| ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಬೊಂಬೆಯ ಶ್ರೀಮಂತಿಕೆ ಪ್ರಸ್ತಾಪಿಸಿದ ಬಳಿಕ ಉತ್ತೇಜಿತರಾಗಿದ್ದ ಸಣ್ಣ ಬೊಂಬೆ ಉದ್ಯಮಿಗಳೀಗ, ಪ್ರತಿ ಬೊಂಬೆಗೂ ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ಮುದ್ರೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಕಂಗಾಲಾಗಿದ್ದಾರೆ.
ಬಿಐಎಸ್ ಪ್ರಮಾಣಪತ್ರಕ್ಕೆ ಸಾವಿರಾರು ರೂ. ಖರ್ಚು ಬರಲಿದೆ. ಅರ್ಜಿ ಶುಲ್ಕ, ಉತ್ಪನ್ನಗಳ ಶುಲ್ಕ, ಟೆಸ್ಟ್ ಯಂತ್ರ ಖರೀದಿಸಿ ಪರೀಕ್ಷೆಗೊಳಪಡಿಸಿದ ಬಳಿಕ ಸಂಸ್ಥೆಯವರು ಖುದ್ದು ಘಟಕಗಳಿಗೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಅಂತಿಮವಾಗಿ ಈ ಪ್ರಮಾಣಪತ್ರ ಪಡೆಯಲು ಸ್ಯಾಂಪಲ್ ಟೆಸ್ಟ್ ಸೇರಿ ಪ್ರತಿ ಉತ್ಪನ್ನಕ್ಕೆ 25 ಸಾವಿರ ರೂ.ವರೆಗೂ ಖರ್ಚಾಗಲಿದೆ. ಇದು ಸಣ್ಣ ಪ್ರಮಾಣದ ಬೊಂಬೆ ತಯಾರಕರಿಗೆ ದುಬಾರಿಯಾಗಿ ಪರಿಣಮಿಸಲಿದೆ.
ಜನವರಿ ಗಡುವು:ಪ್ರಮಾಣಪತ್ರಕ್ಕೆ ಮುಂದಿನ ಜನವರಿವರೆಗೂ ಕಾಲಾವಕಾಶವಿದ್ದು, ಅಷ್ಟರಲ್ಲಿ ತಯಾರಿಕಾ ಘಟಕಗಳು ಪ್ರಮಾಣಪತ್ರ ಪಡೆಯಬೇಕಾಗಿದೆ.
ಚನ್ನಪಟ್ಟಣ ತಾಲೂಕಿನಲ್ಲೇ 3 ಸಾವಿರಕ್ಕೂ ಅಧಿಕ ಕುಟುಂಬಗಳು ಸಾಂಪ್ರದಾಯಿಕ ಬೊಂಬೆ ಉದ್ಯಮವನ್ನು ನೆಚ್ಚಿ ಜೀವನ ನಿರ್ವಹಿಸುತ್ತಿವೆ. ಸಣ್ಣ ಯಂತ್ರಗಳನ್ನು ಬಳಸಿ ಸಣ್ಣ ಪ್ರಮಾಣದಲ್ಲಿ ಆಟಿಕೆ ಗೊಂಬೆಗಳನ್ನು ತಯಾರಿಸುತ್ತ ಹೊಟ್ಟೆ ಹೊರೆಯುತ್ತಿದ್ದಾರೆ. ಇದೀಗ, ಎಲ್ಲ ಉತ್ಪನ್ನಗಳಿಗೂ ಬಿಐಎಸ್ ಸರ್ಟಿಫಿಕೇಟ್ ಪಡೆಯಬೇಕೆಂಬ ವಿಚಾರ ಇಲ್ಲಿನ ಕರಕುಶಲಿಗರ ಆತಂಕಕ್ಕೆ ಕಾರಣವಾಗಿದೆ. ಬರುವ ಸಂಪಾದನೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪ್ರಮಾಣಪತ್ರಕ್ಕೆ ಹಣ ತರುವುದು ಎಲ್ಲಿಂದ ಎಂದು ಪ್ರಶ್ನಿಸುತ್ತಾರೆ.
