ಮಂಗಳೂರು:‘ಮರಳು ಅಕ್ರಮ ಸಾಗಾಣಿಕೆಗೆ ದೇವಿಯೇ ಬ್ರೇಕ್​ ಹಾಕಿದಳಾ?’ ಎಂದು ಅಚ್ಚರಿ ಪಡುವಂಥ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ದೇವಿಪುರದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ ಇಂಥದ್ದೊಂದು ಘಟನೆ ನಡೆದಿದೆ. ಪರಿಣಾಮ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಬ್ರೇಕ್​​ಫೇಲ್​ ಆಗಿ ಪಲ್ಟಿಯಾಗಿ, ಮರಳೆಲ್ಲ ಚೆಲ್ಲಾಪಿಲ್ಲಿ ಆಗಿದೆ.
ಮಂಗಳೂರಿನ ಹೊರವಲಯದ ತಲಪಾಡಿ-ದೇವಿಪುರ ಬಳಿ ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ಆ ಕುರಿತ ಸಿಸಿಟಿವಿ ಇದೀಗ ಬಹಿರಂಗಗೊಂಡಿದ್ದು, ಅಂದಿನ ಘಟನಾವಳಿ ದೃಶ್ಯ ಏನೆಂಬುದು ನಿಖರವಾಗಿ ಕಂಡುಬಂದಿದೆ.
ಕೇರಳಕ್ಕೆ ಮರಳು ಸಾಗಿಸುತ್ತಿದ್ದ ಈ ಲಾರಿ ದೇವಿಪುರ ದೇವಸ್ಥಾನ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಬ್ರೇಕ್​ಫೇಲ್ ಆಗಿದ್ದು, ಏರುರಸ್ತೆಯಾದ್ದರಿಂದ ಅರ್ಧ ಕಿಲೋಮೀಟರ್ ಹಿಂದಕ್ಕೆ ಹಿಮ್ಮುಖವಾಗಿಯೇ ರಭಸದಿಂದ ಬಂದಿದ್ದು, ತೆಂಗಿನಮರವೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಚೆಕ್​​ಪೋಸ್ಟ್​ ಇದ್ದು, ಅಕ್ರಮವಾಗಿ ಮರಳು ಸಾಗಿಸುವವರು ಅವರ ಕಣ್ಣು ತಪ್ಪಿಸಿ ಹೋಗುವ ಸಲುವಾಗಿ ಹೀಗೆ ಒಳದಾರಿಯಲ್ಲಿ ಸಾಗಿಸುತ್ತಿದ್ದಾರೆ. ಈ ಲಾರಿಯವರು ಕೂಡ ಅಂಥದ್ದೇ ಪ್ರಯತ್ನದಲ್ಲಿದ್ದಾಗ ಹೀಗಾಗಿದೆ ಎನ್ನಲಾಗಿದೆ.
ಮರಳು ಅಕ್ರಮ ಸಾಗಾಣಿಕೆಗೆ ದೇವಸ್ಥಾನದ ಎದುರೇ ಬ್ರೇಕ್​?!ವಿವರಗಳಿಗೆhttps://t.co/YaFZZbZDD9ನೋಡಿ..pic.twitter.com/xsN8MyQnuZ
— Vijayavani (@VVani4U)February 25, 2021

ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸೋಷಿಯಲ್ ಮೀಡಿಯಾಕ್ಕೆ ಅಂಕುಶ: ಫಾರ್ವರ್ಡ್ ಸಂದೇಶಗಳ ಮೂಲಕ್ಕೆ ಗಾಳ; ಹೊಸ ಕರಡು ನಿಯಮ ಸಿದ್ಧ

ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 14 =
Remember me
