ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ& ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ನಡುವಿನ “ವಿಶ್ವಾಸ’ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕುತೂಹಲದ ಚರ್ಚೆಯ ಸರಕಾಗಿದೆ. ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗೆ ಕೌಂಟರ್​ ಕೊಡುವ ರೀತಿ ಬಿಎಸ್​ವೈ ಜೆಡಿಎಸ್​ ಸಖ್ಯ ಬೆಳೆಸಿದ್ದು, ವಿರೋಧಿಗಳಿಗೆ ಚುರುಕು ಮುಟ್ಟಿಸಿದ್ದಾರೆ.
| ಶಿವಾನಂದ ತಗಡೂರುಬಿಜೆಪಿಯೊಳಗೆ “ನಾಯಕತ್ವ’ ವಿಚಾರ ಮುನ್ನೆಲೆಗೆ ಬಂದು, ಬಿಎಸ್​ವೈ ಬದಲಾವಣೆ ಕುರಿತು ಚರ್ಚೆಗಳು ಸೃಷ್ಟಿಯಾದ ಬೆನ್ನಲ್ಲೇ ಮಧ್ಯ ಪ್ರವೇಶಿಸಿದ ವರಿಷ್ಠರು, “ಸಿಎಂ ಬದಲಾವಣೆ ಇಲ್ಲ’ ಎಂದು ಸ್ಪಷ್ಟ ಸಂದೇಶ ನೀಡಿದ್ದರು. ಇತ್ತ ಬಿಎಸ್​ವೈ ಕೂಡ ತಾವೇ 2 ವರ್ಷ ಸಿಎಂ ಎಂದು ಹೇಳಿಕೊಂಡಿದ್ದರು. ಆದರೂ ಅಸಮಾಧಾನಿತರು ತಣ್ಣಗಾಗಿಲ್ಲ. ಇದೇ ಕಾರಣಕ್ಕೆ ಜೆಡಿಎಸ್​ ವರಿಷ್ಠರಿಗೆ ಬಿಎಸ್​ವೈ ಹತ್ತಿರವಾಗುತ್ತಿದ್ದಾರೆಂಬ ಮಾತು ಕೇಳಿಬಂದಿದೆ. ಒಂದು ವೇಳೆ ವರಿಷ್ಠರು ಕೈಕೊಟ್ಟರೆ, ಗೌಡರ ಸಖ್ಯ ಸಾಧಿಸಿಬಿಡಬಹುದು ಎಂಬ ಲೆಕ್ಕಾಚಾರದಲ್ಲೇ ಬಿಎಸ್​ವೈ ಹಳೇ ನೆಂಟರೊಂದಿಗೆ ಹೊಸ ಸಂಬಂಧ ಬೆಳೆಸುವ ಪೀಠಿಕೆ ಹಾಕಿದ್ದಾರೆನ್ನಲಾಗಿದೆ.
ದೇವೇಗೌಡ & ಬಿಎಸ್​ವೈ ನಡುವೆ ದ್ವೇಷ & ಪ್ರೀತಿಯ ರಾಜಕಾರಣ ಹೊಸತೇನಲ್ಲ. ಆದರೆ ಹಾಸನ ಪ್ರವಾಸದ ವೇಳೆ ಶಾಸಕ ಎಚ್​.ಡಿ.ರೇವಣ್ಣ ಮೇಲೆ ಸಿಎಂ ಪ್ರೀತಿ ತೋರಿಸಿ ವೇದಿಕೆಗೆ ಕರೆದು ಪಕ್ಕದಲ್ಲಿಯೇ ಕೂರಿಸಿಕೊಳ್ಳುವ ಮೂಲಕ ಗೌಡರ ಕುಟುಂಬದ ಮೇಲೆ ಔದಾರ್ಯ ತೋರಿರುವುದು ಜೆಡಿಎಸ್​ನಲ್ಲಿಯೂ ಸಂಚಲನ ತರಿಸಿದೆ. ಹಾಸನದ ವಿಮಾನ ನಿಲ್ದಾಣ ಕಾಮಗಾರಿಯನ್ನು ಗೌಡರು ಯಾರಿಗೆ ಹೇಳುತ್ತಾರೋ ಅವರಿಗೆ ಕೊಡಲಾಗುವುದು ಎಂದು ಸ್ಪಷ್ಟ ಮಾತಿನಲ್ಲಿಯೇ ಹೇಳಿ ಎದುರಾಳಿಗಳಿಗೆ ದಿಟ್ಟ ಉತ್ತರವನ್ನು ಸಿಎಂ ನೀಡಿದ್ದಾರೆ.