ಬೊಂಬೆ ಉದ್ಯಮಗಳಿಗೆ ಪ್ರಮಾಣಪತ್ರ ಕಡ್ಡಾಯಗೊಳಿಸಿರುವ ನಿರ್ಧಾರದ ಹಿಂದೆ ಚೀನಾಗೆ ಕಡಿವಾಣ ಹಾಕುವ ಉದ್ದೇಶವಿದೆ. ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆಗೆ ಬರುವ ಬೊಂಬೆಗಳಲ್ಲಿ ಶೇ.80 ಬೊಂಬೆ ಚೀನಾದ್ದಾಗಿರುತ್ತದೆ. ಚೀನಾದ ಈ ನಿಯಂತ್ರಣ ತಪ್ಪಿಸುವುದಕ್ಕಾಗಿಯೇ ಪ್ರಧಾನಿ ಮೋದಿ ಬೊಂಬೆ ಉತ್ಪನ್ನಗಳ ಸ್ವಾವಲಂಬನೆಗೆ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಉದ್ದೇಶ ಉತ್ತಮವಾಗಿದ್ದರೂ ಪ್ರಮಾಣಪತ್ರ ಕಡ್ಡಾಯ ನೀತಿ ದೊಡ್ಡ ಉದ್ಯಮಿಗಳಿಗಷ್ಟೇ ಅನುಕೂಲಕರ ಎಂಬ ಅಭಿಪ್ರಾಯವಿದೆ. ಸಣ್ಣ ಉತ್ಪಾದಕರಿಗೆ ಹೊರೆಯಾಗುವುದನ್ನು ಕೇಂದ್ರ ಗಂಭೀರವಾಗಿ ಪರಿಶೀಲಿಸಬೇಕೆಂಬ ಸಲಹೆ ಕೇಳಿಬಂದಿವೆ.
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್) ಉತ್ಪನ್ನಗಳ ಗುಣಮಟ್ಟ ಖಚಿತಪಡಿಸುವ ಕೇಂದ್ರ ಸರ್ಕಾರದ ಸಂಸ್ಥೆ. ಉತ್ಪನ್ನಗಳು ಭಾರತೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಿ ಮುದ್ರೆ ಹಾಕಲಾಗುತ್ತದೆ. ಉತ್ಪನ್ನಗಳ ಗುಣಮಟ್ಟ ಕಾಪಾಡಲು, ವಂಚನೆ ತಡೆಯಲು ಇದು ನೆರವಾಗಲಿದೆ. ಪ್ರತಿ ಉತ್ಪನ್ನಕ್ಕೆ ಪ್ರತ್ಯೇಕವಾಗಿ ಬಿಐಎಸ್ ತೆಗೆದುಕೊಳ್ಳಬೇಕು. ಇಲ್ಲವಾದರೆ, ಆ ಉತ್ಪನ್ನ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಿಲ್ಲದಂತಾಗುತ್ತದೆ.
ಸರ್ಕಾರ ನೀತಿ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸಾಂಪ್ರದಾಯಿಕ ಕಲೆ ನೆಚ್ಚಿಕೊಂಡು ಗುಡಿ ಕೈಗಾರಿಕೆ ನಡೆಸುವವರಿಗೆ ಲಾಭವಿಲ್ಲ. ಇದು ಸಣ್ಣ ಪ್ರಮಾಣದ ಕರಕುಶಲಕರ್ವಿುಗಳ ಮೇಲೆ ನಡೆಸುತ್ತಿರುವ ಗದಾಪ್ರಹಾರವಾಗಲಿದೆ.
|ವೆಂಕಟೇಶ್ಬೊಂಬೆ ಉದ್ಯಮಿ, ಚನ್ನಪಟ್ಟಣ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen + seven =
Remember me
