ವಿಜಯಪುರ:ತೋಟದ ಬಾವಿ ಬಳಿ ಸಂಭವಿಸಿದ ದುರಂತವೊಂದರಲ್ಲಿ ಅಣ್ಣ-ತಮ್ಮ ಇಬ್ಬರೂ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.
ಇಂಡಿ ತಾಲೂಕಿನ ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ (20) ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ (18) ಮೃತಪಟ್ಟ ಸಹೋದರರು. ಝಳಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಪ್ರಕರಣದ ದಾಖಲಾಗಿದೆ.
ಇಂದು ತೋಟದ ಬಾವಿಯ ಬಳಿಗೆ ಹೋಗಿದ್ದ ಸಹೋದರರ ಪೈಕಿ ಮುದ್ದುಗೌಡ ಮೋಟಾರ್ ಆನ್ ಮಾಡಿದಾಗ ವಿದ್ಯುತ್ ಶಾಕ್ ತಗುಲಿದೆ. ತಕ್ಷಣ ಅಣ್ಣ ಜೀವ ರಕ್ಷಣೆಗೆ ಧಾವಿಸಿದ ತಮ್ಮ ಶಿವರಾಜ್​, ಅಣ್ಣನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ದುರದೃಷ್ಟವಶಾತ್ ಇಬ್ಬರಿಗೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದ್ದಾರೆ.
ಇಬ್ಬರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ತಂದೆ; ಮಕ್ಕಳಿಬ್ಬರಿಗೂ ಗಾಯ..
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen − three =
Remember me
