ಬೆಂಗಳೂರು:ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನವಾಗಿಡಲು ಮಾಂಸಾಹಾರ (ಬ್ರಾಯ್ಲರ್ ಚಿಕನ್) ಸೇವನೆ ಉತ್ತಮವಾದದ್ದು ಎಂದು ಸುಗುಣ ಫುಡ್ಸ್ ತಿಳಿಸಿದೆ.
ಚಳಿಗಾಲದಲ್ಲಿ ದೇಹದ ಉಷ್ಣಾಂಶದಲ್ಲಿ ಏರಿಳಿತವಾಗುತ್ತದೆ. ಈ ಸಂದರ್ಭದಲ್ಲಿ ಬ್ರಾಯ್ಲರ್ ಚಿಕನ್ ಸೇವನೆ ಮಾಡಿದರೆ ದೇಹದ ಉಷ್ಣಾಶ ಸಮತೋಲವಾಗಿರುತ್ತದೆ. ಹೆಚ್ಚಿನ ಜನರು ಈ ಸಂದರ್ಭದಲ್ಲಿ ಚಿಕನ್ ಸೂಪ್ ಮತ್ತು ಚಿಕನ್ ಸ್ಟೂ್ಯ ಉತ್ತಮ ಆಯ್ಕೆ ಮಾಡುತ್ತಾರೆ. ಅದರ ಜತೆಗೆ ಬ್ರಾಯ್ಲರ್ ಚಿಕನ್ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನಾಂಶಗಳನ್ನು ಹೊಂದಿರುವುದರಿಂದ ಅದು ಉತ್ತಮವಾದದ್ದಾಗಿದೆ. ಬ್ರಾಯ್ಲರ್ ಚಿಕನ್​ನಿಂದ ಸ್ನಾಯು ಕಾರ್ಯಗಳಲ್ಲಿ ಸುಧಾರಣೆ ಕಾಣುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಜತೆಗೆ ಟ್ರಿಪ್ಟೊಫಾನ್ ಎಂಬ ಆಮ್ಲವಿದ್ದು, ಅದು ಖಿನ್ನತೆಯನ್ನು ನಿವಾರಿಸುವ ಸಿರೊಟೋನಿನ್ ಆಗಿ ಪರಿವರ್ತನೆಯಾಗಲಿದೆ. ಇದರಿಂದ ಮನೋಶಕ್ತಿ ಹೆಚ್ಚಲಿದೆ ಎಂದು ಹೇಳಿದೆ. ಬ್ರಾಯ್ಲರ್ ಚಿಕನ್ ಸೇವೆನೆಯಿಂದಾಗುವ ಪ್ರಯೋಜನಗಳ ಕುರಿತು ವಿವರಿಸಿರುವ ಪೌಷ್ಟಿಕ ತಜ್ಞೆ ಡಾ. ಮುತ್ತುಲಕ್ಷ್ಮೀ, ಸಂಧಿವಾತ, ಆಸ್ಟಿಯೊಪೊರೋಸಿಸ್​ನಿಂದ ಬಳಲುತ್ತಿರುವವರು, ಮೂಳೆ ನಷ್ಟದ ಸಮಸ್ಯೆ ಎದುರಿಸುತ್ತಿರುವವರು, ಹೃದಯ ಆರೋಗ್ಯ ಕಾಪಾಡಲು, ಹಲ್ಲುಗಳ ಬಲವರ್ಧನೆಗೆ ಬ್ರಾಯ್ಲರ್ ಚಿಕನ್ ಸಹಕಾರಿಯಾಗಿದೆ. ಬ್ರಾಯ್ಲರ್ ಕೋಳಿ ಉತ್ತಮ ಪೌಷ್ಟಿಕಾಂಶ ಹೊಂದಿದ್ದು, ದೇಹಕ್ಕೆ ಸಾಕಷ್ಟು ಪ್ರಯೋಜನ ನೀಡಲಿದೆ. ಕೋಳಿ ಸೇವನೆಗೂ ಮುನ್ನ ಅದನ್ನು ಹೆಚ್ಚಿನ ತಾಪಮಾನದಲ್ಲಿ ಸ್ವಚ್ಛಗೊಳಿಸಿ, ಬೇಯಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
