|ಗೋಪಾಲಕೃಷ್ಣ ಪಾದೂರುಉಡುಪಿ
ರಾಜ್ಯದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈ ವರ್ಷ ಈವರೆಗೆ ಸುಮಾರು 4,07,443 ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್​ದಾರರು ನಿಯಮ ಉಲ್ಲಂಘಿಸಿ ಸರ್ಕಾರದ ಸಬ್ಸಿಡಿ ಬಳಸುತ್ತಿರುವುದು ಕಂಡುಬಂದಿದ್ದು, ಈಗಾಗಲೆ 1,58,174 ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ. ಆಸಕ್ತಿದಾಯಕ ಅಂಶವೆಂದರೆ ಇವರಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸರ್ಕಾರಿ ನೌಕರರು.
ಜನವರಿ 1ರಿಂದ ಜುಲೈ 20ರವರೆಗಿನ ಅಂಕಿ-ಅಂಶ ಪ್ರಕಾರ 2,127 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಪತ್ತೆ ಹಚ್ಚಲಾಗಿದ್ದು, ಇದರಲ್ಲಿ 2016 ಕಾರ್ಡ್​ಗಳನ್ನು ಎಪಿಎಲ್​ಗೆ ಪರಿವರ್ತಿಸಲಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಸರ್ಕಾರಿ ನೌಕರರಲ್ಲಿ ಬಿಪಿಎಲ್ ಕಾರ್ಡ ಪತ್ತೆಯಾಗಿರುವುದು ಮೈಸೂರು ಜಿಲ್ಲೆಯಲ್ಲಿ. ಇಲ್ಲಿ ಪತ್ತೆಯಾದ ಎಲ್ಲ 215 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಲಾಗಿದೆ. ಎರಡನೇ ಸ್ಥಾನದಲ್ಲಿ ತುಮಕೂರಿದ್ದು, 206ರ ಪೈಕಿ 192, ಮೂರನೇ ಸ್ಥಾನದಲ್ಲಿ ಬೆಂಗಳೂರು ಜಿಲ್ಲೆಯ168ರಲ್ಲಿ 167 ಪಡಿತರ ಚೀಟಿ ರದ್ದುಗೊಂಡಿದೆ.
ಅದೇ ರೀತಿ ಬೀದರ್ 75, ಬಳ್ಳಾರಿ 48, ಬೆಂಗಳೂರು ಪೂರ್ವ 12, ಬೆಂಗಳೂರು ಪಶ್ಚಿಮ 65, ಚಾಮರಾಜ ನಗರ 68, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 54, ಹಾಸನ 94, ಕಲಬುರ್ಗಿ 123, ಕೊಡಗು 19, ಕೋಲಾರ 59, ಮಂಡ್ಯ 127, ರಾಮನಗರ 88, ವಿಜಯಪುರ 27 ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಎಪಿಎಲ್​ಗೆ ಪರಿವರ್ತಿಸಲಾಗಿದೆ.
