ಮೈಸೂರು:ಹೆಂಡತಿ ಮುನಿಸಿಕೊಂಡು ಮನೆಬಿಟ್ಟು ಹೋಗಿದ್ದಕ್ಕೆ ಬೇಸರಗೊಂಡ ಪತಿರಾಯ ಮಾಡಿದ ಕಿತಾಪತಿಗೆ ಸ್ಥಳೀಯರೂ ಕೆಲಕಾಲ ಆತಂಕಗೊಂಡಿದ್ದ ಘಟನೆ ವಿದ್ಯಾರಣ್ಯಪುರಂನಲ್ಲಿ ಮಂಗಳವಾರ ಸಂಭವಿಸಿದೆ.
ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್ ಮತ್ತು ಈತನ ಪತ್ನಿ ನಡುವೆ ಇತ್ತೀಚಿಗೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಮುನಿಸಿಕೊಂಡ ಪತ್ನಿ, ಗಂಡ ಬೇಡವೆಂದು ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕಂಗಾಲಾದ ಗೌರಿಶಂಕರ್​, ಆತ್ಮಹತ್ಯೆ ಮಾಡಿಕೊಳ್ಳಲು ಬಿಎಸ್ಎನ್ಎಲ್​ ಟವರ್​ ಏರಿದ. ಇದನ್ನು ಗಮನಿಸಿದ ಸ್ಥಳೀಯರು, ಈ ನಿರ್ಧಾರ ಬೇಡ, ಕೆಳಗೆ ಇಳಿ ಎಂದು ಕೆಳಗಿಳಿಯುವಂತೆ ಮನವೊಲಿಸಿದರೂ ಆತ ಕೇಳಲಿಲ್ಲ.ಇದನ್ನೂ ಓದಿರಿಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ನನ್ನ ಹೆಂಡತಿಯನ್ನು ವಾಪಸ್ ಕರೆಸಿ, ಇಲ್ಲವಾದರೆ ಬಿಎಸ್ಎನ್ಎಲ್​ ಟವರ್​ನಿಂದ ಕೆಳಗೆ ಬಿದ್ದು ಸಾಯುತ್ತೇನೆ ಎಂದು ಗೌರಿಶಂಕರ್​ ಪಟ್ಟು ಹಿಡಿದಿದ್ದ. ಅವಳು ಬರ್ತಿದ್ದಾಳೆ ಕೆಳಗೆ ಇಳಿ ಎಂದು ಸಾರ್ವಜನಿಕರು ಹೇಳಿದರೂ ಆತ ಮಾತ್ರ ಜಗ್ಗಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಕೆಳಗೆ ಬಾ. ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರೂ ಆತ ಒಪ್ಪಲಿಲ್ಲ.
ಸುಮಾರು ಒಂದೂವರೆ ಗಂಟೆ ಕಾಲ ಹರಸಾಹಸಪಟ್ಟ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ಕೊನೆಗೂ ಗೌರಿಶಂಕರ್​ನನ್ನು ಕೆಳಗಿಸುವಲ್ಲಿ ಯಶಸ್ವಿಯಾದರು. ಗೌರಿಶಂಕರ್ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಾಗಿದೆ.
ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