ಬಿಎಸ್​ವೈ ಲೆಕ್ಕಾಚಾರವೇನು?ನಿತ್ಯ ಸವಾಲುಗಳ ವಿರುದ್ಧವೇ ಯಡಿಯೂರಪ್ಪ ಈಜುವ ಸ್ಥಿತಿ ಇದೆ. ಹೊರಗಿನ ಸಮಸ್ಯೆಗಳಿಗಿಂತ, ಪಕ್ಷದೊಳಗಿನ ಹಿತ ಶತ್ರುಗಳ ಕಾಟವೇ ಹೆಚ್ಚಾಗಿದೆ. ರಾಜ್ಯ ರಾಜಕಾರಣದ ಹುಟ್ಟು ಹಾಕಿ ದೋಣಿ ನಡೆಸುತ್ತಿರುವ ಬಿಎಸ್​ವೈಗೆ ಎಂದಾದರೂ ಜೆಡಿಎಸ್​ ನೆರವು ಬೇಕಾಗಬಹುದು ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈಗಲೇ ವೇದಿಕೆ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ದೇವೇಗೌಡ ಮತ್ತು ಯಡಿಯೂರಪ್ಪ ಒಂದಾದರೆ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆ ಬೇಕಾದರೂ ಮಾಡಬಲ್ಲರು ಎನ್ನುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಒಂದೊಂದೇ ಹೆಜ್ಜೆ ಗೌಡರ ಪಾಳಯಕ್ಕೆ ಹತ್ತಿರವಾಗಿ ವಿಶ್ವಾಸದ ರಾಜಕೀಯಕ್ಕೆ ಮುನ್ನುಡಿ ಬರೆದಿರುವ ಯಡಿಯೂರಪ್ಪ ಅವರಿಗೆ ಆ ಕುಟುಂಬ ಕೂಡ ಅಷ್ಟೇ ವಿಶ್ವಾಸವನ್ನು ತೋರಿಸುತ್ತಿರುವುದೂ ಕೂಡ ರಾಜಕೀಯದಲ್ಲಿ ಬಹು ಚರ್ಚಿತ ವಿಷಯವಾಗಿದೆ.
ದ್ವೇಷದ ರಾಜಕೀಯಕ್ಕೆ ಇತಿಶ್ರೀಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬ ನಡುವೆ ರಾಜಕೀಯ ವಿಷಯದಲ್ಲಿ ಎಣ್ಣೆ& ಸೀಗೆಕಾಯಿ ಸಂಬಂಧವಿದ್ದದ್ದು ಹೊಸತಲ್ಲ. 2008ರ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳ ಅನಿವಾರ್ಯತೆ ಈಗಿಲ್ಲ. ಬಿಎಸ್​ವೈ ಕೂಡ ಮಾಗಿದ ರಾಜಕಾರಣಿಯಾಗಿದ್ದಾರೆ. ಗೌಡರಿಗೂ ಈಗ ಹಗೆತನ ಸಾಧಿಸಿ ಮಾಡಬೇಕಾದ್ದು ಏನೂ ಇಲ್ಲ. ಹಾಗಾಗಿ ಎರಡೂ ಧ್ರುವಗಳು ಒಂದಾಗುತ್ತಿವೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
17ರಂದು ಶಾಸಕರ ಸಭೆಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲಕ್ಕೆ ಕಡಿವಾಣ ಹಾಕುವುದಕ್ಕಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಬರಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಜೂ.16ರ ಸಂಜೆ ಬೆಂಗಳೂರಿಗೆ ಆಗಮಿಸಿ ಸಚಿವರೊಂದಿಗೆ ಮಾತುಕತೆ ನಡೆಸುವರು. ಜೂ.17ರಂದು ಇಡೀ ದಿನ ಮುಕ್ತವಾಗಿಡಲಿದ್ದು, ಪ್ರತಿಯೊಬ್ಬ ಶಾಸಕರೊಂದಿಗೂ ಚರ್ಚಿಸುವರು. ಜೂ.18ರಂದು ಪಕ್ಷದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲಿದ್ದು, ಸಂಜೆ ಪಕ್ಷದ ಕೋರ್​ ಕಮಿಟಿ ಸಭೆಯಲ್ಲಿ ಭಾಗವಹಿಸುವರು. ಅದೇ ದಿನ ದೆಹಲಿಗೆ ವಾಪಸಾಗುವರು.