ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20ರಿಂದ 2022-23ರವರೆಗೆ ನಡೆದಿರುವ ಯೋಜನೆಗಳ ಕಾಮಗಾರಿಯಲ್ಲಿ ಆಗಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರಿನ ಸಂಬಂಧ ವಿವರವಾದ ತನಿಖೆ ನಡೆಸಲು ರಚಿಸಲಾಗಿದ್ದ ತನಿಖಾ ಸಮಿತಿಯನ್ನು ಸರ್ಕಾರ ರದ್ದುಪಡಿಸಿದೆ. ಹಾಗೆಯೇ, ಈ ತನಿಖೆಯನ್ನು ನಾಗಮೋಹನ್ ದಾಸ್ ಸಮಿತಿಗೆ ವರ್ಗಾಯಿಸಿದೆ.ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ನಕ್ಷೆ ಮಂಜೂರಾತಿ, ಸ್ವಾಧೀನ ಪತ್ರ ನೀಡುವಿಕೆ, ಕೆರೆ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್‌ಸಿಟಿ ಕಾಮಗಾರಿ, ವಾರ್ಡ್ ಮಟ್ಟದಲ್ಲಿ ನಡೆದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು.ನಾಲ್ಕು ತಜ್ಞರ ಸಮಿತಿ ರಚಿಸಿ, ತನಿಖೆಯೂ ಆರಂಭವಾಗಿತ್ತು. ಈ ನಡುವೆ ಕೋರ್ಟ್ ಮಧ್ಯ ಪ್ರವೇಶಿಸಿ ತಜ್ಞರ ಸಮಿತಿಯ ತನಿಖೆಗೆ ತಡೆಯಾಜ್ಞೆ ನೀಡಿತು.ಅಲ್ಲದೇ, ನಾಗಮೋಹನ್ ದಾಸ್ ತನಿಖಾ ಆಯೋಗ ಹಾಗೂ ತಜ್ಞರ ಸಮಿತಿಯ ತನಿಖೆಯಲ್ಲಿ ಸಾಮ್ಯತೆ ಇರುವುದರಿಂದ ಮುಂದಿನ ತನಿಖೆಯಲ್ಲಿ ನಾಗಮೋಹನ್ ದಾಸ್ ವಿಚಾರಣಾ ಆಯೋಗವೇ ನಡೆಸುವುದೆಂದು ಸರ್ಕಾರ ಅಭಿಪ್ರಾಯಪಟ್ಟು ಆದೇಶ ಹೊರಡಿಸಿದೆ.ಈ ಕೂಡಲೇ ತಜ್ಞರ ಸಮಿತಿಯು ತಮ್ಮ ಸುಪರ್ದಿಯಲ್ಲಿರುವ ಕಡತ, ದಾಖಲೆ, ಮಾಹಿತಿಯನ್ನು ಆಯೋಗಕ್ಕೆ ನೀಡುವಂತೆಯೂ ಸೂಚಿಸಲಾಗಿದೆ.ಅಂದಹಾಗೆ ನಾಗಮೋಹನ್ ದಾಸ್ ಆಯೋಗದ ಅವಧಿಯನ್ನು 2024ರ ಮೇ 24ರ ವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
