ಬೆಂಗಳೂರು: ನಕಲಿ ಎನ್-95 ಮಾಸ್ಕ್ ಮಾರಾಟ ಪ್ರಕರಣದಲ್ಲಿ ತಾನೇ ತನಿಖಾಧಿಕಾರಿಯಾಗಿ ಸಹಕರಿಸುವುದಾಗಿ ಆರೋಪಿಯಿಂದ ಹಣವನ್ನು ಸಿಸಿಬಿ ಇನ್​ಸ್ಪೆಕ್ಟರ್ ಆರ್.ಎಂ. ಅಜಯ್ ಸುಲಿಗೆ ಮಾಡಿರುವ ಬಗ್ಗೆ ಕಾಟನ್ ಪೇಟೆ ಠಾಣೆಯಲ್ಲಿ ಸಿಸಿಬಿ ಪೊಲೀಸರ ವಿರುದ್ಧ ದಾಖಲಾಗಿರುವ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಅಪಾರ್ಟ್ ಮೆಂಟ್​ನಲ್ಲಿ ಸೋಂಕಿತನಿದ್ದರೆ 3 ಅಂತಸ್ತು ಮಾತ್ರ ಕ್ವಾರಂಟೈನ್
ವಿಚಾರಣೆಗೆ ಗೈರು
ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ 3 ತಂಡ ರಚಿಸಲಾಗಿದೆ. ಮೇ 25ರಂದು ವಿಚಾರಣೆಗೆ ಹಾಜರಾಗುವಂತೆ ಪ್ರಭುಶಂಕರ್ ಹಾಗೂ ಇಬ್ಬರು ಇನ್​ಸ್ಪೆಕ್ಟರ್​ಗಳಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಗೈರಾಗಿದ್ದು, ಪ್ರಕರಣದಿಂದ ಪಾರಾಗಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮಾ.30ರಂದು ಎಚ್​ಆರ್​ಬಿಆರ್ ಲೇಔಟ್​ನಲ್ಲಿದ್ದ ಮಾಸ್ಕ್ ಮಾರಾಟ ಕಂಪನಿ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಪ್ರಭುಶಂಕರ್ ಮತ್ತು ಇನ್​ಸ್ಪೆಕ್ಟರ್ ಆರ್.ಎಂ. ಅಜಯ್ ನೇತೃತ್ವದ ತಂಡ ದಾಳಿ ನಡೆಸಿ ನಕಲಿ ಮಾಸ್ಕ್​ಗಳನ್ನು ಜಪ್ತಿ ಮಾಡಿತ್ತು. ಆದರೆ, ಸಿಸಿಬಿಯ ಮತ್ತೊಬ್ಬ ಇನ್​ಸ್ಪೆಕ್ಟರ್ ಹನುಮಂತರಾಜು ಕಡೆಯಿಂದ ತಂಡ ಬಾಣಸವಾಡಿ ಠಾಣೆಗೆ ದೂರು ಕೊಡಿಸಿತ್ತು. ಕಂಪನಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ನಂತರ ಇನ್​ಸ್ಪೆಕ್ಟರ್ ಸ್ನೇಹಿತ ಶಾಜಿ ಜಾರ್ಜ್ ಥಾಮಸ್​ನನ್ನು ನಕಲಿ ಮಾಸ್ಕ್ ಆರೋಪಿಗಳು ಸಂರ್ಪಸಿ ಕೇಸ್​ನಲ್ಲಿ ಸಹಾಯ ಮಾಡುವಂತೆ ಕೋರಿದ್ದರು.
ಅದಕ್ಕೆ ಒಪ್ಪಿದ ಥಾಮಸ್, ತನ್ನ ಸ್ನೇಹಿತ ಇನ್​ಸ್ಪೆಕ್ಟರ್ ಅಜಯ್​ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ. 25 ಲಕ್ಷ ರೂ. ಕೊಡಿಸಿದರೆ ಪ್ರಕರಣದಲ್ಲಿ ಸಹಕರಿಸುವುದಾಗಿ ಅಜಯ್ ಭರವಸೆ ನೀಡಿದ್ದ. ಚೌಕಾಸಿ ನಡೆದು ಕೊನೆಗೆ 15 ಲಕ್ಷ ರೂ. ನೀಡಲು ಆರೋಪಿಗಳು ಒಪ್ಪಿದ್ದರು. ಮಾ.31 ರಿಂದ ಏ.9ರವರೆಗೆ ಹಲವು ಕಂತುಗಳಲ್ಲಿ ಇನ್​ಸ್ಪೆಕ್ಟರ್​ಗೆ ಹಣ ಸಂದಾಯವಾಯಿತು. ಹಣ ಪಡೆದಿದ್ದ ಅಜಯ್, ಪ್ರಕರಣದ ತನಿಖಾಧಿಕಾರಿಯಾಗಿ ನೇಮಕಗೊಂಡು ನಕಲಿ ಎನ್-95 ಮಾಸ್ಕ್ ಪ್ರಕರಣದ ತನಿಖೆ ಕೈಗೊಂಡಿದ್ದರು ಎಂದು ಎಫ್​ಐಆರ್​ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ
