| ಮಣಿಕಂಠ ಆಲೂರು ಚಾಮರಾಜನಗರಬೆಲೆಯಲ್ಲಿ ಏರಿಕೆ, ಇಳಿಕೆ ಏನೇ ಆಗಲಿ ನಿರಂತರವಾಗಿ ಟೊಮ್ಯಾಟೊ ಬೆಳೆಯುತ್ತಿರುವ ಸಹೋದರಿಬ್ಬರು ಈಗ ಕೋಟ್ಯಧಿಪತಿಗಳು!. ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ರಾಜೇಶ್ ಮತ್ತು ನಾಗೇಶ್ ಸ್ವಂತ 2 ಎಕರೆ ಜತೆಗೆ, 10 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡು ಸಂಪೂರ್ಣವಾಗಿ ಟೊಮ್ಯಾಟೊ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಈ ಕುಟುಂಬ ಮೊದಲಿಗೆ ಸ್ವಂತ ಜಮೀನಿನಲ್ಲಿ ಮಳೆ ಆಶ್ರಿತ ಬೆಳೆ ಬೆಳೆದು ಜೀವನ ಸಾಗಿಸುತ್ತಿತ್ತು. ಬಳಿಕ ಸಹೋದರರು ಎಸ್​ಎಸ್​ಎಲ್​ಸಿ ಮುಗಿಸಿ, ಕಾಲೇಜು ಮೆಟ್ಟಿಲು ಏರದೆ ಕೃಷಿ ಮಾಡುವ ನಿರ್ಧಾರ ಕೈಗೊಂಡರು.
3-4 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಹೋದರರು ಟೊಮ್ಯಾಟೊ ಬೆಳೆಯುವುದನ್ನೇ ರೂಢಿಯಾಗಿಸಿಕೊಂಡಿದ್ದಾರೆ. 2 ವರ್ಷಗಳ ಹಿಂದೆ ಟೊಮ್ಯಾಟೊ ಬೆಲೆ ಕಡಿಮೆ ಇದ್ದ ಕಾರಣ ಅಷ್ಟೇನೂ ಲಾಭ ಸಿಕ್ಕಿರಲಿಲ್ಲ. ಹಿಂದಿನ ವರ್ಷವೂ ಖರ್ಚು ಸಿಕ್ಕಿತ್ತೇ ಹೊರತು ಲಾಭ ಕಂಡಿರಲಿಲ್ಲ. ಆದರೂ ಟೊಮ್ಯಾಟೊ ಬೆಳೆಯುವುದನ್ನು ನಿಲ್ಲಿಸದ ಸಹೋದರರು ಜೂನ್​ನಲ್ಲಿ ಸಂಪೂರ್ಣ 12 ಎಕರೆ ಜಮೀನಿನಲ್ಲೂ ಸುಮಾರು 80 ಸಾವಿರ ಪೈರನ್ನು ನಾಟಿ ಮಾಡಿದ್ದರು. ಬಿಸಿಲಿನಿಂದಾಗಿ 20-30 ಸಾವಿರ ಗಿಡಗಳು ಒಣಗಿಹೋದವು. ಉಳಿದ 50 ಸಾವಿರ ಗಿಡಗಳಿಂದ ಈಗಾಗಲೇ 2-3 ಕೊಯ್ಲು ಮಾಡಿದ್ದು, 50-60 ಟನ್ ಟೊಮ್ಯಾಟೊ ಬಂದಿದೆ. ಇದರಿಂದ 40 ಲಕ್ಷ ರೂ. ಸಂಪಾದಿಸಿದ್ದಾರೆ. ಇನ್ನೂ 100-150 ಟನ್ ಟೊಮ್ಯಾಟೊ ಕೊಯ್ಲು ಸಿಗುವ ಸಾಧ್ಯತೆ ಇದ್ದು, ಒಟ್ಟಾರೆ ಸುಮಾರು 2 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದಾರೆ.
ಜಮೀನಿನಲ್ಲೇ ವಾಸ್ತವ್ಯ:ಲಕ್ಷ್ಮೀಪುರ ಗ್ರಾಮದಲ್ಲಿ ಸ್ವಂತ ಮನೆ ಇದ್ದರೂ ಟೊಮ್ಯಾಟೊ ಕಾಯುವ ಸಲುವಾಗಿ ಸಹೋದರರು ಜಮೀನಿನಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. 12 ಎಕರೆ ಪ್ರದೇಶವಾಗಿರುವುದರಿಂದ ಕೊಯ್ಲಿನ ಸಮಯದಲ್ಲಿ ಕಾವಲು ಕಾಯುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಜಮೀನಿನಲ್ಲೇ ಉಳಿಯುವ ಸಹೋದರರು, ತುಂಬ ಕಷ್ಟಪಟ್ಟು ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ. ಬಿಸಿಲು, ಮಳೆ, ರೋಗದ ಸಮಸ್ಯೆಗಳನ್ನು ಹೊರತುಪಡಿಸಿಯೂ 50 ಸಾವಿರ ಗಿಡಗಳು ಉತ್ತಮ ರೀತಿಯಲ್ಲಿ ಫಲ ಕೊಟ್ಟಿವೆ. ಟೊಮ್ಯಾಟೊಗೆ ಪ್ರಸ್ತುತ ಇರುವ ಬೆಲೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಲಾಭ ದೊರೆಯುವ ನಿರೀಕ್ಷೆ ಇದೆ.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಪೋಸ್ಟ್/ಲೈಕ್​ ಮಾಡಿದ್ದಕ್ಕೆ ಸಮಸ್ಯೆಯಾದರೆ ನಿಮ್ಮ ನೆರವಿಗೆ ನಾನಿದ್ದೇನೆ ಎಂದ ಎಲಾನ್​ ಮಸ್ಕ್​: ಯಾರಿಗೆ, ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
