ಚಿಕ್ಕಮಗಳೂರು:ತಂಗಿಯ ರಕ್ಷಣೆಗೆ ಬೆಂಗಾವಲಿನಂತಿರಬೇಕಿದ್ದ ಅಣ್ಣನೇ ಕಾಮುಕ ಆದ್ರೆ? ಪಾಪ, ಆಕೆಗಿನ್ನು 13 ವರ್ಷ. ಅಪ್ರಾಪ್ತ ವಯಸ್ಸಿನ ತಂಗಿ ಮೇಲೆ ನಿರಂತರವಾಗಿ ಅಣ್ಣನೇ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರು ಅತ್ಯಾಚಾರವೆಸಗಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಹೇಯ ಕೃತ್ಯ ಬಯಲಾಗಿ ಇನ್ನೂ ಒಂದು ತಿಂಗಳು ಕಳೆದೇ ಇಲ್ಲ. ಇದೀಗ ಮೂಡಿಗೆರೆ ತಾಲೂಕಿನಲ್ಲಿ ಅಣ್ಣನ ಕಾಮಕ್ಕೆ ಮತ್ತೊಬ್ಬ ಬಾಲಕಿ ನಲುಗಿರುವ ಆತಂಕಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಇದನ್ನೂ ಓದಿರಿಮಂಗಳೂರಿನಲ್ಲಿ ರ‍್ಯಾಗಿಂಗ್: ಒಂದೇ ಕಾಲೇಜಿನ 11 ವಿದ್ಯಾರ್ಥಿಗಳು ಅರೆಸ್ಟ್
ಮೂಡಿಗೆರೆ ತಾಲೂಕಿನ ಅರೆಕುಡಿಗೆ ಮಕ್ಕಿಮನೆ ಗ್ರಾಮದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸಂತ್ರಸ್ತೆಯ ಸಹೋದರನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೂಡ ಅಪ್ರಾಪ್ತ ಎಂದು ತಿಳಿದುಬಂದಿದೆ. ಆತನಿಗಿನ್ನೂ 18 ವರ್ಷ ತುಂಬಿಲ್ಲ.
ಬಾಲಕಿ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆಗ ಪಾಲಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿ ಆಗಿರುವುದು ಬೆಳಕಿಗೆ ಬಂದಿದೆ. ಬಾಳೂರು ಪೊಲೀಸ್​ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

ಜೆಡಿಎಸ್​ಗೆ ಮತ್ತೊಂದು ಶಾಕ್​! ಮುಂದಿನ ವಾರವೇ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ

ಆಂಜನೇಯ ದೇಗುಲಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು!

ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