ಬಾಗಲಕೋಟೆ 22ರಲ್ಲಿ 16, ಬೆಂಗಳೂರು ಉತ್ತರ 36ರಲ್ಲಿ 34, ಬೆಂಗಳೂರು ದಕ್ಷಿಣ 33ರಲ್ಲಿ 32, ಬೆಂಗಳೂರು ಗ್ರಾಮಾಂತರ 61ರಲ್ಲಿ 59, ಬೆಳಗಾವಿ 34ರಲ್ಲಿ 29, ಚಿತ್ರದುರ್ಗ 45ರಲ್ಲಿ 35, ದಕ್ಷಿಣ ಕನ್ನಡ 32ರಲ್ಲಿ 25, ದಾವಣಗೆರೆ 61ರಲ್ಲಿ 59, ಧಾರವಾಡ 18ರಲ್ಲಿ 19, ಗದಗ 6ರಲ್ಲಿ 1, ಕೊಪ್ಪಳ 61ರಲ್ಲಿ 51, ರಾಯಚೂರು 86ರಲ್ಲಿ 83, ಶಿವಮೊಗ್ಗ 61ರಲ್ಲಿ 60, ಉಡುಪಿ 46ರಲ್ಲಿ 33, ಉತ್ತರ ಕನ್ನಡ ಜಿಲ್ಲೆಯಲ್ಲಿ 8ರಲ್ಲಿ 7, ಯಾದಗಿರಿ 26ರಲ್ಲಿ 7 ಕಾರ್ಡ್ ರದ್ದು ಮಾಡಲಾಗಿದೆ. ಹಾವೇರಿಯಲ್ಲಿ 10 ಕಾರ್ಡ್ ಗುರುತಿಸಲಾಗಿದ್ದು, ಸದ್ಯಕ್ಕೆ ಯಾವುದೇ ಕಾರ್ಡ್ ರದ್ದುಪಡಿಸಿಲ್ಲ. ಉಳಿದವರಿಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಮಕ್ಕಳ ಆದಾಯವೇ ಕುತ್ತು:ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಮಕ್ಕಳು ಉದ್ಯೋಗಸ್ಥರಾದ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸುತ್ತಾರೆ. ಈ ಸಂದರ್ಭ ಪಡಿತರ ಚೀಟಿ ಬದಲಾಯಿಸಬೇಕು. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಆದಾಯ ತೆರಿಗೆ ಇಲಾಖೆ ಮಾಹಿತಿ ಪ್ರಕಾರ ಬಿಪಿಎಲ್ ಕಾರ್ಡ್​ಗಳನ್ನು ಆಹಾರ ಇಲಾಖೆ ಸ್ವಯಂಪ್ರೇರಿತವಾಗಿ ಎಪಿಎಲ್​ಗೆ ಬದಲಾಯಿಸುತ್ತದೆ. ಅನೇಕ ಕಡೆ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕವೂ ತವರು ಮನೆಯ ಪಡಿತರ ಚೀಟಿ ಯಲ್ಲಿ ಹೆಸರು ಉಳಿಸಿಕೊಳ್ಳಲಾಗಿದೆ. ಮಗಳು-ಅಳಿಯ ಜಂಟಿಯಾಗಿ ಆಸ್ತಿ ಖರೀದಿಸಿದರೂ ಆಧಾರ್ ಕಾರ್ಡ್ ಆಧಾರದಲ್ಲಿ ತವರು ಮನೆಯ ಬಿಪಿಎಲ್ ಕಾರ್ಡ್ ರದ್ದಾಗುತ್ತಿದೆ.
ಐಟಿ, ಕಂದಾಯ ಇಲಾಖೆ ನೆರವು:ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್​ದಾರರ ಆದಾಯದ ಬಗ್ಗೆ ಮಾಹಿತಿ ಪಡೆಯಲು ಆಹಾರ ಇಲಾಖೆಯು ಐಟಿ ಮತ್ತು ಕಂದಾಯ ಇಲಾಖೆ ನೆರವು ಪಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ 15,223 ಪಡಿತರ ಚೀಟಿ, 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿದ 15,502 ಕಾರ್ಡ್, ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್​ಗಿಂತ ಹೆಚ್ಚು ಭೂಮಿ ಹೊಂದಿದ 3499 ಮಂದಿಯ ಕಾರ್ಡ್ ಎಪಿಎಲ್​ಗೆ ಬದಲಾವಣೆಯಾಗಿದೆ. ಸಾವಿನ ಮಾಹಿತಿ ನೋಂದಣಿ ಆಧಾರದ ಮೇಲೆ 47967 ಪಡಿತರ ಚೀಟಿ ರದ್ದುಪಡಿಸಲಾಗಿದೆ. ಜತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗುರುತಿಸಿದ 51927 ಕಾರ್ಡ್​ಗಳನ್ನು ಎಪಿಎಲ್​ಗೆ ಪರಿವರ್ತಿಸಲಾಗಿದೆ.
