|ರುದ್ರಣ್ಣ ಹರ್ತಿಕೋಟೆಬೆಂಗಳೂರು
ನೆರೆ, ಕರೊನಾ ಹಾಗೂ ಇತರ ಕಾರಣಗಳಿಂದ ರಾಜ್ಯದಲ್ಲಿ ಆದಾಯದ ಕೊರತೆ ಕಾಣಿಸಿಕೊಂಡಿರುವ ಪರಿಣಾಮ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ಕಸರತ್ತು ಆರಂಭಿಸಿದೆ. ಆ ಮೂಲಕ ಸರ್ಕಾರದಲ್ಲಿ ದುಂದುವೆಚ್ಚ ಕಡಿಮೆ ಮಾಡಿ ಆರ್ಥಿಕ ಶಿಸ್ತಿಗೆ ಚೌಕಟ್ಟು ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅನಗತ್ಯ ವೆಚ್ಚವನ್ನು ವರ್ಷದಲ್ಲಿ ಶೇ.5ರಷ್ಟಾದರೂ ಕಡಿಮೆ ಮಾಡುವಂತೆ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೊದಲ ದಿನವೇ ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನ ಯಶಸ್ವಿಯಾದರೆ ಕೋಟ್ಯಂತರ ರೂ.ಗಳ ಉಳಿತಾಯ ಸಾಧಿಸಬಹುದೆಂಬುದು ತಜ್ಞರ ಅಭಿಪ್ರಾಯ.
ಎಷ್ಟಾಗುತ್ತಿದೆ ಅನಗತ್ಯ ವೆಚ್ಚ?:ಸರ್ಕಾರದಲ್ಲಿ ಅನಗತ್ಯ ವೆಚ್ಚವನ್ನು ಸಂಪೂರ್ಣವಾಗಿ ನಿಯಂತ್ರಿಸಿದಲ್ಲಿ ಸುಮಾರು 2500 ರಿಂದ 3000 ಕೋಟಿ ರೂ.ಗಳ ತನಕ ಉಳಿತಾಯ ಸಾಧ್ಯ ಎಂದು ಹಣಕಾಸು ಇಲಾಖೆಯ ಉನ್ನತ ಮೂಲಗಳೇ ಖಚಿತಪಡಿಸುತ್ತವೆ. ಹಿಂದಿನ ಅನೇಕ ಸರ್ಕಾರಗಳ ಅವಧಿಯಲ್ಲಿ ಮಿತವ್ಯಯದ ಪ್ರಯತ್ನ ಮಾಡಿದ್ದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಾಧ್ಯವಾಗಿಲ್ಲ. ಆದ್ದರಿಂದಲೇ ಈಗ ಮೊದಲ ಹಂತದಲ್ಲಿ ಶೇ.5ರಷ್ಟು ಕಡಿಮೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದರಿಂದ ದೊಡ್ಡ ಉಳಿತಾಯ ಸಾಧ್ಯವಾಗದಿದ್ದರೂ, ಆ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟು ಆರ್ಥಿಕ ಶಿಸ್ತು ತರಲು ಸಾಧ್ಯವಾಗುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ರಾಜ್ಯ ಸರ್ಕಾರಕ್ಕೆ ಬದ್ಧ ವೆಚ್ಚಗಳ 89,200 ಕೋಟಿ ರೂ. ಬಹುದೊಡ್ಡ ಹೊರೆ ಇದೆ. ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಹೆಚ್ಚುತ್ತಿದ್ದು ಬಂಡವಾಳ ವೆಚ್ಚ ಕಡಿಮೆಯಾಗುತ್ತಿದೆ.
ಅದರ ಜತೆಗೆ ಜಿಎಸ್​ಟಿ ಪರಿಹಾರದ 11 ಸಾವಿರ ಕೋಟಿ ರೂ.ಬಾಕಿ ಇದೆ. 2023ರಿಂದ ಜಿಎಸ್​ಟಿ ಪರಿಹಾರ ನಿಲ್ಲಲಿದೆ. ಬದ್ಧ ವೆಚ್ಚ ಹೆಚ್ಚುತ್ತ ಹೋಗುತ್ತವೆ. ಆದ್ದರಿಂದ ವೆಚ್ಚ ಕಡಿತ ಅನಿವಾರ್ಯವಾಗಿದೆ. ಹೇಗೆ ಅನಗತ್ಯ ವೆಚ್ಚವಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಸಂಪೂರ್ಣ ಮಾಹಿತಿ ಇದೆ. ಹಿಂದೆ ಅನಗತ್ಯ ವೆಚ್ಚದ ನಿಯಂತ್ರಣಕ್ಕೆ ಸಾಕಷ್ಟು ಆದೇಶಗಳು ಕಾಲಕಾಲಕ್ಕೆ ಹೊರಬಿದ್ದಿವೆ. ಆದರೆ ಸರ್ಕಾರದ ಆದೇಶವನ್ನು ಅಧಿಕಾರಿಗಳೇ ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರಷ್ಟು ಕಟ್ಟುನಿಟ್ಟಾಗಿ ಹಿಂದಿನವರು ಸೂಚನೆ ನೀಡಿರಲಿಲ್ಲ. ಬಹುತೇಕ ತಕ್ಷಣದಿಂದಲೇ ಇವೆಲ್ಲವೂ ಜಾರಿಗೆ ಬರಲಿವೆ.
