ರಾಯಚೂರು:‘ತಂಗಿಗೆ ಮೆಸೇಜ್ ಮಾಡ್ಬೇಡ’ ಎಂದು ಬುದ್ಧಿಮಾತು ಹೇಳಿದ ಅಣ್ಣ ಕೊಲೆಯಾಗಿ ಹೋಗಿದ್ದಾನೆ. ರಾಯಚೂರು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರಾಜ್ (23) ಕೊಲೆಗೀಡಾದ ಯುವಕ. ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ:ಹೊಂದಾಣಿಕೆ ಆಗುತ್ತಿಲ್ಲ 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್!
ದೇವರಾಜ್ ತಂಗಿಗೆ ಆರೋಪಿ ಬಸವರಾಜ್ ಆಗಾಗ ಮೆಸೇಜ್ ಮಾಡುತ್ತಿದ್ದುದಲ್ಲದೆ, ಸಿಕ್ಕಸಿಕ್ಕಲ್ಲಿ ಮಾತನಾಡಿಸುತ್ತಿದ್ದ ಹಾಗೂ ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಷಯ ಗೊತ್ತಾಗಿದ್ದರಿಂದ ದೇವರಾಜ್​ ಬಸವರಾಜ್​ಗೆ ಬೈದು ಬುದ್ಧಿಮಾತು ಹೇಳಿದ್ದ.
ಇದನ್ನೂ ಓದಿ:ಪತ್ನಿಗೆ ಇರಿದು ಪರಾರಿಯಾಗಿದ್ದ ಪತಿಯ ಬಂಧನ; ಗಾಯಗೊಂಡಾಕೆಗೆ ಪೊಲೀಸರಿಂದ ರಕ್ತದಾನ
ಬಳಿಕ ಆ ಸೇಡಿಗೆ ಬಸವರಾಜ್ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೇಜ್ ಮಾಡಿಸಿದ್ದ ಎನ್ನಲಾಗಿದೆ. ನಂತರ ದೇವರಾಜ್ ಹಾಗೂ ಆರೋಪಿ ಬಸವರಾಜ್ ಕಡೆಯವರ ಮಧ್ಯೆ ಗಲಾಟೆಯಾಗಿದ್ದು, ಆಗ ದೇವರಾಜ್​ಗೆ ಬಸವರಾಜ್ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಈ ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತಗೂ ಗಾಯವಾಗಿದ್ದು, ಲಿಂಗಸುಗೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಿದ್ಯಾ ಅಕ್ಕಿ ರಾಜಕೀಯ?; ಕಾಂಗ್ರೆಸ್​ಗೆ ಮುನಿರತ್ನ ಸವಾಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