ಖಚಿತಪಡಿಸಿದ ಸಿಎಂ:ಎರಡು ದಿನಗಳ ಜಿಲ್ಲಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಭಾನುವಾರ ಮರಳಿದ ಸಿಎಂ ಬಿ.ಎಸ್​.ಯಡಿಯೂರಪ್ಪ, ಅರುಣ್​ ಸಿಂಗ್​ ರಾಜ್ಯ ಭೇಟಿಯನ್ನು ಖಚಿತಪಡಿಸಿದ್ದಾರೆ. ಅರುಣ್​ ಸಿಂಗ್​ ಅವರ ರಾಜ್ಯ ಪ್ರವಾಸ ನಿರ್ಧಾರವನ್ನು ಸ್ವಾಗತಿಸುವೆ. ಈ ಸಂದರ್ಭದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರು, ಸಂಸದರು, ಶಾಸಕರೊಂದಿಗೆ ಅವರು ಚರ್ಚಿಸಲಿದ್ದಾರೆ. ಅಲ್ಲದೆ, ಪಕ್ಷದ ಸಂಟನಾ ಚಟುವಟಿಕೆಗಳ ಮಾಹಿತಿ ಪಡೆದು ಪರಿಶೀಲಿಸಲಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿಯಾಗಿ ಅವರಿಗಿರುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಸಿಎಂ ತಿಳಿಸಿದರು.ತಲಾ 2 ಜಿಲ್ಲೆಗಳ ಪ್ರವಾಸಕ್ಕೆ ನಿರ್ಧಾರ:ಜಿಲ್ಲಾ ಪ್ರವಾಸಗಳು ಸಕಾರಾತ್ಮಕ, ನಿರೀೆಗೆ ಮೀರಿದ ಲಿತಾಂಶ ನೀಡುತ್ತಿವೆ. ಈ ಕಾರಣಕ್ಕೆ ಇನ್ನು ಮುಂದೆ ಪ್ರತಿ ವಾರ ಅಥವಾ 10&12 ದಿನಗಳಿಗೊಮ್ಮೆ ತಲಾ ಎರಡು ಜಿಲ್ಲೆಗಳ ಪ್ರವಾಸ ಮಾಡಲು ನಿರ್ಧರಿಸಿರುವೆ ಎಂದು ಬಿಎಸ್​ವೈ ತಿಳಿಸಿದರು.ಗೊಂದಲಗಳಿಗೆ ಇತಿಶ್ರೀ ನಿಶ್ಚಿತ: ಸಚಿವ ಡಾ.ಕೆ.ಸುಧಾಕರ್​ ಮಾತನಾಡಿ, ಪಕ್ಷದ ರಾಷ್ಟ್ರೀಯ ನಾಯಕರಾದ ಅರುಣ್​ ಸಿಂಗ್​ ಮುಂದಿನ ವಾರ ರಾಜ್ಯಕ್ಕೆ ಬಂದು ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡಲಿದ್ದಾರೆ. ಗಂಡ&ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತವೆ. ಅಂಥದರಲ್ಲಿ ದೊಡ್ಡ ಪಕ್ಷದಲ್ಲಿ ಇವೆಲ್ಲ ಸಹಜ. ಯಾರ್ಯಾರಿಗೆ ಅಸಮಾಧಾನ ಇದೆಯೋ ಅವರೊಂದಿಗೆ ಅರುಣ್​ ಸಿಂಗ್​ ಮಾತುಕತೆ ನಡೆಸಲಿದ್ದಾರೆ ಎಂದರು. ಯಡಿಯೂರಪ್ಪ ಅವರೇ ಮುಂದಿನ 2 ವರ್ಷ ಸಿಎಂ ಆಗಿರುತ್ತಾರೆ ಎಂದು ಅರುಣ್​ ಸಿಂಗ್​ ಸ್ಪಷ್ಪಪಡಿಸಿದ್ದಾರೆ. ಜತೆಗೆ ಎಲ್ಲ ಹಿರಿಯ ನಾಯಕರು ಇದೇ ಮಾತನ್ನು ಹೇಳಿದ್ದು, ಈ ಬಗ್ಗೆ ಚರ್ಚೆ ಅನವಶ್ಯಕ ಎಂದು ಡಾ.ಕೆ.ಸುಧಾಕರ್​ ತಳ್ಳಿಹಾಕಿದರು. ಯಾರ್ಯಾರಿಗೋ ಏನೇನೋ ಕೆಲಸಗಳಿರುತ್ತವೆ, ಹಾಗಾಗಿ ಅವರು ದೆಹಲಿಗೆ ಹೋಗುತ್ತಾರೆ ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
