ಬೆಂಗಳೂರು:ಕರೊನಾ ಬಂದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶನಿವಾರದಂದು ಲಹರಿ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾ ಆಡಳಿತಗಳೊಂದಿಗೆ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಹೊರಡುವಾಗ ಸಚಿವ ಆರ್ ಅಶೋಕ್ ಜತೆ ಮಾಡಿರುವ ಸಂಭಾಷಣೆ ಇದೀಗ ಚರ್ಚೆಯಾಗುತ್ತಿದೆ.
ಸಿಎಂ ಯಡಿಯೂರಪ್ಪ, ಲಕ್ಷ್ಮಣ್ ಸವದಿ, ಅಶೋಕ್ ಸೇರಿ ಅನೇಕರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದ ಮುಗಿಸಿ ಅಶೋಕ್​ ಅವರು ಹೊರಟಾಗ ಅವರೊಂದಿಗೆ ಮಾತಿಗಿಳಿದ ಬಿಎಸ್​ವೈ, “ಅಶೋಕ್ ಎಲ್ಲಿ ಹೋಗ್ತಾ ಇದ್ದೀಯಾ” ಎಂದು ಕೇಳಿದ್ದಾರೆ. ಅದಕ್ಕೆ ಅಶೋಕ್ ಅವರು ಸರ್, ನಾನು ಲಾಯರ್​ನ ನೋಡಬೇಕು, ಮನೆಗೆ ಹೋಗ್ತೀನಿ ಅಂದಿದ್ದಾರೆ. ಅದಕ್ಕೆ ಸಿಎಂ ಅವರು, “ಏನು.. ನಿನ್‌ಮೇಲೆ ಕೇಸ್ ಹಾಕಿದ್ದಾರಾ..!?” ಎಂದು ನಗುತ್ತಾ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶೋಕ್​ ಅವರು, “ಲಕ್ಷ್ಮಣ ಸವದಿ ಮೇಲೆ ಕೇಸ್ ಹಾಕಬೇಕು, ದಾರಿ ತಪ್ಪುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಯಡಿಯೂರಪ್ಪ ಅವರು “ನಿನ್ನ ಸ್ನೇಹಿತನ ರಕ್ಷಣೆ ಮಾಡೋದು ನಿನ್ನ ಕೆಲಸ ಅಲ್ವಾ..!? ಮಾಡು” ಎಂದು‌ ನಗೆ ಚಟಾಕಿ ಹಾರಿಸಿದ್ದಾರೆ.
ಈ ಸಮಯದಲ್ಲಿ ಯಡಿಯೂರಪ್ಪ, ಅಶೋಕ್​ ಹಾಗೂ ಲಕ್ಷ್ಮಣ್ ಸವದಿ ಮೂವರು ನಕ್ಕಿದ್ದಾರೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಸಿಎಂ ಬಿಎಸ್​ವೈ ನಗೆ ಚಟಾಕಿ ಹಾರಿಸುತ್ತಲೇ ಸವದಿ ಕಾಲೆಳೆದರೆ? ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:10 − ten =
Remember me
