ಉಡುಪಿ:ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎರಡು ವರ್ಷಗಳ ಹಿಂದೆ ದೇವಸ್ಥಾನವೊಂದರ ಆವರಣದಲ್ಲಿ ಸಿಕ್ಕ ವೇಣುಗೋಪಾಲ್ ರಾವ್ ಅವರನ್ನು ಆಸಿಫ್ ತನ್ನ ಆಶ್ರಮದಲ್ಲಿ ಸಾಕಿ ಸಲಹಿದರು. ವೃದ್ಧರ ಮನೆಯವರನ್ನು ಸಂಪರ್ಕಿಸಿದಾಗ ಇವರನ್ನು ನೋಡಿಕೊಳ್ಳಲು ಯಾರೂ ಆಸಕ್ತಿ ತೋರಿರಲಿಲ್ಲ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯಲ್ಲಿರುವ ತನ್ನ ಆಪದ್ಬಾಂಧವ ಆಶ್ರಮದಲ್ಲಿ ಇವರನ್ನು ಆಸಿಫ್ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ನಂತರ ಇತ್ತೀಚೆಗೆ ವೇಣುಗೋಪಾಲರಾವ್ ನಿಧನರಾದರು. ಆ ಸಂದರ್ಭದಲ್ಲಿಯೂ ಆಸಿಫ್ ಅವರ ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಅಂತಿಮ ಸಂಸ್ಕಾರ ನಡೆಸಲು ಮನೆಯವರು ಯಾರೂ ಮುಂದೆ ಬರದೆ ಇದ್ದಾಗ ಪೊಲೀಸರಿಂದ ಅನುಮತಿಯನ್ನು ಪಡೆದು ಆಸಿಫ್ ಅವರೇ ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಇದನ್ನೂ ಓದಿ:ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!
ಮೂಲ್ಕಿಯ ಕಾರ್ನಾಡಿನಲ್ಲಿರುವ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನಡೆಸಿಕೊಟ್ಟಿದ್ದಾರೆ. ಬಳಿಕ ಮಲ್ಪೆ ಸಮೀಪದ ವಡಬಾಂಡೇಶ್ವರ ಸಮುದ್ರದಲ್ಲಿ ಚಿತಾಭಸ್ಮವನ್ನು ಹಾಕಿದ್ದಾರೆ ಕರೊನಾ ಸಂದರ್ಭದಲ್ಲಿ ಅನೇಕ ಬಗೆಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆಪತ್ಬಾಂಧವ ಆಸಿಫ್ ಅವರು ಇದೀಗ ವೃದ್ಧ ಬ್ರಾಹ್ಮಣರೊಬ್ಬರ ಅಂತಿಮ ವಿಧಿವಿಧಾನಗಳನ್ನು ನಡೆಸಿ ಸಾಮರಸ್ಯದ ಜೊತೆಗೆ ಮಾನವೀಯತೆಯ ಕೆಲಸ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
‘ರಾಮಮಂದಿರ ನಿರ್ಮಾಣಕ್ಕೆ 500 ವರ್ಷಗಳ ನಂತರ ಬಂದಿದೆ ಮಂಗಳಕರ ಮುಹೂರ್ತ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
