ಕಲಬುರಗಿ:ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಳಂದ ಕ್ಷೇತ್ರದಿಂದ ಸ್ಪರ್ಧಿಸಲು ಅಸಕ್ತಿ ತೋರಿದರೆ ಕ್ಷೇತ್ರ ಬಿಟ್ಟು ಕೊಡಿಲುವುದಾಗಿ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ್ ಹೇಳಿದರು. ಈ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಅವರು ಮತ್ತೊಂದು ಸಲ ಉತ್ತರದಿಂದ ಸ್ಪರ್ಧಿಸಬಹುದು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದರೆ ಸಾಕು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದರು.
ಇದನ್ನೂ ಓದಿ:VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!ಆಳಂದ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟು, ತಾವು ಕ್ಷೇತ್ರ ತ್ಯಾಗ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆದರೆ ಇನ್ನೊಂದು ಸಲ ಸಿಎಂ ಆಗುವ ಆಸೆ ಹೊಂದಿದ್ದಾರೆ. ಹೀಗಾಗಿ ಆಳಂದ ಕ್ಕೆ ಬಂದರೆ ಕೊಡ ಹಾಲು ಕುಡಿದಷ್ಟು ಸಂತೋಷವಾಗುತ್ತದೆ ಎಂದು ಹೇಳಿದರು.
ಐದನೇ ಗ್ಯಾರಂಟಿ:ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸ್ಕೀಮ್​​ಗಳಿಂದ ಬಿಜೆಪಿ ಥಂಡಾ ಹೊಡೆದಿದೆ.‌ ಐದನೇ ಗ್ಯಾರಂಟಿ ಯಾಗಿ ರೈತರ ಕೃಷಿ ಸಾಲ ಮನ್ನಾ ಸೇರಬಹುದು ವಿಶಾಲ ಎಂದು ಬಿ.ಆರ್. ಪಾಟೀಲ್ ಸುಳಿವು ನೀಡಿದರು.
ಇದನ್ನೂ ಓದಿ:ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಬಿಜೆಪಿಯ ಇನ್ನಷ್ಟು ವಿಕೆಟ್ ಪತನ:ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರಂತೆ ಇನ್ನಷ್ಟು ಬಿಜೆಪಿಯ ವಿಕೆಟ್‌ಗಳು ಪತನವಾಗಲಿವೆ. ಕಾದು ನೋಡಿ ಎಂದರಲ್ಲದೇ ಯಾರ್ಯಾರು ಬರ್ತಾರೆಂದರೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ದಷ್ಟು ಬಿಜೆಪಿಯವರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಬಿಅರ್ ತಿಳಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯಲ್ಲಿ ಅದರಲ್ಲೂ ಆಳಂದ ತಾಲೂಕಿನ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸಿದ್ದರಾಮ ಪ್ಯಾಟಿ, ಗಣೇಶ ಪಾಟೀಲ್ ಇದ್ದರು.
ನಾವ್ಯಾರು ತಾಲಿಬಾನ್​ಗಳಲ್ಲ..ಉರಿಗೌಡ, ನಂಜೇಗೌಡ ವಾಸ್ತವಿಕ ಸತ್ಯ ಮನವರಿಕೆ ಮಾಡಿಕೊಡುತ್ತೇವೆ; ಸಿಟಿ ರವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