2 ಹಂತದಲ್ಲಿ ಹಣ: ಮಧ್ಯವರ್ತಿಗಳ ಮೂಲಕ ಎರಡು ಹಂತದಲ್ಲಿ ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು 62.5 ಲಕ್ಷ ರೂ. ಸುಲಿಗೆ ಮಾಡಿದ್ದರು ಎಂಬುದು ಕಾಟನ್​ಪೇಟೆ ಠಾಣೆಯಲ್ಲಿ ಸಿಗರೇಟ್ ವಿತರಕ ಆದಿಲ್ ಅಜೀಜ್ ನೀಡಿರುವ ದೂರಿನಲ್ಲಿ ಬಹಿರಂಗವಾಗಿದೆ. ಎಸಿಪಿ ಪ್ರಭುಶಂಕರ್, ಇನ್​ಸ್ಪೆಕ್ಟರ್​ಗಳಾದ ಅಜಯ್, ನಿರಂಜನ್​ಕುಮಾರ್ ಅವರಿದ್ದ ತಂಡ, ಮಧ್ಯವರ್ತಿಗಳಾದ ಯಲಹಂಕ ಉಪನಗರದ ಭೂಷಣ್ ಮತ್ತು ಬಾಬು ರಾಜೇಂದ್ರಪ್ರಸಾದ್ ಮೂಲಕ ಐಟಿಸಿ ಕಂಪನಿ ಸಿಗರೇಟ್ ವಿತರಕ ಶಾಂತಿನಗರದ ಆದಿಲ್ ಅಜೀಜ್​ನನ್ನು ಸಂರ್ಪಸಿತ್ತು. ಸಿಗರೇಟ್ ಮಾರಾಟಕ್ಕೆ ಸಹಕರಿಸುತ್ತೇವೆ. ಪ್ರತಿ ವಿತರಕರು ತಲಾ 14 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿತ್ತು.
ಸೈಕಲ್ ಮೇಲೆ ಸಿಗರೇಟ್ ಪೂರೈಸುವ 100 ಕೆಲಸಗಾರರು ಅಜೀಜ್ ಹತ್ತಿರವೇ ಇದ್ದಾರೆ. ಲಾಕ್​ಡೌನ್ ವೇಳೆ ಸಿಗರೇಟ್ ಮಾರಾಟ ನಿಷೇಧಿಸಿದ ಪರಿಣಾಮ ಕೆಲಸಗಾರರ ಜೀವನಕ್ಕೆ ತೊಂದರೆಯಾಗಿತ್ತು. ಆದ್ದರಿಂದ ಲಂಚ ನೀಡಲು ಆದಿಲ್ ಒಪ್ಪಿಕೊಂಡಿದ್ದರು. ವಿತರಕರ ಕಡೆಯಿಂದ ಏ.30 ರಂದು 32.5 ಲಕ್ಷ ರೂ. ಹಾಗೂ ಮೇ ಮೊದಲ ವಾರ 30 ಲಕ್ಷ ರೂ. ಸೇರಿ ಒಟ್ಟು 62.5 ಲಕ್ಷ ರೂ. ಪೊಲೀಸರಿಗೆ ತಲುಪಿತ್ತು ಎಂಬುದು ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ
ರಾಜಕಾರಣಿ ಆಪ್ತ
ಸಿಗರೇಟ್ ವಿತರಕರಿಂದ 62 ಲಕ್ಷ ರೂ.ಗಳ ವಸೂಲಿಗೆ ಪ್ರಭುಶಂಕರ್ ಬಳಸಿಕೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಬಾಬು ರಾಜೇಂದ್ರ ಪ್ರಸಾದ್ ರಾಜಕಾರಣಿಯೊಬ್ಬರ ಆಪ್ತನಾಗಿದ್ದಾನೆ. ಯಲಹಂಕ ಠಾಣೆಯ ರೌಡಿಶೀಟರ್ ಆಗಿರುವ ಬಾಬು ತಲೆಮರೆಸಿಕೊಂಡಿದ್ದಾನೆ.
ತನಿಖೆ ಚುರುಕುಗೊಳಿಸಿದ ಎಸಿಬಿ:ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಲಂಚ ಪಡೆದ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಎಸಿಪಿ, ಇಬ್ಬರು ಇನ್​ಸ್ಪೆಕ್ಟರ್​ಗಳ ವಿರುದ್ಧ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಸಾಕ್ಷ್ಯ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ಪ್ರಭುಶಂಕರ್ ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಅವರ ವೈಯಕ್ತಿಕ ವಿಚಾರ ಹಾಗೂ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಅಂಶಗಳು ಅಸ್ಪಷ್ಟವಾಗಿವೆ.
ವಿಚಾರಣೆ ನಡೆಸಿದ ಬಳಿಕವೇ ಡೈರಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರಭುಶಂಕರ್ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಇದರ ಬೆನ್ನು ಬಿದ್ದಿರುವ ಅಧಿಕಾರಿಗಳ ತಂಡ ಇದಕ್ಕೆ ಸಂಬಂಧಿಸಿದ ಸಾಕ್ಷ್ಯ ಕಲೆ ಹಾಕುವಲ್ಲಿ ನಿರತವಾಗಿದೆ.
ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 9 =
Remember me
