ಬೆಂಗಳೂರು:ಒಂದು ಸಾವಿರಕ್ಕೂ ಹೆಚ್ಚು ಜನರಿಂದ ವಂಚನೆ ಆರೋಪ ಎದುರಿಸುತ್ತಿರುವ ಬೃಂದಾವನ್​ ಪ್ರಾಪರ್ಟೀಸ್​ ಮಾಲೀಕ, ವಂಚನೆಯ ಹಿಂದಿನ ಕಿಂಗ್​ಪಿನ್​ ದಿನೇಶ್​ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಂಧನದ ಕುರಿತು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿ ದಿನೇಶ್ ಗೌಡ ಅವರನ್ನು ನಿನ್ನೆ ಹಾಸನ ಜಿಲ್ಲೆಯ ಅರಕಲಗೂಡಿನ ಬಳಿ ನಿನ್ನೆ ಬಂಧಿಸಲಾಗಿದೆ. ಬಂಧಿತ ಆರೋಪಿ ತನ್ನ ವಿರುದ್ಧ ಕೇಳಿಬಂದಿರುವ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸುಮಾರು 50 ಕೋಟಿ ರೂಪಾಯಿಯಷ್ಟು ವಂಚನೆ ಆಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಆನ್​ಲೈನ್​ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!
ಆರೋಪಿಯಿಂದ ಸಾವಿರಕ್ಕೂ ಹೆಚ್ಚು ಮಂದಿಗೆ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಂಚನೆಯಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಆರೋಪಿ ನಗರದ ವಿವಿಧೆಡೆ ಸೈಟ್​ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ ಮಾಡಿದ್ದಾರೆ. ಆ ಪೈಕಿ ರಾಜಾಜಿನಗರ ಠಾಣೆಯಲ್ಲೇ 830 ದೂರುಗಳು ದಾಖಲಾಗಿದ್ದು, ಆರೋಪಿಯನ್ನು ರಾಜಾಜಿನಗರ ಪೊಲೀಸರೇ ಬಂಧಿಸಿದ್ದಾರೆ.
ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ

ಪೊಲೀಸ್ ಕೈಗೇ ಕಚ್ಚಿದ ಯುವತಿ; ಚಿಕ್ಕಪೇಟೆಯಲ್ಲಿ ಸಣ್ಣ ವಿಷಯಕ್ಕೇ ನಡೆಯಿತು ದೊಡ್ಡ ರಾದ್ಧಾಂತ!

ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
