ಉಡುಪಿ:ಖಾಸಗಿ ಬಸ್​ವೊಂದು ಇಲ್ಲಿನ ತಾಲೂಕು ಪಂಚಾಯಿತಿ ಕಟ್ಟಡದತ್ತ ನುಗ್ಗಿದ್ದು, ಸೇವಾಸಿಂಧು ಕಚೇರಿಗೆ ಡಿಕ್ಕಿ ಹೊಡೆದಿದೆ.
ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಖಾಸಗಿ ಬಸ್​ ಸ್ಟಾರ್ಟ್ ಆಗದ ಕಾರಣ ಜರ್ಕ್ ನೀಡಲಾಗಿತ್ತು. ಇಳಿಜಾರಿದ್ದ ಪರಿಣಾಮ ವೇಗವಾಗಿ ಚಲಿಸಿದ ಬಸ್​, ಚಾಲಕನ ನಿಯಂತ್ರಣ ತಪ್ಪಿ ಎದುರಿದ್ದ ತಾಪಂ ಕಟ್ಟಡದತ್ತ ನುಗ್ಗಿತು.
ಬಸ್​ನಲ್ಲಿ ಚಾಲಕನಿದ್ದರೂ ತಾಂತ್ರಿಕ ದೋಷ ಉಂಟಾಗಿ ಬ್ರೇಕ್ ಕೂಡ ಕೆಲಸ ಮಾಡಿಲ್ಲ. ವೇಗವಾಗಿ ಬಂದ ಬಸ್ ಸೇವಾಸಿಂಧು ಕಚೇರಿಗೆ ಡಿಕ್ಕಿ ಹೊಡೆದಿದೆ. ಕಟ್ಟಡದ ಮುಂಭಾಗ ಹಾನಿಯಾಗಿದ್ದು, ಕಚೇರಿ ಒಳಗಿದ್ದ ಕಂಪ್ಯೂಟರ್ ಕೂಡ ಜಖಂ ಆಗಿದೆ.
ಘಟನೆಯಲ್ಲಿ ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾನುವಾರ ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಸೇವಾ ಸಿಂಧು ಕಚೇರಿ ಮುಚ್ಚಿತ್ತು. ಹಾಗಾಗಿ ಅಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.
ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
