ಬೆಂಗಳೂರು:ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್‌ ತುಂಬು ಕುಟುಂಬದ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದೆ. ಈ ಸೀರಿಯಲ್​ನ ಪಾತ್ರಗಳು ಹಾಗೂ ಕಥೆ ಪ್ರೇಕ್ಷಕರಿಗೆ ತುಂಬಾ ಕನೆಕ್ಟ್​​ ಆಗಿತ್ತು. ಆದರೆ ಇದೀಗ ದಿಢೀರ್​ ಅಂತಾ ಹೀರೋ ಬದಲಾವಣೆ ಮಾಡಿ ಹೊಸ ಮುಖದ ಪರಿಚಯ ಮಾಡಿದ್ದಾರೆ.
36 ಮಂದಿ ಇರುವ ಬೃಂದಾವನ ಸೀರಿಯಲ್ ನಲ್ಲಿ ಮುದ್ದು ಮನೆಮಗನಾಗಿ ಕಾಣಿಸಿಕೊಂಡಿದ್ದ ಆಕಾಶ್ ಪಾತ್ರಧಾರಿಯನ್ನು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಮಾಜಿ ಬಿಗ್‌ಬಾಸ್‌ ಸ್ಪರ್ಧಿ, ಗಾಯಕ ವಿಶ್ವನಾಥ್ ಹಾವೇರಿ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನು ಬದಲಾವಣೆ ಮಾಡಲಾಗಿದೆ. ಬೃಂದಾವನ ಸೀರಿಯಲ್ ಗೆ ಟಿಕ್ ಟಾಕ್ ಸ್ಟಾರ್ ವರುಣ್ ಆರಾಧ್ಯ  ನಾಯಕನಾಗಿ ಎಂಟ್ರಿ ನೀಡಿದ್ದು, ಇದು ಅನೇಕರಿಗೆ ಶಾಕಿಂಗ್ ಎನಿಸಿದೆ.
ಬೃಂದಾವನ ಸೀರಿಯಲ್ ಆರಂಭವಾದಾಗಿನಿಂದ ವಿಶ್ವನಾಥ್ ಹಾವೇರಿ ಈ ಪಾತ್ರಕ್ಕೆ ಬಹಳ ಚಿಕ್ಕವರಾಗಿ ಕಾಣ್ತಾ ಇದ್ದಾರೆ ಅಂತ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರೋ ವಯಸ್ಸು ತುಂಬಾ ಚಿಕ್ಕದು. ಹೀರೋಯಿನ್‌ ವಯಸ್ಸು ದೊಡ್ಡದು. ಜೋಡಿಗಳು ಮ್ಯಾಚ್‌ ಆಗಲ್ಲ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಇದೇ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರ ಜಾಗಕ್ಕೆ ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಸೀರಿಯಲ್‌ ನಲ್ಲಿ ಈಗ ಪುಷ್ಪಾ ಮತ್ತು ಆಕಾಶ್ ಮದುವೆ ಸಂಭ್ರಮ ನಡೆಯುತ್ತಿದ್ದು, ಆಕಾಶ್ ಪಾತ್ರಕ್ಕೆ ವರುಣ್‌ ಆರಾಧ್ಯ ಎಂಬ ಯುವಕನನ್ನು ಹೀರೋ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತಾಗಿ ಹೊಸ ಪ್ರೋಮೋ ರಿಲೀಸ್‌ ಮಾಡಿದೆ.ಹೊಸ ಹೀರೋವನ್ನು ಒಪ್ಪಿಕೊಳ್ಳಲು ಕಷ್ಟವೆಂದು ವೀಕ್ಷಕರು ಹೇಳಿದ್ದು, ಸೋಷಿಯಲ್‌ ಮೀಡಿಯಾ ಮೂಲಕವಾಗಿ ಕೆಲವು ವೀಕ್ಷಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸೀರಿಯಲ್​ನ ಮುಖ್ಯ ಪಾತ್ರವಾಗಿರುವ ಆಕಾಶ್​​ ಪಾತ್ರವನ್ನು ನಿರ್ವಹಿಸುತ್ತಿರುವ ವರುಣ್ ಆರಾಧ್ಯ ನಟನೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪುರುಷರಿಗೆ ಡಬಲ್‌ ಧಮಾಕಾ; ವಿಶ್ವ ಪುರುಷರ ದಿನ… ವಿಶ್ವಕಪ್‌ ಫೈನಲ್‌ ಒಂದೇ ದಿನ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
