನೆ ಫಲಾನುಭವಿಗಳು ನಿಯಮಗಳ ಪ್ರಕಾರ ಸಾಮಾನ್ಯ ಮತ್ತು ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ನೋಂದಾಯಿತ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತದೆ. ಬಹು ಮುಖ್ಯವಾಗಿ ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಹೀಗಾಗಿ ಈ ಯೋಜನೆ ಬಳಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ.
ಈವರೆಗೆ ಪ್ರತ್ಯೇಕ ಕಾರ್ಡ್ ಮಾಡಿಸಿಕೊಂಡವರಿಗೆ ಮಾತ್ರ ಅನುಕೂಲವಾಗುತ್ತಿತ್ತು, ಇನ್ನು ಮುಂದೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್​ನಲ್ಲಿ ಹೆಸರಿರುವ ಕುಟುಂಬ ಸದಸ್ಯರೆಲ್ಲರೂ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಉಚಿತ ಪರೀಕ್ಷೆಗೂ ನಿರ್ಧಾರಆಯುಷ್ಮಾನ್ ನಿಯಮ ಬದಲಾವಣೆ ಜತೆಗೆ ಬಯೋ ಕೆಮೆಸ್ಟ್ರಿ ಟೆಸ್ಟ್, ರಕ್ತ ಪರೀಕ್ಷೆ, ಎಂಆರ್​ಐ, ಸಿಟಿ ಟೆಸ್ಟ್ ಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಇದು ಕೂಡ ಜನವರಿಯಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ ಜಾರಿಯಲ್ಲಿದ್ದ ಆರೋಗ್ಯ ಕರ್ನಾಟಕ ಯೋಜನೆ ಸೇರಿಕೊಂಡಂತೆ ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು ಪ್ರತ್ಯೇಕ ಕಾರ್ಡ್ ಪಡೆಯಬೇಕೆಂಬ ನಿಯಮವಿತ್ತು. ಇದರಿಂದ ಫಲಾನುಭವಿ ಅಪೇಕ್ಷಿತರಿಗೆ ಸಮಯದ ಜತೆಗೆ ಶುಲ್ಕದ ಹೊರೆಯಾಗುತ್ತಿತ್ತು. ಆರೋಗ್ಯ ಇಲಾಖೆಗೆ ಕಾರ್ಡ್ ವಿತರಿಸುವ ಕಾರ್ಯಭಾರದ ಒತ್ತಡ ಹೆಚ್ಚಾಗಿತ್ತು. ಹೀಗಾಗಿ ಪಡಿತರ ಇಲಾಖೆ ನೀಡುವ ಬಿಪಿಎಲ್ , ಎಪಿಎಲ್ ಕಾರ್ಡ್​ಗೆ ಆಯುಷ್ಮಾನ್ ಭಾರತ್ ಮಾನ್ಯತೆ ನೀಡಲಾಗುತ್ತದೆ. ಈ ಮೂಲಕ ಕಾರ್ಡ್​ದಾರರು ಯೋಜನೆ ವ್ಯಾಪ್ತಿಗೆ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.
ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಅಧ್ಯಯನ, ಅಧಿಕಾರಿಗಳು ಮತ್ತು ತಜ್ಞರ ಜತೆ ಚರ್ಚೆ ನಡೆಸಲಾಗಿದೆ.| ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
