ಬೆಂಗಳೂರು:ಲಾಕ್​ಡೌನ್ ಮುಂಚೆ ಮತ್ತು ನಂತರ ಮಾರಾಟ ಆದ ಬಿಎಸ್4 ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ, ಸಾರಿಗೆ ಇಲಾಖೆಯಿಂದ ಈವರೆಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಹೀಗಾಗಿ ರಾಜ್ಯದಲ್ಲಿ ಈವರೆಗೆ ಬಿಎಸ್4 ವಾಹನಗಳ ನೋಂದಣಿ ಆರಂಭಗೊಂಡಿಲ್ಲ. ವಾಯು ಮಾಲಿನ್ಯ ನಿಯಂತ್ರಣ ಕ್ಕಾಗಿ ದೇಶದೆಲ್ಲೆಡೆ ಬಿಎಸ್4 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಏಪ್ರಿಲ್​ನಿಂದ ಸ್ಥಗಿತಗೊಳಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ ಈ ಮಾದರಿ ವಾಹನಗಳ ಮಾರಾಟಕ್ಕೆ ಅವಕಾಶವಿತ್ತು. ಆದರೆ, ಕರೊನಾ ಸೋಂಕು ಹರಡುವುದನ್ನು ತಡೆಯಲು ಮಾಡಲಾದ ದೇಶವ್ಯಾಪಿ ಲಾಕ್​ಡೌನ್​ನಿಂದಾಗಿ ವಾಹನ ಮಾರಾಟ ಮತ್ತು ವಾಹನಗಳ ನೋಂದಣಿಗೆ ಬ್ರೇಕ್ ಬಿದ್ದಿತ್ತು. ಇದರಿಂದಾಗಿ ಅದಾಗಲೆ ಉತ್ಪಾದಿಸಲಾದ ಬಿಎಸ್4 ವಾಹನಗಳ ಮಾರಾಟಕ್ಕೂ ತೊಡಕುಂಟಾಗಿ, ವಾಹನ ಉತ್ಪಾದನಾ ಸಂಸ್ಥೆಗಳಿಗೆ ಭಾರಿ ನಷ್ಟವುಂಟಾಗಿತ್ತು. ಹೀಗಾಗಿ ಲಾಕ್​ಡೌನ್ ಅವಧಿಯಲ್ಲಿ 10 ದಿನಗಳ ಕಾಲ ಬಿಎಸ್4 ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚಿನ ದ್ವಿಚಕ್ರ, ಕಾರು ಸೇರಿ ಇನ್ನಿತರ ಬಿಎಸ್4 ವಾಹನಗಳು ನೋಂದಣಿಯಾಗಬೇಕಿದೆ. ಅವುಗಳ ನೋಂದಣಿಗೆ ಹೆಚ್ಚುವರಿ ಶುಲ್ಕ ಪಡೆಯುವ ಕುರಿತು ಸುಪ್ರೀಂಕೋರ್ಟ್ ಕೂಡ ಹೇಳಿಲ್ಲ. ಜತೆಗೆ ಸುಪ್ರೀಂಕೋರ್ಟ್ ನೀಡಿದ ಅವಧಿಯ ನಂತರವೂ ಮಾರಾಟ ಮಾಡಲಾದ ವಾಹನಗಳನ್ನು ನೋಂದಣಿ ಮಾಡಬಹುದೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗಾಗಿ ಬಿಎಸ್4 ವಾಹನಗಳ ನೋಂದಣಿ ಕುರಿತಂತೆ ಗೊಂದಲಕ್ಕೊಳಗಾಗಿರುವ ರಾಜ್ಯ ಸಾರಿಗೆ ಇಲಾಖೆ, ಅದನ್ನು ಪರಿಹರಿಸಿಕೊಂಡ ನಂತರ ನೋಂದಣಿಗೆ ಅವಕಾಶ ನೀಡುವ ಕುರಿತು ಆದೇಶ ಹೊರಡಿಸಲಾಗುತ್ತದೆ.
ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
