ಬೆಂಗಳೂರು:ತಂಗಿಯ ಮೇಲಿನ ಅನುಮಾನದಿಂದಾಗಿ ಅಣ್ಣ ಆಕೆಯನ್ನು ಕೊಂದು, ಶವವನ್ನು ಬೆನ್ನ ಮೇಲೆ ಹೊತ್ತೊಯ್ದು, ರೈಲು ಹಳಿಯ ಮೇಲೆ ಮಲಗಿಸಿ ಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ ಶವವನ್ನು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಟೋ ಚಾಲಕ ರವಿಕಿರಣ್ ತಂಗಿಯನ್ನೇ ಕೊಂದ ಆರೋಪಿ. ಆತನ ತಂಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳಂತೆ. ಈ ವಿಚಾರವಾಗಿ ಅಣ್ಣ ತಂಗಿಯ ನಡುವೆ ಜಗಳವಾಗಿದೆ. ಏಪ್ರಿಲ್​ 4ರಂದು ರಾತ್ರಿ ನಡೆದ ಜಗಳ ತಾರಕಕ್ಕೇರಿದ್ದು, ಗಲಾಟೆಯಲ್ಲಿ ತಂಗಿಯನ್ನು ಅಣ್ಣ ಕೊಂದಿದ್ದಾನೆ. ಆಕೆ ತೊಟ್ಟಿದ್ದ ಚೂಡಿದಾರದ ವೇಲಿಂದಲೇ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಲಾಗಿದೆ.
ಕೊಲೆ ಮಾಡಿದ ನಂತರ ಆಕೆಯ ಮೃತದೇಹವನ್ನು ಬೆನ್ನ ಮೇಲೆ ಹೊತ್ತೊಯ್ದು ರೈಲ್ವೆ ಹಳಿಯ ಬಳಿ ಚೀಲದಲ್ಲಿ ತುಂಬಿಟ್ಟು ಹೋಗಿದ್ದ. ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಯ್ಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತಳ ಅಣ್ಣನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ರವಿಕಿರಣ್​ನನ್ನು ಬಂಧಿಸಲಾಗಿದೆ.
ತಂಗಿಯನ್ನು ಕೊಂದು ಶವವನ್ನು ರೈಲು ಹಳಿಯ ಮೇಲೆ ಮಲಗಿಸಿ ಬಂದ ಅಣ್ಣ!ಬೆಂಗಳೂರಿನಲ್ಲಿ ತಂಗಿ ಶೀಲ ಶಂಕಿಸಿ ದುಪ್ಪಟ್ಟದಿಂದ ಕತ್ತು ಬಿಗಿದು ಮರ್ಯಾದೆ ಹತ್ಯೆ ಮಾಡಿದ ಅಣ್ಣ, ಆಟೋ ಚಾಲಕ ಆರ್. ರವಿಕಿರಣ್, ಶವವನ್ನು ಬೆನ್ನ ಮೇಲೆ ಹೊತ್ತೊಯ್ದು ರೈಲು ಹಳಿಯ ಮೇಲೆ ಮಲಗಿಸುತ್ತಿರುವ ದೃಶ್ಯ ಅಪಾರ್ಟ್‌ಮೆಂಟ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.pic.twitter.com/uQdYFaJ1lw
— Vijayavani (@VVani4U)April 6, 2021

68 ಹಲ್ಲುಗಳಿದ್ದರೂ ಮಾಂಸ ಜಗಿಯಲಾಗದ ಮೊಸಳೆ! ಕಾರಣ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + six =
Remember me
