ಬೆಂಗಳೂರು:ಶಿವಮೊಗ್ಗಕ್ಕೆ ತೆರಳಿ, ಹಿಂತಿರುಗುತ್ತಿದ್ದಂತೆ ಚುನಾವಣೆಯ ದೃಷ್ಟಿಯಿಂದ ಪ್ರವಾಸ ಆರಂಭಿಸುತ್ತೇನೆ. ಈಗಾಗಲೇ ಚುನಾವಣೆ ಸಂಬಂಧ ಅಮಿತ್ ಷಾ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ ಎಂದು ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಹೇಳಿದ್ದಾರೆ.
ಇದನ್ನೂ ಓದಿ:ನಾಟಕದ ಮಾತಿಗೆ ಜನ ಮರುಳಾಗುವುದಿಲ್ಲ;ಶಾಸಕ ಎಂ. ಸತೀಶ್ ರೆಡ್ಡಿ
ಬೆಂಗಳೂರಿನಲ್ಲಿ ಸುದ್ದಿಗಾರರೊಂಗೆ ಬಿಎಸ್​​ವೈ ಮಾತನಾಡುತ್ತಾ, ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುವುದರ ಬಗ್ಗೆ ಅಮಿತ್ ಷಾ ಅವರು ಸಾಕಷ್ಟು ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರಲಿದ್ದಾರೆ. ಈ ಬಾರಿ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ 130 ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಇದನ್ನೂ ಓದಿ:ಕಳುವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ಕಿಟ್ ಪತ್ತೆ; ಬೆಂಗಳೂರಿನಲ್ಲಿ ಇಬ್ಬರ ಬಂಧನ
ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣಿ ಬಳಿಕ ಕ್ಷೇತ್ರ ವಿಸ್ತಾರಕರು ಆಯಾ ವಿಧಾನಸಭೆ ಕ್ಷೇತ್ರದ ‘ಗ್ರೌಂಡ್ ರಿಪೋರ್ಟ್’ ಅಮಿತ್ ಷಾ ಮುಂದಿಟ್ಟಿದ್ದಾರೆ. ಪ್ರಮುಖ ನಾಯಕರೊಂದಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಕ್ಷೇತ್ರ ವಿಸ್ತಾರಕರ ಸಭೆ ನಡೆಸಿದ ಷಾ, ಪ್ರತಿಯೊಂದು ಕ್ಷೇತ್ರದ ವಸ್ತುಸ್ಥಿತಿ ವರದಿ ಪಡೆದು ಪರಿಶೀಲಿಸಿದ್ದಾರೆ. ಬೇರೆ ರಾಜ್ಯಗಳಿಂದ ನಿಯುಕ್ತರಾಗಿರುವ 54 ಜನ ವಿಸ್ತಾರಕರು ‘ಗ್ರೌಂಡ್ ರಿಪೋರ್ಟ್’ ಸಲ್ಲಿಸುವ ಜತೆಗೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಲವರ ಬದಲಾವಣಿ, ಹೊಸ ಪ್ರಯೋಗ, ಹೊಸಮುಖಗಳಿಗೆ ಅವಕಾಶ ಲಭಿಸಿದ್ದರ ಬಗ್ಗೆ ಪಕ್ಷಕ್ಕೆ ಪ್ಲಸ್, ಮೈನಸ್ ಪಾಯಿಂಟ್‌ಗಳನ್ನು ಕ್ಷೇತ್ರ ವಿಸ್ತಾರಕರು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