ಇಲಾಖೆಗಳ ವಿಲೀನ:ಆಡಳಿತ ಸುಧಾರಣೆ ಭಾಗವಾಗಿ ಇಲಾಖೆಗಳ ವಿಲೀನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಡೆದಿರುವ ಚರ್ಚೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ನಿರ್ಧರಿಸ ಲಾಗಿದೆ. ಇದರಿಂದ ಸಿಬ್ಬಂದಿ ಮರು ನಿಯೋಜನೆ ಮಾಡಬಹುದು. ವೆಚ್ಚ ತಗ್ಗಿಸಬಹುದು. ಕೆಲವೊಂದು ಅನಗತ್ಯ ನಿಗಮ, ಮಂಡಳಿಗಳಿದ್ದು ಅವುಗಳನ್ನು ರದ್ದುಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.
ಪ್ರಭಾರ ಹುದ್ದೆಯಲ್ಲಿ ವೇತನ:ಕೆಲ ಅಧಿಕಾರಿಗಳು 2-3 ಇಲಾಖೆಗಳಲ್ಲಿ ಸಮವರ್ತಿ ಪ್ರಭಾರದಲ್ಲಿದ್ದಾರೆ. ಮೂಲ ಇಲಾಖೆಯಲ್ಲಿ ವೇತನ ಪಡೆಯುವುದಲ್ಲದೆ ಪ್ರಭಾರ ಹುದ್ದೆಯ ಮೂಲ ವೇತನದ ಶೇ.15 ವೇತನ ಪಡೆಯುತ್ತಾರೆ. ಇಂತಹ ಪದ್ಧತಿಗೆ ತಡೆ ಹಾಕುವ ಅಥವಾ ಕಡಿಮೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.
ಕಡಿಮೆ ಬಡ್ಡಿದರದ ಸಾಲಕ್ಕೆ ಚಿಂತನೆ:ಸರ್ಕಾರದ ಸಾಲದಲ್ಲಿ ಹೆಚ್ಚು ಬಡ್ಡಿದರದ ಸಾಲ ತೀರಿಸಿ, ಕಡಿಮೆ ಬಡ್ಡಿದರದ ಸಾಲವನ್ನು ಹೆಚ್ಚು ಪಡೆಯುವ ಬಗ್ಗೆಯೂ ಆಲೋಚಿಸುತ್ತಿರುವುದಾಗಿ ತಿಳಿದು ಬಂದಿದೆ.
ನೇಮಕಕ್ಕೆ ತಡೆ:ಹುದ್ದೆಗಳ ನೇಮಕಕ್ಕೆ ಇರುವ ತಡೆಯನ್ನು ಇನ್ನಷ್ಟು ದಿನ ಮುಂದುವರಿಸುವ ಸಾಧ್ಯತೆಗಳಿವೆ. ಸರ್ಕಾರದಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ.45 ಬೋಧಕ ಹಾಗೂ ಶೇ.55 ಬೋಧಕೇತರ ಹುದ್ದೆ ಖಾಲಿ ಇವೆ. ಇದರಿಂದ ಆಡಳಿತ ಸುಗಮ, ಪರಿಣಾಮಕಾರಿಯಾಗಿ ನಡೆಯುವುದು ಕಷ್ಟವೇ ಆಗುತ್ತದೆ ಎಂಬ ಮಾತು ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೇಮಕ ತಡೆ ಮುಂದುವರಿಯಲಿದೆ.
ಅಧಿಕಾರಿಗಳ ಕಾರುಬಾರು:ವೆಚ್ಚ ತಗ್ಗಿಸುವ ಪ್ರಕ್ರಿಯೆಯನ್ನು ಹಿರಿಯ ಅಧಿಕಾರಿ ಗಳಿಂದಲೇ ಆರಂಭಿಸಬೇಕಾಗಿದೆ. ಅನೇಕ ಅಧಿಕಾರಿಗಳು 3-4 ಕಾರುಗಳನ್ನು ಬಳಸುತ್ತಿದ್ದಾರೆ. ಸರ್ಕಾರದ ಕಾರುಗಳನ್ನು ಕುಟುಂಬದವರ ಬಳಕೆಗೂ ನೀಡಿದ್ದಾರೆ. ಇದಕ್ಕೆ ಮೊದಲು ಕಡಿವಾಣ ಹಾಕುವ ಬಗ್ಗೆ ಪ್ರಯತ್ನವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದಲ್ಲಿ ಚಿಂತನೆಯೂ ಇದೆ.

ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ; ಪ್ರಾಧ್ಯಾಪಕನ ಕಾಮಪುರಾಣವನ್ನು ಬಿಚ್ಚಿಟ್ಟ ಪತ್ನಿ
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