ಸರ್ಕಾರಿ ನೌಕರರ ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅಂಥವರು ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಬೇಕು. ನಿಗದಿತ ಸಂಬಳ ಪಡೆಯುವ ಖಾಸಗಿ ನೌಕರರಿಗೂ ಇದು ಅನ್ವಯವಾಗುತ್ತದೆ. ಕೆಲವರು ಸಾಲ ಉದ್ದೇಶಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದು, ಬಿಪಿಎಲ್ ಕಾರ್ಡ್​ಗೆ ಅರ್ಹರಾಗಿದ್ದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ.
|ಮಹಮ್ಮದ್ ಇಸಾಕ್ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ
ಬೆಂಗಳೂರು:ಅನ್ನಭಾಗ್ಯ ಯೋಜನೆ ಪಡೆಯಲು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾದಿರುವ ಫಲಾನುಭವಿಗಳು ಈಗ ಮತ್ತಷ್ಟು ದಿನ ಕಾಯುವ ಆತಂಕ ಎದುರಾಗಿದೆ. ಅಲ್ಲದೆ, ಹೊಸ ರೇಷನ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಸದ್ಯಕ್ಕೆ ಕಾರ್ಡ್​ಗಳು ಮಾತ್ರ ಸಿಗೋದಿಲ್ಲ. ಹೊಸ ರೇಷನ್ ಕಾರ್ಡ್ ಮಂಜೂರು ಮಾಡದಂತೆ ಆಹಾರ ಇಲಾಖೆ ಮೇನಲ್ಲಿ ಆದೇಶಿಸಿತ್ತು. ಇದೀಗ ಇದೇ ಆದೇಶವನ್ನು ಮುಂದಿನ 3 ತಿಂಗಳು ಮುಂದುವರಿಸಲು ಇಲಾಖೆ ಚಿಂತಿಸಿದೆ.
4.26 ಲಕ್ಷ ಅರ್ಜಿ ಬಾಕಿ:2017-18ರಿಂದ 2021-22ರವರೆಗೆ 38,52,882 ಬಿಪಿಎಲ್ ಅರ್ಜಿಗಳ ಸಲ್ಲಿಕೆಯಾಗಿರುವ ಪೈಕಿ 26,43,782 ಅರ್ಜಿಗಳು ಅನುಮೋದನೆಗೊಂಡಿದ್ದು, 8,62,149 ಅರ್ಜಿಗಳ ತಿರಸ್ಕೃತಗೊಂಡಿವೆ. ಇದರಲ್ಲಿ 35,05,931 ಅರ್ಜಿಗಳು ವಿಲೇಯಾಗಿದ್ದು, 3,06,498 ಅರ್ಜಿಗಳು ಬಾಕಿ ಉಳಿದಿವೆ. ಇನ್ನೂ 6,48,355 ಎಪಿಎಲ್ ಅರ್ಜಿಗಳು ಸ್ವೀಕೃತಿಯಾಗಿರುವ ಪೈಕಿ 4,35,213 ಅರ್ಜಿಗಳು ಅನುಮೋದನೆಗೊಂಡರೆ, 92,654 ಅರ್ಜಿಗಳು ಅರ್ಜಿಗಳು ತಿರಸ್ಕಾರಗೊಂಡಿವೆ. 5,27,867 ಅರ್ಜಿಗಳು ವಿಲೇಯಾದರೆ, 1,20,488 ಅರ್ಜಿಗಳು ಬಾಕಿ ಉಳಿದಿವೆ ಎಂದು ಇಲಾಖೆ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ.
