ಬೆಂಗಳೂರು:ಭಾವಿ ಪತಿ- ಭಾವಿ ಪತ್ನಿ ಇಬ್ಬರೂ ಮೈಸೂರು ಸೇರಿದಂತೆ ಇನ್ನಿತರ ಸ್ಥಳಗಳಿಗೆ ಮೂರ್ನಾಲ್ಕು ದಿನ ಪ್ರವಾಸಕ್ಕೆ ಹೋಗಿ ಸುತ್ತಾಡಿದರು. ದೆಹಲಿ ಮೂಲದ ಯುವಕನು ಏನೇನೋ ಸಬುಬೂ ಹೇಳಿಕೊಂಡು ಒಂದು ದಿನದ ಮಟ್ಟಿಗೆ ಭಾವಿಪತ್ನಿಯ ಮನೆಯಲ್ಲೇ ಅಂದರೆ ಬೆಂಗಳೂರು ನಿವಾಸದಲ್ಲೇ ಉಳಿದುಕೊಂಡ. ಕೈ ಹಿಡಿಯುವ ಹುಡುಗನೂ ಮನೆಗೆ ಬಂದ ಖುಷಿಯಲ್ಲೇ ನಿದ್ರೆಗೆ ಜಾರಿದ್ದ ಯುವತಿಗೆ ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ 32 ವರ್ಷದ ಯುವತಿ, ಸಹೋದರಿ ಜತೆ ಕನ್ನಮಂಗಲದ ಅಪಾರ್ಟ್​ಮೆಂಟ್​ಮೆಂಟ್​ನಲ್ಲಿ ನೆಲೆಸಿದ್ದಾರೆ. ಮದುವೆ ಮಾಡಿಕೊಳ್ಳಲು ವರನ ಹುಡುಕಲು ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಖಾತೆ ತೆರೆದು ಸ್ವವಿವರ ಅಪ್​ಲೋಡ್​ ಮಾಡಿದ್ದರು. ಇದನ್ನು ಗಮನಿಸಿದ್ದ ದಿಲೀಪ್​ ಕುಮಾರ್​ ದಾಸ್​ ಎಂಬಾತ ಸಂದೇಶ ಕಳುಹಿಸಿದ್ದ. ನನ್ನ ಪುತ್ರ ರೂಪಮ್​ ಕುಮಾರ್​ ದಾಸ್​(33)ಗೆ ಇಷ್ಟವಾಗಿದ್ದೀರಿ ಎಂದು ತಿಳಿಸಿ, ಪುತ್ರನ ಫೋನ್​ ನಂಬರ್​ ಕೊಟ್ಟಿದ್ದ. ಬಳಿಕ ಯುವತಿ ಹಾಗೂ ರೂಪಮ್​ ಕುಮಾರ್​ ಪರಸ್ಪರ ಚಾಟಿಂಗ್​ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
2021ರ ಮೇ ತಿಂಗಳಲ್ಲಿ ಅನಾರೋಗ್ಯದ ನಿಮಿತ್ತ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಹಣದ ಸಮಸ್ಯೆಯಾಗಿದೆ ಎಂದು ಯುವತಿಗೆ ರೂಪಮ್​ ಕುಮಾರ್​ ಹೇಳಿದ್ದ. ಆತನ ಮಾತನ್ನು ನಂಬಿದ್ದ ಯುವತಿ, ಎರಡು ಬಾರಿ ಒಟ್ಟು 1.42 ಲಕ್ಷ ಹಣವನ್ನು ರೂಪಮ್​ ಖಾತೆಗೆ ವರ್ಗಾಯಿಸಿದ್ದಳು. ಸೆಪ್ಟೆಂಬರ್​ನಲ್ಲಿ ಗುವಾಹಾಟಿಗೆ ಹೋಗಿ ರೂಪಮ್​ನನ್ನು ಭೇಟಿಯಾಗಿದ್ದಳು. ಈ ವೇಳೆ ಆತ ಮತ್ತೆ ಹಣ ಕೇಳಿದ್ದು, 23 ಸಾವಿರ ರೂ. ಸಂದಾಯ ಮಾಡಿದ್ದಳು.
ಕಳೆದ ನ.11ರಂದು ಯುವತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ರೂಪಮ್​ ಕುಮಾರ್​ ಬಂದಿದ್ದ. ರೂಪಮ್​ ಕುಮಾರ್​ ಮತ್ತು ಯುವತಿ ಇಬ್ಬರೂ ಮೈಸೂರು ಸೇರಿದಂತೆ ಇನ್ನಿತರ ಸ್ಥಳಗಳಿಗೆ ಮೂರ್ನಾಲ್ಕು ದಿನ ಪ್ರವಾಸಕ್ಕೆ ಹೋಗಿ ವಾಪಸ್​ ಬಂದಿದ್ದರು. ಈ ವೇಳೆ, ‘ಯಲಹಂಕದಲ್ಲಿ ಸಂಬಂಧಿಕರ ಮನೆ ಇದೆ. ಅವರು ನ.20ರ ಬೆಳಗ್ಗೆ ಶಿವನಪೂಜೆ ಹಮ್ಮಿಕೊಂಡಿದ್ದಾರೆ. ಅಲ್ಲಿಗೆ ಹೋಗಬೇಕು’ ಎಂದು ಯುವತಿಗೆ ಆತ ಹೇಳಿದ್ದ. ಹೀಗಾಗಿ ಆಕೆ, ನ.19ರಂದು ರೂಪಮ್​ನನ್ನು ತನ್ನ ಮನೆಗೆ ಕರೆದೊಯ್ದು, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಳು. ಯುವತಿ ಮಲಗುವುದನ್ನೇ ಕಾಯುತ್ತಿದ್ದ ಆತ, ಮನೆಯಲ್ಲಿದ್ದ 7.90 ಲಕ್ಷ ರೂ. ನಗದು, ಲ್ಯಾಪ್​ಟಾಪ್​, ದುಬಾರಿ ಬೆಲೆಯ ಕ್ಯಾಮರಾ, ಕ್ಯಾಮರಾ ಲೆನ್ಸ್​ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿ, ಹೊರಗಿನಿಂದ ಮನೆಯ ಬಾಗಿಲು ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಬೆಳಗ್ಗೆ ಎಚ್ಚರವಾದ ಬಳಿಕ ಯುವತಿಗೆ ಗೊತ್ತಾಗಿದೆ.
ಈ ಕುರಿತು ಪೊಲೀಸ್​ ಠಾಣೆಯಲ್ಲಿ ರೂಪಮ್​ ಕುಮಾರ್​ ದಾಸ್​ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ವೈವಾಹಿಕ ಜಾಲತಾಣದಲ್ಲಿ ಪರಿಚಯ ಆದ ಕೂಡಲೇ ಅವರ ಪೂರ್ವಾಪರ ವಿಚಾರಿಸದೆ ನಂಬಿದ್ರೆ ಏನೆಲ್ಲ ಆಗುತ್ತೆ ಅನ್ನುವುದಕ್ಕೇ ಈ ಪ್ರಕರಣ ಸಾಕ್ಷಿ.
ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 12 =
Remember me