ವಿಳಂಬಕ್ಕೆ ಕಾರಣವೇನು?:2018ರಲ್ಲಿ ವಿಧಾನಸಭೆ ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿಯಾಗಿಲ್ಲ. ಕೆಲವು ಕಡೆ ಸಿಬ್ಬಂದಿ ಕೊರತೆ ಇದೆ.
|ಕೆ.ಎನ್.ರಾಘವೇಂದ್ರಮಂಡ್ಯ
ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿಗೊಳಿಸಿದ ಪರಿಣಾಮ ರೇಷನ್ ಕಾರ್ಡ್​ನಲ್ಲಿ ಬದಲಾವಣೆಯಾಗುತ್ತಿದೆ. ಆದರೆ ಕೆಲವರು ಇದನ್ನೇ ಬಳಸಿಕೊಂಡು ಗ್ರಾಮೀಣ ಜನರಿಂದ 150 ರೂ.ನಿಂದ 200 ರೂ.ವರೆಗೆ ವಸೂಲಿ ಮಾಡುತ್ತಿದ್ದಾರೆ. ಕೆಲ ಸೈಬರ್ ಸೆಂಟರ್​ಗಳಲ್ಲಿಯೂ ದುಬಾರಿ ಹಣ ಪೀಕುತ್ತಿದ್ದಾರೆ.
ಏನಿದು ಹೊಸ ಕಾರ್ಡ್ ದಂಧೆ?:‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿ ಕುಟುಂಬದ ರೇಷನ್ ಕಾರ್ಡ್​ಗೆ ನೀಡಲಾಗಿದ್ದ ಡಿಜಿಟ್ ನಂಬರ್ ಕೂಡ ಬದಲಾವಣೆಯಾಗಿದೆ. ರಾಜ್ಯದ ಎಲ್ಲ ತಾಲೂಕಿನಲ್ಲಿಯೂ ಈ ಪ್ರಕ್ರಿಯೆ ನಡೆದಿದೆ. ಮೊದಲು ತಾಲೂಕಿನ ಹೆಸರಿನ ಆಂಗ್ಲ ಪದಗಳು ಸೇರಿ 12 ನಂಬರ್​ಗಳಿದ್ದವು. ಇದೀಗ ಪೂರ್ಣವಾಗಿ ನಂಬರ್​ಗಳಿಗೆ ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಪಡಿತರ ಚೀಟಿ ಹೊಂದಿರುವ ಫಲಾನುಭವಿ ದೇಶದ ಯಾವುದೇ ಭಾಗಕ್ಕೆ ಹೋದರೂ ಆಹಾರ ಪದಾರ್ಥ ತೆಗೆದುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ನಾಂದಿಯಾಡಿದೆ. ಬ್ಲಾಕ್ ಆಂಡ್ ವೈಟ್ ಕಾರ್ಡ್ ಪಡೆಯಲು 20ರಿಂದ 30 ರೂ. ಹಾಗೂ ಕಲರ್ ಕಾರ್ಡ್ ಪಡೆಯಲು 50ರಿಂದ 60 ರೂ. ಆಗುತ್ತದೆ. ಪ್ರಿಂಟ್ ಜತೆಗೆ ಲ್ಯಾಮಿನೇಷನ್ ಮಾಡುವುದರಿಂದ ಖರ್ಚು ತಗಲುತ್ತದೆ. ಹಾಗೆಂದು, 150ರಿಂದ 200 ರೂ.ವರೆಗೆ ವಸೂಲಿ ಮಾಡುವುದು ತಪ್ಪು. ಪ್ರತಿ ಕಾರ್ಡ್​ಗೆ ಇಂತಿಷ್ಟು ಹಣ ನಿಗದಿ ಮಾಡಿ ನ್ಯಾಯಬೆಲೆ ಅಂಗಡಿ, ಗ್ರಾಪಂ ಮೂಲಕ ಕಾರ್ಡ್ ಕೊಡಿಸಬೇಕೆನ್ನುವುದು ಜನರ ಅಭಿಪ್ರಾಯ.
ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ, ಅಧಿಕಾರಿಗಳ ಮೂಲಕ ಕ್ರಮ ವಹಿಸಲಾಗುವುದು.
|ಶಿವಣ್ಣಪ್ರಭಾರ ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:20 − 17 =
Remember me
